ಹಜ್: ಈ ಬಾರಿ 75 ಲಕ್ಷ ಝಂಝಂ ಬಾಟ್ಲಿ ವಿತರಣೆ

ಸೌದಿ ಅರೇಬಿಯ, ಆ.8: ಹಜ್‍ಗೆ ಬರುವವರಿಗೆ ಝಂಝಂ ವಿತರಣೆಗಾಗಿ ಯೋಜನೆ ಸಿದ್ಧವಾಗಿದೆ. ಈ ಸಲ 75 ಲಕ್ಷ ಝಂಝಂ ಬಾಟ್ಲಿಗಳು ವಿತರಣೆ ಮಾಡಲಾಗುವುದು. ಭಾರತೀಯರಿಗೆ ಝಂಝಂ ನೀರು ವಿವಿಧ ವಿಮಾನ ನಿಲ್ದಾಣದ ಮೂಲಕ ತಲುಪಿಸಲಾಗುವುದು.

ಇಪ್ಪತ್ತು ಲಕ್ಷ ಹಾಜಿಗಳು ಬಂದಾಗಿದೆ. ಕಳೆದ ಹಜ್ ಕಾಲದಲ್ಲಿ 30 ಲಕ್ಷ ಝಂಝಂ ಬಾಟ್ಲಿಗಳನ್ನು ನೀಡಲಾಗಿದೆ. ಇಪ್ಪತ್ತು ಲಕ್ಷಕ್ಕೂ ಹೆಚ್ಚು ಹಾಜಿಗಳು ಈ ಬಾರಿ ಬರಲಿದ್ದಾರೆ. ಇವರಿಗಾಗಿ 75 ಲಕ್ಷ ಝಂಝಂ ನೀರಿನ ಬಾಟ್ಲಿಗಳನ್ನು ವಿತರಿಸಲಾಗುತ್ತದೆ. ಇದು ಹಂತಹಂತವಾಗಿ ಪೂರ್ಣವಾಗಲಿದೆ.

ಕೇರಳೀಯರ ಝಂಝಂ ನೀರು ನೆಡುಂಬಶೇರಿ ವಿಮಾನ ನಿಲ್ದಾಣಕ್ಕೆ ತಲುಪಿಸಲಾಗುವುದು. ಹಾಜಿಗಳಿಗೆ ಝಂಝಂ ನೀರು ತಲುಪಿಸಲು ಭಾರತದ ವಿವಿಧ ವಿಮಾನ ನಿಲ್ದಾಣಗಳನ್ನು ಬಳಕೆ ಮಾಡಲಾಗುವುದು. ಮಕ್ಕದ ಝಂಝಂ ಪ್ಲಾಂಟ್ ಕಾರ್ಯನಿರತ ಸ್ಥಿತಿಯಲ್ಲಿದೆ.

ಸೌದಿಯೊಳಗಿನ ಹಾಜಿಗಳಿಗೆ ಝಂಝಂ ನೀರು ನೇರವಾಗಿ ಸಂಗ್ರಹಿಸಬಹುದು. ರಮಝಾನ್‍ಗಿಂತ ಮೊದಲು ಝಂಝಂ ಬಾವಿಯ ದುರಸ್ತಿ ಕಾರ್ಯ ಮುಗಿದಿತ್ತು. ಇಲ್ಲಿಂದ ನಾಲ್ಕು ಕಿಲೊಮೀಟರ್ ವ್ಯಾಪ್ತಿಯ ಪ್ಲಾಂಟ್‍ನಲ್ಲಿ ಝಂಝಂ ನೀರು ತುಂಬಿಡಲಾಗುತ್ತದೆ. ಮದೀನಕ್ಕೆ ಝಂಝಂ ವಿವಿಧ ವಾಹನಗಳಲ್ಲಿ ತಲುಪಿಸಲಾಗುವುದು. ಮಕ್ಕದಲ್ಲಿ ಹಾಜಿಗಳಿಗೆ ಕುಡಿಯಲಿಕ್ಕಾಗಿ ಝಂಝಂ ನೀರು ವಿವಿಧ ಕಡೆಗಳಲ್ಲಿ ಸಂಗ್ರಹಿಸಿಡಲಾಗಿದೆ.

Check Also

ಮಕ್ಕದಲ್ಲಿ ನಡೆಯಲು ಕಷ್ಟಪಡುತ್ತಿದ್ದ ಮಹಿಳೆಗೆ ತನ್ನ ಶೂ ನೀಡಿದ ಪೊಲೀಸ್- ವೀಡಿಯೊ ವೈರಲ್

ಸೌದಿ ಅರೇಬಿಯ, ಆ.14: ಮಕ್ಕದಲ್ಲಿ ಭಾರೀ ಉಷ್ಟತೆಯಿದೆ. ಆದ್ದರಿಂದ ರಸ್ತೆಯಲ್ಲಿ ನಡೆಯಲು ಆಗದೆ ಕಷ್ಟ ಅನುಭವಿಸಿದ ಮಹಿಳಾ ಹಾಜಿಯೊಬ್ಬರಿಗೆ ಸೌದಿ …

Leave a Reply

Your email address will not be published. Required fields are marked *