ಗುಜರಾತ್‍ನ ಭುಜ್‍ನಲ್ಲಿ ಮುಸ್ಲಿಮ್ ಯುವಕರನ್ನು ಬಂಧಿಸಿ ಪತ್ತೆಯಿಲ್ಲದಂತೆ ಮಾಡುತ್ತಿರುವುದು ಮುಂದುವರಿಯುತ್ತಿದೆ- ವರದಿ

ಅಹ್ಮದಾಬಾದ್, ಸೆ.15: ಗುಜರಾತಿನ ಕಚ್ ಸಮೀಪದ ಭೂಜ್‍ನಲ್ಲಿ ಮುಸ್ಲಿಮ್ ಯುವಕರನ್ನು ಪೊಲೀಸರು ಕರೆದು ಕೊಂಡು ಹೋದ ಬಳಿಕ ಕಾಣೆಯಾಗುತ್ತಿದ್ದಾರೆಂದು ವರದಿಯಾಗಿದೆ.

ಭುಜ್‍ನ ಸರೋಜ್ ನಗರ ಇಲ್ಲಿನ 22 ವರ್ಷದ ಆಶಿಯಾನ ಎಂಬ ಯುವತಿ ತನ್ನ ಕುಟುಂಬದ ವಿರೋಧವನ್ನು ಎದುರಿಸಿ ಮಜೀದ್ ಎಂಬ ಚಾಲಕನನ್ನು ಮದುವೆಯಾದ ಬಳಿಕ ಪೊಲೀಸರು ಮಜೀದ್‍ನನ್ನು ಬಂಧಿಸಿದ್ದರು. ಪೊಲೀಸರು ಕರೆದೊಯ್ದ ಬಳಿಕ ಆಶಿಯಾನ ಈ ವರೆಗೂ ಮಜೀದ್‍ನನ್ನು ನೋಡಿಲ್ಲ.ಭುಜ್‍ನಲ್ಲಿ ಇಂತಹ ಘಟನೆಗಳು ಅನೇಕ ಆಗಿವೆ ಎಂದು ಮಾಧ್ಯಮಗಳ ತನಿಖಾ ವರದಿಗಳು ಬಹಿರಂಗ ಪಡಿಸಿವೆ.

ಪೊಲೀಸರು ಬಂಧಿಸಿದ ಬಳಿಕ ಹಲವಾರು ಮುಸ್ಲಿಮ್ ಯುವಕರು ಕಾಣೆಯಾಗುತ್ತಿದ್ದಾರೆ. ತಮ್ಮ ಮಕ್ಕಳನ್ನು ಬಿಡುಗಡೆಗೊಳಿಸಿ ಎಂದು ಹೆತ್ತವರೆಲ್ಲ ಪೊಲೀಸಧಿಕಾರಿಗಳ ಮುಂದೆ ಅಲೆದಾಡುತ್ತಿರುವುದು ವ್ಯರ್ಥವಾಗುತ್ತಿದೆ.

ಆಶಿಯಾನ ಯಾವುದೇ ಹಿಂದೂ ಯುವತಿಯಲ್ಲ ಮುಸ್ಲಿಂ. ಆದರೆ ಮಜೀದ್‍ನನ್ನು ಅವಳ ಮನೆಯವರು ಒಪ್ಪಿಲ್ಲ. ಮಜೀದ್‍ನನ್ನು ಬಂಧಿಸಿ ಕರೆದೊಯ್ದ ಬಳಿಕ ತಲೆ ತಪ್ಪಿಸಿಕೊಂಡ ಕ್ರಿಮಿನಲ್ ಆತನೆಂದು ಪೊಲೀಸರು ಹೇಳುತ್ತಿದ್ದಾರೆ. ನಂತರ ಎಸ್ಪಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಆಶಿಯಾನ ಕೋರ್ಟಿನಲ್ಲಿ ಹೇಬಿಯಸ್ ಅರ್ಜಿ ಸಲ್ಲಿಸಿದಾಗ ಮಜೀದ್‍ನನ್ನು ಬಂಧಿಸಿದ್ದನ್ನು ಪೊಲೀಸರು ಒಪ್ಪಿಕೊಂಡರು. ಆಶಿಯಾನ ಆತನನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಸುಳ್ಳು ವಾದವನ್ನು ಕೋರ್ಟಿನಲ್ಲಿ ಪೊಲೀಸರು ಮಂಡಿಸಿದ್ದಾರೆ ಎಂದು ಆಶಿಯಾನಳ ವಕೀಲರು ತಿಳಿಸಿದ್ದಾರೆ.

ಇಂತಹದೆ ಇದಕ್ಕೆ ಸಮಾನವಾದ ಘಟನೆಗಳನ್ನು ಭುಜ್‍ನ ಹಲವು ಕುಟುಂಬಗಳು ವಿವರಿಸುತ್ತಿವೆ. ಭುಜ್ ಸಮೀಪದ ಧ್ರೋಬನಾದ ಇಸ್ಮಾಯೀಲ್ ಜುಲೇಫನನ್ನು 1993ರಲ್ಲಿ ಭುಜ್ ಪೊಲೀಸರು ಬಂಧಿಸಿ ಕರೆದು ಕೊಂಡು ಹೋದ ಬಳಿಕ ಮನೆಯವರು ನೋಡೇ ಇಲ್ಲ.

1984ರಲ್ಲಿ ಹಾಜಿ ಜುಮಾವಾಲಿ ಮುಹಮ್ಮದ ಮೋಖ, ಪುತ್ರ ಇಬ್ರಾಹೀಂರನ್ನು ಭುಜ್ ಪೊಲೀಸರು ಬಂಧಿಸಿ ಕರೆದುಕೊಂಡು ಹೋದ ಮೇಲೆ ಏನಾದರೆಂದು ಮನೆಯವರಿಗೆ ಗೊತ್ತಾಗಿಲ್ಲ. ಇವರನ್ನು ಬಂಧಿಸಿ ಎರಡು ದಿವಸ ಆದ ಬಳಿಕ ಇದೇ ಕುಟುಂಬದ ಇಬ್ಬರು ಯುವಕರನ್ನು ಪೊಲೀಸರು ಎನ್‍ಕೌಂಟರ್‍ನಲ್ಲಿ ಕೊಂದು ಹಾಕಿದ್ದರು.

ಆದರೆ ಕುಟುಂಬ ನಾಲ್ವರನ್ನೂ ಪೊಲೀಸರು ಕೊಂದಿದ್ದಾರೆಂದು ಎನ್ನುತ್ತಿದೆ. ಹಾಜಿ ವಾಲಿ ಮುಹಮ್ಮದ್ ಪ್ರಕರಣದಲ್ಲಿ ಮತ್ತು ಇಸ್ಮಾಯೀಲ್ ಪ್ರಕರಣದಲ್ಲಿ ಪೊಲೀಸರು ಕರೆತಂದ ಸಾಕ್ಷಿ ಒಬ್ಬನೇ ಆಗಿದ್ದನು ಎಂದು ಕುಟುಂಬ ಹೇಳುತ್ತಿದೆ. ಇವರದ್ದೆಲ್ಲ ತೀರ ಬಡ ಕುಟುಂಬ. ಈ ಕುಟುಂಬಗಳ ಯುವಕರು ಪೊಲೀಸರು ಬಂಧಿಸಿದ ಬಳಿಕ ಮರೆಯಾಗುತ್ತಿದ್ದಾರೆ.

Check Also

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು, ನ.15: ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ …

Leave a Reply

Your email address will not be published. Required fields are marked *