ಮಕ್ಕಳ ಮಲಮೂತ್ರ ಹೆತ್ತವರು ತೆಗೆಯುತ್ತಾರೆ, ಆದರೆ ವೃದ್ಧ ಹೆತ್ತವರದ್ದು…

  • ಅಬೂಕುತುಬ್

ವೃದ್ಧಾಪ್ಯ‌ ಎಂಬುದು ಬಹಳ ದುರ್ಬಲ ಅವಸ್ಥೆ. ಇತ್ತೀಚೆಗೆ ಒಂದು ವೃದ್ಧಾಶ್ಮಕ್ಕೆ ಭೇಟಿ ನೀಡಿದಾಗ ಅಸಹಾಯಕತೆ ಕಂಡು ಕಣ್ಣು ಮಂಜಾಗಿತ್ತು. ಮನುಷ್ಯ ಬಹಳ ದುರ್ಬಲ ಎಂದು ತಿಳಿಯಲು ಅದುವೇ ಸಾಕು. ಪುಟ್ಟ ಮಗು ದುರ್ಬಲ. ಆದರೆ ಅದಕ್ಕೆ ಆರೈಕೆ ಮಾಡಲು ತಾಯಿ, ತಂದೆ ಇರುತ್ತದೆ. ಅದರ ಮಲಮೂತ್ರ ತೆಗೆಯಲು ಯಾವುದೇ ಕಷ್ಟ ಇಲ್ಲ…ಆದರೆ ವೃದ್ಧಾಪ್ಯದಲ್ಲಿ ಅದು ಬಹಳ ಕಷ್ಟ…

ಆದ್ದರಿಂದಲೇ ಕುರಾನ್ ಹೇಳಿತು,

ಅಧ್ಯಾಯ 17: ಬನೀ ಇಸ್ರಾಈಲ್

ಸೂಕ್ತ : 23
وَقَضَىٰ رَبُّكَ أَلَّا تَعْبُدُوا إِلَّا إِيَّاهُ وَبِالْوَالِدَيْنِ إِحْسَانًا ۚ إِمَّا يَبْلُغَنَّ عِنْدَكَ الْكِبَرَ أَحَدُهُمَا أَوْ كِلَاهُمَا فَلَا تَقُلْ لَهُمَا أُفٍّ وَلَا تَنْهَرْهُمَا وَقُلْ لَهُمَا قَوْلًا كَرِيمًا

ನಿಮ್ಮ ಪ್ರಭು (ಹೀಗೆ) ಆಜ್ಞೆ ಕೊಟ್ಟಿರುವನು; ನೀವು ಕೇವಲ ಅವನೊಬ್ಬನ ಹೊರತು ಇನ್ನಾರ ದಾಸ್ಯ-ಆರಾಧನೆಯನ್ನೂ ಮಾಡಬಾರದು. ಮಾತಾಪಿತರೊಡನೆ ಅತ್ಯುತ್ತಮವಾಗಿ ಸೌಜನ್ಯದಿಂದ ವರ್ತಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ, ಅವರ ಮುಂದೆ “ಛೆ” ಎನ್ನದಿರಿ ಮತ್ತು ಅವರನ್ನು ಜರೆಯಬೇಡಿರಿ. ಅವರೊಂದಿಗೆ ಗೌರವ ಪೂರ್ವಕವಾಗಿ ಮಾತನಾಡಿರಿ.(ಕುರಾನ್)

ಹೀಗೆ ಹಲವು ಕಡೆಗಳಲ್ಲಿ ಆಜ್ಞೆ ಕೊಡಲಾಗಿದೆ. ಮನುಷ್ಯನ ಪಾದ ಅತ್ಯಂತ ಕೆಳಗೆ ಇರುತ್ತದೆ… ತಾಯಿಯ ಪಾದದ ಅಡಿಯಲ್ಲಿ ಸ್ವರ್ಗ ಇದೆ ಎಂದು ಪ್ರವಾದಿ (ಸ) ಹೇಳಿದರು. ಅಂದರೆ ತಾಯಿಯ ಹೃದಯಕ್ಕೆ ಎಷ್ಟೊಂದು ಸ್ಥಾನ ಇರಬಹುದು…

ವೃದ್ಧಾಶ್ರಮದ ಮ್ಯಾನೇಜರ್ ಹೇಳಿದರು, ನಿಮ್ಮಲ್ಲಿ ಎಷ್ಟೇ ಬಡವರಾದರೂ ಶ್ರೀಮಂತರಾದರೂ ಹೆತ್ತವರನ್ನು ಸಾಕುತ್ತಾರೆ. ವೃದ್ಧಾಶ್ರಮಕ್ಕೆ ಹಾಕುವುದೇ ಇಲ್ಲ.. ಎಲ್ಲೋ ಸಾವಿರದಲ್ಲಿ ಒಂದೆರಡು ಕೇಸು ಸಿಗುತ್ತದೆ ಅಂದರು (ನಿಜ ಅಂಕಿ ಅಂಶ ತಿಳಿದಿಲ್ಲ). ಆದರೂ ಹೆತ್ತವರಿಗೆ ಎಲ್ಲಾ ಧರ್ಮದಲ್ಲಿ ಬಹಳ ಮಹತ್ವ ಕೊಡಲಾಗಿದೆ.

ಇಂತಹ ಮೌಲ್ಯಗಳೇ ಧರ್ಮ ಆಗಿದೆ. ಕುಟುಂಬ ಎಂಬುದು ಧಾರ್ಮಿಕ ಸಂಸ್ಥೆ ಎಂದರೆ ಇದೇ ಮೌಲ್ಯ ಆಗಿದೆ. ದುರ್ಬಲ ಮನುಷ್ಯನಿಗೆ ಈ ಮೌಲ್ಯಗಳೇ ಆಸರೆ. ಮೌಲ್ಯಗಳಿಲ್ಲದ ಆರಾಧನೆ, ಭಕ್ತಿ ಎಲ್ಲವೂ ಶೂನ್ಯ.. ಅದು ಈ ಮೌಲ್ಯಗಳನ್ನು ನೆನಪಿಸುವ ದಾರಿ ಮಾತ್ರ…

  • ಅಬೂಕುತುಬ್

Check Also

ದೇವನ ಮತ್ತು ಮನುಷ್ಯರ ನಡುವಿನ ಸಂಬಂಧ

@ ಡಾ.ಕೆ. ಮುಹಮ್ಮದ್ ದೇವನು ಮತ್ತು ಮನುಷ್ಯರ ನಡುವಿನ ಪರಸ್ಪರ ಸಂಬಂಧವನ್ನು ಮುಂದಿಟ್ಟು ವಿದ್ವಾಂಸರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು …

Leave a Reply

Your email address will not be published. Required fields are marked *