ಪರಾಗ ಸ್ಪರ್ಶವೆಂಬ ಅದ್ಭುತ ಪ್ರಕ್ರಿಯೆ

ಅಲ್ಲಾಹನ ನಿದರ್ಶನಗಳು:

ಒಂದು ಎಲೆಯನ್ನೆತ್ತಿಕೊಂಡು ಅದನ್ನು ವೀಕ್ಷಿಸಿರಿ. ಮೊದ ಮೊದಲು ಬರಿಗಣ್ಣಿಗೆ ಅದು ಕೇವಲ ಎಲೆಯಂತೆ ಗೋಚರಿಸುವುದು. ಆದರೆ ನಮ್ಮ ಬರಿಗಣ್ಣಿನ ದೃಷ್ಟಿಗೂ ಮೀರಿದ ಕಾರ್ಯವನ್ನು ಈ ಎಲೆಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುತ್ತದೆ. ಅದನ್ನು ಪರಾಗ ಸ್ಪರ್ಶವೆಂದು ಕರೆಯುತ್ತಾರೆ.
ಪರಾಗ ಸ್ಪರ್ಶವು ಮಾನವನ ಬರಿಗಣ್ಣಿಗೆ ಗೋಚರಿಸದ ಮತ್ತು ಆಧುನಿಕ ವಿಜ್ಞಾನ-ತಂತ್ರಜ್ಞಾನಗಳು ಮರು ಸ್ಥಾಪಿಸಲಾಗದ ಒಂದು ಅದ್ಭುತ ಕಾರ್ಯ ವ್ಯವಸ್ಥೆಯಾಗಿದೆ.
ಈ ವ್ಯವಸ್ಥೆಯನ್ನು ಸೂಕ್ಷ್ಮ ದರ್ಶಕಗಳಿಂದ ವೀಕ್ಷಿಸಲು ಇಂದಿನ ನವ ಯುಗಕ್ಕೆ ಸಾಧ್ಯವಾದರೂ ಅಂತಹ ವ್ಯವಸ್ಥೆಯನ್ನು ಉಂಟು ಮಾಡಲು / ಹುಟ್ಟು ಹಾಕಲು ಸಾಧ್ಯವಿಲ್ಲ.
ಈ ರಾಸಾಯನಿಕ ಪ್ರಕ್ರಯೆಯು ಸುಂದರ ಪ್ರಕೃತಿಯಲ್ಲಿರುವುದು ಈ ಗೋಳದಲ್ಲಿ ಮಾನವೀಯತೆ ನೆಲೆ ನಿಂತಿರುವ ಸಲೆಯಾಗಿ ಭಾಸವಾಗುವುದು. ಒಂದು ಎಲೆಯ ಪ್ರತಿ ಚದರ ಮಿಲಿ ಮೀಟರ್‍ನಲ್ಲಿಯೂ 5,00,000 ಕ್ಲೋರೋಫಿಲ್ಲಿಗಳು ಇರುತ್ತವೆ. ಈ ಅಣುಗಳು ಪರಾಗ ಸ್ಪರ್ಶ ಪ್ರಕ್ರಿಯೆಯ ಪ್ರಮುಖ ಅಂಶವಾಗಿವೆ. ಒಂದು ವೇಳೆ ಕ್ಲೋರೋಫಿಲ್ಲಿಯ ಒಂದು ಅಣುವನ್ನು ಅಧ್ಯಯನಕ್ಕೊಳ ಪಡಿಸುವುದಾದರೆ ಹಲವಾರು ಅದ್ಭುತ ಅಂಶಗಳು ಅಧ್ಯಯನದ ಹೊಸ ಆಯಾಮ ಬರೆಯಬಲ್ಲವು.
ಉದಾಹರಣೆಗೆ: ನಾವು ವೀಕ್ಷಿಸಲಿಚ್ಛಿಸುವ ಪರಾಗ ಸ್ಪರ್ಶ ಪ್ರಕ್ರಿಯೆಯು ಒಂದು ಸೆಂಕಡ್‍ನ್ನು ಒಂದು ಲಕ್ಷ ಭಾಗಗಳಾಗಿ ವಿಂಗಡಿಸಿದಾಗ ಅದರಲ್ಲಿ ಒಂದು ಅಂಶವಾಗಿರುವುದರೊಳಗೆ ಸಂಪೂರ್ಣಗೊಳ್ಳುವುದು.
ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಒಂದು ಸೆಕೆಂಡ್‍ನ ಲಕ್ಷ ಭಾಗದಲ್ಲೊಂದಂಶದಲ್ಲಿ ಸೂರ್ಯನ ಶಾಖ ಎಲೆಯ ಮೇಲೆ ಬೀಳುವ, ನೀರು ಎಲೆಯಲ್ಲಿ ಚಲಿಸುವ, ಹಲವಾರು ರಾಸಾಯನಿಕ ಪ್ರಕ್ರಿಯೆಗಳು ಈ ಅವಧಿಯಲ್ಲಿ ಥಟ್ಟನೆ ನಡೆಯುವವು. ಮಾತ್ರವಲ್ಲ, ಈ ಪ್ರತಿಕ್ರಿಯೆಯು ಎಲೆಯಲ್ಲಿರುವ ಲಕ್ಷಾಂತರ ಕ್ಲೋರೋಫಿಲ್ಲಿ ಅಣುಗಳಲ್ಲಿಯೂ ವ್ಯವಸ್ಥಿತವಾಗಿ ಜರುಗುವುದು.
ಒಂದು ವೇಳೆ ಅಲ್ಲಾಹನು ಈ ಕ್ಲೋರೋಫಿಲ್ಲಿ ಅಣುಗಳನ್ನು ನಿಷ್ಕ್ರಿಯಗೊಳಿಸಿ ಬಿಟ್ಟರೆ ಭೂಮಿಯಲ್ಲಿ ಆಮ್ಲಜನಕದ ಒಂದಂಶವೂ ಉಳಿಯಲಾರದು. ಯಾಕೆಂದರೆ ಕ್ಲೋರೋಫಿಲ್ಲಿಗಳ ಸಹಾಯವಿಲ್ಲದೇ ಯಾವುದೇ ಎಲೆಯು ಕಾರ್ಯ ನಿರ್ವಹಿಸದು. ಮಾತ್ರವಲ್ಲ, ಒಂದು ವೇಳೆ ಕ್ಲೋರೋಫಿಲ್ಲಿಗಳು ನಿಷ್ಕ್ರಿಯಗೊಂಡು ಬಿಟ್ಟರೆ ಭೂಮಿಯಲ್ಲಿರುವ ಸಕಲ ಮಾನವರು ಮತ್ತು ಜೀವ ಜಾಲಗಳು ನಶಿಸಿ ಹೋಗಬಹುದು. ಅದಕ್ಕೂ ಮಿಗಿಲಾಗಿ ಕ್ಲೋರೋಫಿಲ್ಲಿಗಳು ನಿಷ್ಕ್ರಿಯಗೊಂಡವೆಂದರೆ ಆಮ್ಲಜನಕವನ್ನೇ ಇಂಗಾಲದ ಡೈ ಆಕ್ಸೈಡ್ ಆಗಿ ಪರಿವರ್ತಿಸಿ ಬಿಡಬಲ್ಲವು.
ಮಾನವನ ಅಸ್ತಿತ್ವಕ್ಕೆ ಅಗತ್ಯವಾದ ಆಮ್ಲಜನಕ ಅಲಭ್ಯವಾದಲ್ಲಿ ಯಾವುದೇ ಜೀವಿಗಳು ಈ ಭೂಮಿಯಲ್ಲಿ ಅಸ್ತಿತ್ವದಲ್ಲಿರಲಾರವು. ವಾತಾವರಣವನ್ನು ಸ್ವಚ್ಛವಾಗಿರಿಸಲು ಮತ್ತು ಅತ್ಯಗತ್ಯ ಪೋಷಕಾಂಶವನ್ನು ಒದಗಿಸುವಲ್ಲಿ ಪರಾಗಸ್ಪರ್ಶ ಕ್ರಿಯೆಯು ಮಹತ್ವ ಪೂರ್ಣವಾಗಿದೆ.
ಯಥಾರ್ಥವಾಗಿ ಮರಗಳು ಆಮ್ಲಜನಕವನ್ನು ನೀಡಿ ಅತೀ ಹೆಚ್ಚು ಪ್ರಮಾಣದ ಇಂಗಾಲದ ಡೈ ಆಕ್ಸೈಡ್‍ನ್ನು ಹೀರಿಕೊಳ್ಳುತ್ತವೆ. ಈ ಅದ್ಭುತ ವ್ಯವಸ್ಥೆಯು ಅಲ್ಲಾಹನು ನೀಡಿರುವ ಅನುಪಮ ಉಡುಗೊರೆಗಳಲ್ಲೊಂದಾಗಿದೆ.
“ಉತ್ತಮ ನೆಲವು ತನ್ನ ಪ್ರಭುವಿನ ಆಜ್ಞೆಯಿಂದ ವಿಫುಲವಾಗಿ ಬೆಳೆ ನೀಡುತ್ತದೆ. ಕೆಟ್ಟ ನೆಲದಿಂದ ಕೆಟ್ಟ ಬೆಳೆಯ ವಿನಾ ಇನ್ನೇನೂ ಹೊರ ಬರುವುದಿಲ್ಲ. ಇದೇ ರೀತಿಯಲ್ಲಿ ಕೃತಜ್ಞರಾಗುವವರಿಗೆ ನಾವು ಪದೇ ಪದೇ ನಮ್ಮ ದೃಷ್ಟಾಂತಗಳನ್ನು ಮುಂದಿಡುತ್ತೇವೆ.” (ಪವಿತ್ರ ಕುರ್‍ಆನ್: 7:58)

 

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *