ನಾನು ಕೊಲೆಯಾಗಲೂ ಬಹುದು, ಅದರೆ ಹೋರಾಟ ಮುಂದುವರಿಸುವೆ: ಡಾ.ಕಫಿಲ್ ಖಾನ್

ತಿರುವನಂತಪುರಂ, ಮೇ 16: ಗೊರಕ್‍ಪುರ ಮೆಡಿಕಲ್ ಕಾಲೇಜಿನ ಪೀಡಿಯಾಟ್ರಿಷನ್ ಡಾ. ಕಫೀಲ್ ಖಾನ್ ಮಾತಾಡುವಾಗ ತಡವರಿಸುತ್ತಾರೆ. ಆದರೂ ಧೈರ್ಯದಲ್ಲಿಯೇ ಗಟ್ಟಿಯಾಗಿ ಮಾತಾಡುತ್ತಾರೆ. ನಿನ್ನೆ ರಾತ್ರೆ ಜೆಎನ್‍ಯು ವಿದ್ಯಾರ್ಥಿಗಳೊಂದಿಗೆ ತನ್ನ ಅನುಭವವನ್ನು ಹಂಚಲು ಅವರು ಬಂದಿದ್ದರು. ಅವರನ್ನು ವಿದ್ಯಾರ್ಥಿಗಳು ಬಹಳ ಅಭಿಮಾನದಿಂದ ಸ್ವಾಗತಿಸಿದ್ದಾರೆ.

“ನಾನು ಹೀರೊಯಿಸಂ ತೋರಿಸಿಲ್ಲ. ಕಣ್ಣ ಮುಂದೆ ಮಕ್ಕಳು ಸಾಯುತ್ತಿರುವುದು ಕಂಡು ರಕ್ಷಿಸಲು ತನಗೆ ಸಾಧ್ಯವಿರುವುದನ್ನೆಲ್ಲ ಮಾಡಿದೆ. ನನ್ನೊಂದಿಗೆ ನರ್ಸ್‍ಗಳು ವಾರ್ಡ್ ಬಾಯ್‍ಗಳು ಜೂನಿಯರ್ ವೈದ್ಯರುಗಳು ಇದ್ದರು. ಒಂದು ಟೀಮ್ ವರ್ಕ್ ಆಗಿತ್ತು. ಅವರೆಲ್ಲರೂ ಹೀರೊಗಳೇ. ಲಿಕ್ವಿಡ್ ಆಕ್ಸಿಜನ್ ವಿತರಣೆ ಮಾಡುತ್ತಿದ್ದ ಕಂಪೆನಿಗೆ ನೀಡಬೇಕಾದ ಬಾಕಿಯ ಮೊತ್ತವನ್ನು ಪಾವತಿಸುವಲ್ಲಿ ಆದ ಏರುಪೇರು. ಆರೋಗ್ಯ ಸಚಿವರಿಗೂ ವಿವಿಧ ಅಧಿಕಾರಿಗಳಿಗೆ ಕಳುಹಿಸಿದ ಪತ್ರಗಳು, ಇದೆಲ್ಲ ಇದ್ದು ಮಕ್ಕಳು ಆಕ್ಸಿಜನ್ ಇಲ್ಲದೆ ಮೃತರಾದರು.

ಆಡಳಿತದ ವೈಫಲ್ಯ ಇದು. ಸರಕಾರದ ವ್ಯವಸ್ಥೆಯ ಲೋಪವನ್ನು ಎಷ್ಟು ಮುಚ್ಚಿಡಲು ಪ್ರಯತ್ನಿಸಿದರೂ ಇದು ಸತ್ಯವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸ್ಪತ್ರೆ ಸಂದರ್ಶಿಸಲು ಬಂದಾಗ “ನೀನೇನು ಕಫಿಲ್ ಖಾನ್ ನಿನಗೆ ತೋರಿಸಿಕೊಡುತ್ತೇನೆ” ಎಂದರು.

ನಂತರ ನನ್ನ ಜೀವನ ತೀರ ಅಸಹನೀಯವಾಯಿತು. ಎಂಟು ತಿಂಗಳು ನಾನು ಮತ್ತು ನನ್ನ ಕುಟುಂಬ ಅನುಭವಿಸಿದ ಯಾತನೆಗಳನ್ನು ವಿವರಿಸಲು ಮಾತುಗಳಿಲ್ಲ. ನನ್ನ ಸಹೋದರನನ್ನು ಬಂಧಿಸಲಾಯಿತು. ಸಹೋದರಿ, ಅಮ್ಮನನ್ನೂ ಬಂದಿಸುತ್ತೇವೆ ಎಂದು ಬೆದರಿಕೆ ಹಾಕಲಾಯಿತು. ಸಹೋದರನ ಲಕ್ನೊದ ವ್ಯಾಪಾರ ಸಂಸ್ಥೆಯನ್ನು ಮುಚ್ಚಿಸಲಾಯಿತು. ಸ್ಪೆಶಲ್ ಇನ್‍ವೆಸ್ಟಿಗೇಶನ್ ಟೀಮ್ ಮನೆಯಲ್ಲಿ ಡೇರೆ ಹೂಡಿತು. ತನ್ನ ಮಗುವಿಗೆ ಎದೆ ಹಾಲು ಉಣಿಸುವುದಕ್ಕೂ ನನ್ನ ಪತ್ನಿ ಕಷ್ಟಪಟ್ಟರು. ಇದೆಲ್ಲ ನಾನು ಮಕ್ಕಳ ಜೀವ ಉಳಿಸಲು ಪ್ರಯತ್ನಿಸಿದ ಅಪರಾಧಕ್ಕಾಗಿತ್ತು.

ಒಟ್ಟು 63 ಮಕ್ಕಳು ಮೃತ ಪಟ್ಟಿದ್ದಾರೆ. ಇವರಲ್ಲಿ 46 ನವಜಾತ ಮಕ್ಕಳು ಮೃತಪಟಿದ್ದಾರೆ. ಆಡಳಿತ ವೈಫಲ್ಯದಿಂದಾಗಿ ಮಕ್ಕಳು ಸತ್ತಿದ್ದಾರೆ ಎನ್ನುವ ಸತ್ಯವನ್ನು ಅವರು ಅಡಗಿಸಿಟ್ಟರು. ವೈರಲ್ ಆದ ಆ ಫೋಟೊದಲ್ಲಿದ್ದ ನಾನು ಎತ್ತಿಕೊಂಡು ಓಡಿದ ಮಗು ಈಗಲೂ ಆರೋಗ್ಯದಿಂದಿದೆ. ಪೋಷಕರನ್ನು ಇಂಟರ್‍ವ್ಯೂ ಮಾಡಿದ ಜರ್ನಲಿಸ್ಟ್‍ನೊಂದಿಗೆ ಅಂದಿನ ರಾತ್ರೆ ನಡೆದ ಘಟನೆಯನ್ನು ಅವರು ಹೇಳಿದ್ದಾರೆ. ಆದರೆ ಅದನ್ನು ಪ್ರಕಟಿಸಲು ಅವರಿಗೆ ಹೆದರಿಕೆಯಿದೆ. ಇದು ಯೋಗಿಯ ಗೊರಕ್ ಪುರ ಆಗಿದೆ.

ನಾನು ಅಲ್ಲಿಂದ ಓಡಿ ಹೋಗುವುದಿಲ್ಲ. ಅದು ನನ್ನ ನಗರವೂ ಆಗಿದೆ. ಅಲ್ಲಿ ನಿಂತೇ ಹೋರಾಡುವೆ. ಇದು ನಮ್ಮ ಹೋರಾಟವಲ್ಲ. ಮುಂದಿನ ತಲೆಮಾರಿಗಾಗಿರುವ ಹೋರಾಟ ಇದು. ನಮಗೆ ಇಷ್ಟು ಸಹಿಸಬೇಕಾಗಿ ಬಂದರೆ ಮುಂದಿನ ತಲೆಮಾರಿನ ಅವಸ್ಥೆಯನ್ನು ಆಲೋಚಿಸಿ ನೋಡಿರಿ. ಅವರಿಗಾಗಿ ಹೋರಾಡಲೇ ಬೇಕಿದೆ. ನನಗೆ ಸಿಗುವ ಪ್ರೀತಿ ವಿಶ್ವಾಸ ನನಗಿರುವುದಲ್ಲ ಎಂದು ಗೊತ್ತಿದೆ. ನಾಳೆ ಯಾರು ಕಫೀಲ್ ಆಗಬಹುದು. ನಾನು ಕೊಲೆಯಾಗಲೂ ಬಹುದು, ಆದರೆ ಹೆದರುವುದಿಲ್ಲ. ನನ್ನ ಹೋರಾಟವನ್ನು ಮುಂದುವರಿಸುವೆ.

‘ಡರೂಂಗಾ ನಹಿ ಲಡೂಂಗಾ’ ಎಂದು ಕಫಿಲ್ ಮೆ 14ರಂದು ಜೆಎನ್‍ಯು ಕ್ಯಾಂಪಸ್ಸಿನ ಭಗತ್ ಸಿಂಗ್ ಅಂಬೇಡ್ಕರ್ ಸ್ಟೂಡೆಂಟ್ಸ್ ಆರ್ಗನೈಝೇಶನ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಹೇಳಿದರು.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *