ಹಾಜಿಗಳಿಗೆ ಮಕ್ಕ-ಮದೀನ ಹರಮ್‍ನಲ್ಲಿ ಸಾವಿರಾರು ವ್ಹೀಲ್ ಚೇರ್ ಗಳು

ಸೌದಿ ಅರೇಬಿಯ, ಆ.9: ಹಜ್‍ಗಾಗಿ ಹರಮ್‍ಗಳಲ್ಲಿ ರೋಗಿಗಳು ನಡೆಯಲು ಸಾಧ್ಯವಿಲ್ಲದವರಿಗೆ ಈ ಸಲ ಸಾವಿರಾರು ವ್ಹೀಲ್ ಚೇರ್ ಗಳ ವ್ಯವಸ್ಥೆ ಮಾಡಲಾಗಿದೆ.

ನೂರಾರು ಸಿಬ್ಬಂದಿಗಳು ಏಕ ಸಮಯದಲ್ಲಿ ಸೇವೆಯಲ್ಲಿ ತೊಡಗಿಸಿ ಕೊಳ್ಳಲಿದ್ದಾರೆ. ಸಾವಿರಾರು ಇಲೆಕ್ಟ್ರಿಕಲ್ ವಾಹನಗಳು ಹರಮ್‍ನಲ್ಲಿವೆ.

40 ಡಿಗ್ರಿಗಿಂತ ಹೆಚ್ಚು ಉಭಯ ಹರಮ್‍ಗಳಲ್ಲಿ ತಾಪಮಾನವಿದೆ. ಹಜ್ ಯಾತ್ರೆಗೆ ಬರುವ ರೋಗಿಗಳಿಗೆ, ವಯಸ್ಸಾದವರಿಗೆ ವ್ಹೀಲ್ ಚೇರೆ ಸೇವೆ ಲಭಿಸಲಿದೆ. ತುಂಬ ಬಸವಳಿದವರಿಗೆ ಇಲೆಕ್ಟ್ರಿಕ್ ವಾಹನಗಳ ಸೇವೆಯೂ ಹರಂನಲ್ಲಿ ಲಭ್ಯವಿದೆ. ವ್ಹೀಲ್ ಚೇರ್ ವಿತರಿಸಲು ಬೇರೆಯೇ ಸ್ಥಳವಿದೆ.

ಮೂರು ಶಿಫ್ಟ್ ಗಳಲ್ಲಿ ಸಾವಿರಾರು ಮಂದಿ ಸೇವೆಗೆ ಲಭ್ಯವಿದ್ದಾರೆ. ಸೂಪರ್‍ವೈಸರ್‍ಗಳು, ಟೆಕ್ನಿಶಿಯಶನ್ಸ್ ಸಹಿತ ಕಚೇರಿ ಕೆಲಸಗಾರರಾಗಿ 168 ಮಂದಿ ಇದ್ದಾರೆ. ವ್ಹೀಲ್ ಚೇರ್‍ಗಳಿಗೆ ಬೇರೆಯೇ ಮಾರ್ಗ ನಿಶ್ಚಯಿಸಲಾಗಿದೆ.

ವ್ಹೀಲ್ ಚೇರೆ ಬಳಸುವವರು ನಿಯಮೋಲ್ಲಂಘಿಸದಂತೆ ನೋಡಿಕೊಳ್ಳಲು ಅಧಿಕಾರಿಗಳು ಇದ್ದಾರೆ. ಹಾಜಿಗಳಿಗೆ ಕಷ್ಟವಿಲ್ಲದೆ ಹಜ್ ವಿಧಿ ವಿಧಾನಗಳನ್ನು ನಿರ್ವಹಿಸಲು ಮುಂದಿನ ದಿನಗಳಲ್ಲಿ ಹೆಚ್ಚುವರಿ ಸೇವಕರು ಕೂಡ ಲಭಿಸಲಿದ್ದಾರೆ.

Check Also

ಮಗನ ಕೊಲೆಗಾರನಿಗೆ ನ್ಯಾಯಾಲಯದಲ್ಲಿ ಜೀವದಾನ ನೀಡಿದ ತಾಯಿ -ತಾಯಿಯ ಮಾತು ಕೇಳಿ-ವಿಡಿಯೋ

Image : USA Today ಮಗನ ಕೊಲೆಗಾರನಿಗೆ ಗರಿಷ್ಟ ಶಿಕ್ಷೆ ಆಗಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಇಲ್ಲೊಬ್ಬರು ತಾಯಿ ತನ್ನ …

Leave a Reply

Your email address will not be published. Required fields are marked *