ತಲೆ ತಗ್ಗಿಸಲು ನಾವಿಲ್ಲ- ಕಫಿಲ್ ಖಾನ್

ಗೊರಕ್‍ಪುರ, ಜೂ. 13: ಯಾರ ಮುಂದೆಯೂ ತಲೆ ತಗ್ಗಿಸುವುದಿಲ್ಲ ಎಂದು ಗೊರಕ್‍ಪುರ ಬಿಆರ್‍ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಾಜಿ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಕಫಿಲ್ ಖಾನ್ ಹೇಳಿದರು. ಟ್ವಿಟರ್ ಮೂಲಕ ಅವರು ಹೀಗೆ ಹೇಳಿದ್ದಾರೆ. ದೇವನ ದಯೆಯಿಂದ ನಾನು ತಲೆ ತಗ್ಗಿಸುವುದಿಲ್ಲ ಎಂದು ಅವರು ಟ್ವೀಟ್ ಮಾಡಿದರು.

ರವಿವಾರ ರಾತ್ರೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಒಳಗಾದ ಡಾ. ಕಫಿಲ್ ಖಾನ್‍ರ ಸಹೋದರ ಕಾಶೀಫ್ ಜಮೀಲ್ ರ ಕುತ್ತಿಗೆ ಪ್ರವೇಶಿಸಿದ್ದ ಗುಂಡನ್ನು ಶಸ್ತ್ರಕ್ರಿಯೆ ಮೂಲಕ ಹೊರ ತೆಗೆಯಲಾಗಿದೆ. ಗೊರಕ್‍ಪುರದ ಸದರ್ ಆಸ್ಪತ್ರೆಯಿಂದ ಶಸ್ತ್ರಕ್ರಿಯೆ ವರ್ಗಾಯಿಸಲು ಪೊಲೀಸರ ಪ್ರಯತ್ನವನ್ನು ಎದುರಿಸಿ ಅದೇ ಆಸ್ಪತ್ರೆಯಲ್ಲಿ ಕೊರಳಿನ ಗುಂಡನ್ನು ಹೊರತೆಗೆಯಲಾಗಿದೆ. ನಂತರ ಕಫಿಲ್ ಖಾನ್ ಯಾರಿಗೂ ಬಗ್ಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅವರ ಸಹೋದರನಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೊರಕ್‍ಪುರದಲ್ಲಿದ್ದ ಸಮಯದಲ್ಲಿ ಅವರು ವಿಶ್ರಮಿಸಿದ್ದ ಗೊರಕ್‍ನಾಥ ಮಂದಿರ ಸಮೀಪದಲ್ಲಿ ದುಷ್ಕರ್ಮಿಗಳು ಗುಂಡು ಹೊಡೆದಿದ್ದರು.

ರವಿವಾರ ತರಾವೀಹ್ ನಮಾಝ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮರಳುತ್ತಿದ್ದ ಸಮಯದಲ್ಲಿ ಗೊರಕ್‍ನಾಥ್ ಮಂದಿರ ಸಮೀಪದ ಮೇಲ್ಸೇತುವೆಯ ಬಳಿ ಬೈಕ್ ಸವಾರರು ಗುಂಡು ಹೊಡೆದಿದ್ದರು. ಮೂರು ಗುಂಡುಗಳು ಕಫಿಲ್ ಸಹೋದರನ ದೇಹ ಪ್ರವೇಶಿಸಿತ್ತು. ಮೊಟಾರ್ ಸೈಕಲ್‍ನಲ್ಲಿ ಬಂದ ಇಬ್ಬರು ಗುಂಡು ಹಾರಿಸಿದ್ದರು. ಕೂಡಲೇ ಕಾಶಿಫ್‍ರನ್ನು ಗೊರಕ್‍ಪುರ ಸ್ಟಾರ್ ಆಸ್ಪತ್ರೆಗೆ ಪ್ರವೇಶಿಸಲಾಯಿತು. ನಂತರ ತುರ್ತು ಶಸ್ತ್ರಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ಕರೆ ತರಲಾಗಿತ್ತು.

ಆದರೆ, ಅಲ್ಲಿಗೆ ಬಂದ ಗೊರಕ್‍ಪುರ್ ಎಸ್ಸೆಸ್‍ಪಿ ಶಲಭ್ ಠಾಕೂರ್ ಶಸ್ತ್ರಕ್ರಿಯೆಗೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಊರವರು ಮತ್ತು ಕುಟುಂಬ ಸದಸ್ಯರ ಪ್ರತಿಭಟನೆಗೆ ಹೆದರಿ ಶಸ್ತ್ರಕ್ರಿಯೆಗೆ ಅವಕಾಶ ಮಾಡಿ ಕೊಟ್ಟಿದ್ದರು.

ಕೊಲೆ ಯತ್ನದ ವಿರುದ್ಧ ತನಿಖೆ ಆರಂಭಿಸಿದ್ದೇವೆ ಎಂದು ಎಸ್‍ಎಸ್‍ಪಿ ಹೇಳಿದರು. ಸಹೋದರನಿಗೆ ಗುಂಡು ಹೊಡೆದು ಹೆದರಿಸಿದ ಮಾತ್ರಕ್ಕೆ ನಾವು ಗೊರಕ್ ಪುರ ಬಿಟ್ಟು ಹೋಗುವುದಿಲ್ಲ ಎಂದು ಕಫಿಲ್ ಖಾನ್ ಹೇಳಿದರು.; ಗೊರಕ್‍ನಾಥ ಮಂದಿರದಿಂದ 500 ಮೀಟರ್ ದೂರದಲ್ಲಿ ಗುಂಡು ಹಾರಿಸಲಾಗಿತ್ತು.

ಕುಟುಂಬ ಸದಸ್ಯರ ಮೇಲೆ ಅಪಾಯ ಯತ್ನ ನಡೆಯುತ್ತಿದೆ. ಪೊಲೀಸ್ ಸಂರಕ್ಷಣೆ ನೀಡಬೇಕೆಂದು ಕಫಿಲ್‍ರ ತಾಯಿ ನುಸ್ರತ್ ಫರ್ವೀನ್ ಹೇಳಿದರು.

ಗೊರಕ್‍ಪುರ ಬಿಆರ್‍ಡಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮುಗಿದು 63 ಮಕ್ಕಳು ಮೃತಪಟ್ಟ ಸಮಯದಲ್ಲಿ ಸ್ವಂತ ಹಣ ಖರ್ಚು ಮಾಡಿ ಆಕ್ಸಿಜನ್ ತಂದು ಹಲವಾರು ಮಕ್ಕಳನ್ನು ಬದುಕಿಸಲು ಯತ್ನಿಸಿ ಯಶಸ್ವಿಯಾದ ಕಫಿಲ್ ಖಾನ್‍ರನ್ನು ಯೋಗಿ ಸರಕಾರ ಬೇಟೆಯಾಡುತ್ತಿದೆ. ಸುಳ್ಳು ಕೇಸು ಹಾಕಿ ಎಂಟು ತಿಂಗಳು ಕಫಿಲ್ ಖಾನ್‍ರನ್ನು ಜೈಲಿಗಟ್ಟಿತ್ತು.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *