ದೇಶವನ್ನು ರೇಪಿಸ್ತಾನ್ ಎಂದ ಮುಸ್ಲಿಮ್ ಐಎಎಸ್ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ ಸರಕಾರ

ಹೊಸದಿಲ್ಲಿ, ಜು.11: ದೇಶದಲ್ಲಿ ನೆಲೆಸಿದ ಅರಾಜಕ ಸ್ಥಿತಿಯನ್ನು ಮುಂದಿಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ರೇಪಿಸ್ತಾನ್ ಎಂದು ಪೋಸ್ಟ್ ಹಾಕಿದ ಜಮ್ಮು ಕಾಶ್ಮೀರದ ಐಎಎಸ್ ಅಧಿಕಾರಿ ಹಾಗೂ 2011ರ ಐಎಎಸ್ ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ಗಳಿಸಿದ್ದ ಶಾ ಫಝಲ್‍ರ ವಿರುದ್ಧ ಕೇಂದ್ರ ಸರಕಾರ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

ಅವರು ಈಗ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಹಾರ್ವರ್ಡ್ ಕೆನಡಿ ಸ್ಕೂಲ್‍ನಲ್ಲಿದ್ದಾರೆ. ಕಳೆದ ಎಪ್ರಿಲ್ 22ರಂದು ಫಝಲ್ ವಿವಾದಾಸ್ಪದ ಪೋಸ್ಟ್ ಹಾಕಿದ್ದರು.

“ಪುರುಷ ಮೇಲ್ಮೆ+ಜನಸಂಖ್ಯೆ+ಅನಕ್ಷರತೆ+ಅಶ್ಲೀಲತೆ= ತಂತ್ರಜ್ಞಾನ= ಅರಾಜಕತೆ= ರೇಪಿಸ್ಥಾನ್” ಎಂದು ಅವರು ಪೋಸ್ಟ್ ಹಾಕಿದ್ದರು.

ಸರಕಾರವನ್ನು ಐಎಎಸ್ ಅಧಿಕಾರಿ ಟೀಕಿಸುತ್ತಿದ್ದಾರೆ ಎಂದು ಹೇಳಿದವರೊಡನೆ ಅತ್ಯಾಚಾರ ಸರಕಾರದ ನೀತಿಯಾದರೆ ತಾನು ಟೀಕಿಸಿದ್ದು ಸರಕಾರದ ನೀತಿಯನ್ನು ಎಂದು ಆರೋಪಿಸಲು ಸಾಧ್ಯವಿದೆ ಎಂದು ಫಝಲ್ ಉತ್ತರಿಸಿದ್ದರು.

ಆದರೆ 2016ರಲ್ಲಿ ಸರಕಾರಿ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸರಕಾರವನ್ನು ಟೀಕಿಸದಂತೆ ಕೇಂದ್ರ ಸರಕಾರ ನಿಷೇಧ ಹೇರಿತ್ತು. ಇದರ ಹಿನ್ನೆಲೆಯಲ್ಲಿ ಫಝಲ್ ವಿರುದ್ಧ ಕ್ರಮ ಜರಗಿಸಲು ಕೇಂದ್ರ ಸರಕಾರ ಆದೇಶಿಸಿದೆ.

ಕಳೆದ ದಿವಸ ಫಝಲ್‍ಗೆ ಕಾರಣ ಕೇಳಿ ಶೋಕಾಸು ನೋಟಿಸು ಕಳುಹಿಸಲಾಗಿದೆ. ಆದರೆ ದಕ್ಷಿಣ ಏಷ್ಯದ ಅತ್ಯಾಚಾರ ಸಂಸ್ಕøತಿಯನ್ನು ಟೀಕಿಸಿದ ತನ್ನ ಟ್ವೀಟ್‍ಗೆ ತನ್ನ ಬೋಸ್ ಪ್ರೇಮ ಲೇಖನ ನೀಡಿದ್ದಾರೆ ಎಂದು ಹೇಳಿ ಫಝಲ್ ಪುನಃ ಇನ್ನೊಂದು ಟ್ವೀಟ್ ಮಾಡಿದ್ದಾರೆ.

Check Also

ಪ್ರವಾದಿ ಮುಹಮ್ಮದ್ ರನ್ನು ಎಲ್ಲರೂ ಓದಬೇಕು: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ನ.18: ಶಾಂತಿಯ ಸಂದೇಶ ಸಾರಿದ ಮುಹಮ್ಮದ್ ಪೈಗಂಬರ್‌ರನ್ನು ಎಲ್ಲ ಭಾಷೆ ಹಾಗೂ ಧರ್ಮದ ಜನರು ಓದಬೇಕು. ಪೈಗಂಬರ್‌ರನ್ನು ಓದದೆ …

Leave a Reply

Your email address will not be published. Required fields are marked *