ಆಹಾರ ಸರಪಳಿ

ಅಲ್ಲಾಹನ ನಿದರ್ಶನಗಳು
@ ಹಾರೂನ್ ಯಹ್ಯಾ

“ಕಾಳು ಮತ್ತು ಗೊರಟನ್ನು ಸೀಳುವವನು ಅಲ್ಲಾಹ್. ಅವನೇ ಸಜೀವಿಯನ್ನು ನಿರ್ಜೀವಿಯಿಂದ ಹೊರ ತೆಗೆಯುತ್ತಾನೆ ಮತ್ತು ನಿರ್ಜೀವಿಯನ್ನು ಸಜೀವಿಯಿಂದ ಹೊರ ತರುವವನಾಗಿರುತ್ತಾನೆ. ಈ ಎಲ್ಲ ಕಾರ್ಯಗಳನ್ನು ಮಾಡುವವನಂತೂ ಅಲ್ಲಾಹ್. ಹೀಗಿರುತ್ತಾ ನೀವೆತ್ತ ದಾರಿತಪ್ಪಿ ಸಾಗುತ್ತಿರುವಿರಿ?”
(ಪವಿತ್ರ ಕುರ್‍ಆನ್: 6: 95)

ಈ ಮೇಲಿನ ಸೂಕ್ತದಲ್ಲಿ ಆಹಾರ ಶೃಂಖಲೆಯ(ಸರಪಳಿ) ಕುರಿತು ವಿಶ್ಲೇಷಿಸಲಾಗಿದೆ. ಆದರೆ 1400 ವರ್ಷಗಳ ಹಿಂದೆ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನಗಳು ಬೆಳವಣಿಗೆಯನ್ನೇ ಪಡೆದು ಕೊಂಡಿರದ ಕಾಲವೊಂದರಲ್ಲಿ ಈ ಸೂಕ್ತವು ಮಾನವರಿಗೆ ವಿವೇಚಿಸಲು ನೀಡುವ ನಿದರ್ಶನಗಳಲ್ಲೊಂದಾಗಿದೆ.

ಸಜೀವಿಗಳು ಸಾವನ್ನಪ್ಪಿದಾಗ ಸೂಕ್ಷ್ಮ ಜೀವಿಗಳು ಅದನ್ನು ತ್ವರಿತವಾಗಿ ಕೊಳೆಸಿ ಬಿಡುತ್ತವೆ. ತದ ನಂತರ ಮೃತ ಜೀವಿಗಳಲ್ಲಿದ್ದ ಜೈವಿಕ ಕಣಗಳು ಮಣ್ಣಿನೊಂದಿಗೆ ಸೇರ್ಪಡೆಗೊಳ್ಳುತ್ತವೆ. ಇದು ಗಿಡ ಮರಗಳಿಗೆ ಪ್ರಾಥಮಿಕ (ಆಹಾರದ) ಪೋಷಕಾಂಶದ ಮೂಲವಾಗುತ್ತವೆ. ತದ ನಂತರ ಮರಗಳಿಂದ ಮಾನವರು ಮತ್ತು ಇತರೆ ಜೀವಿಗಳು ಆಶ್ರಯ ಪಡೆಯುತ್ತವೆ. ಒಂದು ವೇಳೆ ಈ ಸರಪಳಿಯು ಕಾಲಾನುಕ್ರಮವಾಗಿ ನಡೆಯದೇ ಇದ್ದಲ್ಲಿ ಇಂದು ಜೀವಿಗಳ ಅಸ್ತಿತ್ವವನ್ನು ಊಹಿಸಲಿಕ್ಕೂ ಅಸಾಧ್ಯವಾಗುತ್ತಿತ್ತು.

ಎಲ್ಲ ಸಜೀವಿಗಳ ಆಹಾರ ಮತ್ತು ಪೋಷಕಾಂಶಗಳನ್ನು ಪೂರೈಸಲು ಬ್ಯಾಕ್ಟೀರಿಯಾಗಳು ಅತಿ ಪ್ರಮುಖ ಪಾತ್ರ ವಹಿಸುತ್ತದೆ. ಚಳಿಗಾಲದಲ್ಲಿ ಕೆಲವೊಂದು ಪ್ರಾಣಿಗಳು ಮತ್ತು ಮರಗಳಲ್ಲಿನ ಬ್ಯಾಕ್ಟೀರಿಯಾಗಳು ನಿಸ್ತೇಜಗೊಳ್ಳುತ್ತವೆ. ತದ ನಂತರ ಬೇಸಿಗೆಯು ಆರಂಭವಾಗುತ್ತಿದ್ದಂತೆ ಅವುಗಳು ಪುನಃ ಸಜೀವಗೊಳ್ಳುತ್ತವೆ. ಚಳಿಗಾಲದಲ್ಲಿ ಅವುಗಳು ತಮ್ಮ ಜೀವನದ ಅಗತ್ಯತೆಗೆ ಬೇಕಾದ ಪೋಷಕಾಂಶಗಳನ್ನು ಸಂಗ್ರಹಿಸುವಲ್ಲಿ ಕಾಲ ಕಳೆಯುತ್ತವೆ.

ಚಳಿಗಾಲದಲ್ಲಿ ಬ್ಯಾಕ್ಟೀರಿಯಾಗಳು ಸತ್ತ ಪ್ರಾಣಿಗಳು ಮತ್ತು ಮರ ಗಿಡಗಳಿಂದ ಜೈವಿಕ ತ್ಯಾಜ್ಯವನ್ನು ವಿಂಗಡಿಸುತ್ತವೆ ಮತ್ತು ಅದನ್ನು ಪೋಷಕಾಂಶವನ್ನಾಗಿ ಪರಿವರ್ತಿಸುತ್ತವೆ. ವಸಂತ ಋತುವಿನ ಆರಂಭವಾಗುತ್ತಿದ್ದಂತೆ ಮರ ಗಿಡಗಳು ಹಾಗೂ ಕೆಲವು ಜೀವಿಗಳು ಪುನರುಜ್ಜೀವನ ಪಡೆಯುತ್ತವೆ. ಅವುಗಳ ಅಸ್ತಿತ್ವಕ್ಕೆ ಬೇಕಾದ ಜೈವಿಕ ಪೋಷಕಾಂಶಗಳನ್ನು ಬ್ಯಾಕ್ಟೀರಿಯಾಗಳು ಅದಾಗಲೇ ಸಿದ್ಧಪಡಿಸಿರುತ್ತವೆ.

ವಸಂತ ಋತುವಿಗೆ ಮುನ್ನವೇ ಬ್ಯಾಕ್ಟೀರಿಯಗಳು ಈ ಪರಿಸರದಲ್ಲಿನ ಸಮತೋಲನಕ್ಕೆ ಅಗತ್ಯವಾದ ಎಲ್ಲ ರೀತಿಯ ಪೋಷಕಾಂಶಗಳನ್ನು ತಯಾರುಗೊಳಿಸಿರುತ್ತವೆ. ಇದು ಪರಿಸರದಲ್ಲಿನ ಜೀವಿಗಳಿಗೆ ಅಗತ್ಯತೆ ಇರುವಷ್ಟು ಆಹಾರವನ್ನು ಒದಗಿಸಲು ಉಪಯುಕ್ತವಾಗುತ್ತವೆ.
ನಿರ್ಜೀವಿಗಳು ಸಜೀವಿಗಳ ಉಗಮಕ್ಕೆ (ಹುಟ್ಟಿಗೆ) ಕಾರಣೀ ಭೂತವಾಗುವುದನ್ನು ನಮಗೆ ಇಲ್ಲಿ ಕಾಣಬಹುದು.

ಸಜೀವಿಯನ್ನು ನಿರ್ಜೀವಿಯಿಂದ ಹೊರ ತೆಗೆಯುವವನೂ ಮತ್ತು ನಿರ್ಜೀವಿಯನ್ನು ಸಜೀವಿಯಿಂದ ಹೊರ ತರುವವನೂ ಅಲ್ಲಾಹನೇ ಆಗಿರುತ್ತಾನೆ ಎಂಬ ಸೂಕ್ತವು ಅತಿ ನಿರ್ದಿಷ್ಟ ಅಂಶಗಳ ಮೇಲೆ ಬೆಳಕು ಚೆಲ್ಲುತ್ತವೆ. ಮಾನವರಿಗೆ ನೀಡಲಾದ ಅಪೂರ್ವ ಮಾರ್ಗದರ್ಶನ ‘ಪವಿತ್ರ ಕುರ್‍ಆನ್’ ಆಗಿದೆ ಎಂಬುದನ್ನು ಸಣ್ಣ ಸಣ್ಣ ವಿಷಯಗಳಲ್ಲಿಯೂ ಕೂಡ ಅದು ಮಾನವರಿಗೆ ನೀಡಲಾದ ಮಾರ್ಗದರ್ಶನದ ಕುರಿತು ಸಾರಿ ಹೇಳುತ್ತದೆ.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *