ಇನ್ನು ವಿವಾದಕ್ಕಿಲ್ಲ: ಹಾದಿಯಾ ಶಫಿನ್

ಕಲ್ಲಿಕೋಟೆ, ಮಾ.13: ಇನ್ನು ಮುಂದೆ ತನ್ನ ಹೆಸರಿನಲ್ಲಿ ವಿವಾದ ಸೃಷ್ಟಿಯಾಗುವುದನ್ನು ತಾನು ಬಯಸುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾದಿಯಾ ಶಫಿನ್ ತಿಳಿಸಿದ್ದಾರೆ.

ಸಾಹಿತಿ ಸಚ್ಚಿದಾನಂದನ್, ಗೋಪಾಲ್ ಮೆನೊನ್, ವರ್ಷಾ ಬಶೀರ್ ಮೊದಲಾದವರು ನೀಡಿದ ಬೆಂಬಲವನ್ನು ಅವರು ಸ್ಮರಿಸಿಕೊಂಡಿದ್ದಾರೆ. ಇವರೆಲ್ಲ ತನಗೆ ಬೆಂಬಲ ನೀಡಿದ್ದಾರೆನ್ನುವುದು ತಡವಾಗಿ ಮನವರಿಕೆಯಾಯಿತು ಎಂದು ಹಾದಿಯಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಾಹುಲ್ ಈಶ್ವರ್ ಪೊಲೀಸರ ಕಡೆ ಸೇರಿ ಕೆಲಸ ಮಾಡಿದರು. ಅವರು ತನಗೆ ಭೇಟಿಯಾಗಲು ಇಷ್ಟವಿಲ್ಲದವರನ್ನು ಭೇಟಿಯಾಗುವಂತೆ ಮಾಡಿದರು. ತಾನಿಷ್ಟ ಪಡುವ ಧರ್ಮದಲ್ಲಿ ನಂಬಿಕೆ ಇರಿಸುವ ಸ್ವಾತಂತ್ರ್ಯವನ್ನು ಸುಪ್ರೀಂ ಕೋರ್ಟು ಕೊಟ್ಟಿದೆ.

ಆದರೆ ತನ್ನ ಜೀವನದಲ್ಲಿ ಎರಡು ಪ್ರಧಾನ ವಿಷಯಗಳನ್ನು ಕಳಕೊಂಡೆ, ತಂದೆ ತಾಯಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದಾಗ ಅವರಿಂದ ದೂರವಾಗಿದ್ದೇನೆ. ತನ್ನ ವಿಶ್ವಾಸ ಪ್ರಕಾರ ತನಗೆ ತಂದೆ ತಾಯಿಯೊಂದಿಗೆ ಋಣ ಭಾರವಿದೆ. ಅದನ್ನು ಪೂರೈಸುವೆ ಎಂದು ಹಾದಿಯಾ ಹೇಳಿದರು.

ಕೌನ್ಸಿಲಿಂಗ್ ವೇಳೆ ಹಲವು ಕಿರಿಕಿರಿ ಅನುಭವಿಸಬೇಕಾಗಿ ಬಂತು. ಸನಾತನ ಧರ್ಮ ಕಲಿಸಲು ಬಂದವರ ಮುಂದೆ ಪೊಲೀಸರು ಕೈ ಕಟ್ಟಿ ನಿಂತರು ಎಂದು ಹಾದಿಯಾ ಆರೋಪಿಸಿದರು.

ಮದುವೆಯಾಗಲಿಕ್ಕಾಗಿ ತಾನು ಮತಾಂತರಗೊಳ್ಳಲಿಲ್ಲ. ದೇಶ ವಿರೋಧಿ ಶಕ್ತಿಗಳು ತಂದೆ ತಾಯಿಯನ್ನು ತಪ್ಪು ಹಾದಿಗೆಳೆದಿದೆ. ಇಸ್ಲಾಮಿನ ವಿರೋಧಿ ಶಕ್ತಿಗಳು ಅವರು. ತನ್ನ ಮನೋಸ್ಥಿತಿ ಸರಿಯಿಲ್ಲ ಎನ್ನುವವರೆಗೂ ಅವರು ಚಿತ್ರೀಕರಿಸಿದರು. ಇನ್ನು ಯಾರಿಗೂ ಇಂತಹ ಅನುಭವ ಆಗದಿರಲಿ ಎನ್ನುವುದಕ್ಕಾಗಿ ಈ ಎಲ್ಲ ವಿಷಯವನ್ನು ಬಹಿರಂಗಪಡಿಸಿದೆ ಎಂದು ಹಾದಿಯಾ ಹೇಳಿದರು.

Check Also

ಹರ್ಯಾಣ: ಮುಸ್ಲಿಮರು ಗಡ್ಡ ಬೆಳೆಸಬಾರದು, ನಮಾಝ್ ಮಾಡಬಾರದು- ಪಂಚಾಯತ್ ಆದೇಶ

ರೋಹಟಕ್, ಸೆ. 20: ಬಕ್ರೀನಂದು ಇಲ್ಲಿನ ಟಿಟೌಲಿ ಗ್ರಾಮದಲ್ಲಿ ಗೋ ಹತ್ಯೆಯಾಗಿದೆ ಎಂದು ಮುನಿಸಿಕೊಂಡಿರುವ ಪಂಚಾಯತ್ ಆದೇಶ ಜಾರಿ ಮಾಡಿದ್ದು …

Leave a Reply

Your email address will not be published. Required fields are marked *