ವಾರ್ತೆಗಳು

ಮಗಳಿಗೆ ಕೃತಕ ಕಾಲುಗಳನ್ನು ತಯಾರಿಸಿದ ಅಪ್ಪ: ಹೀಗೊಂದು ಸಿರಿಯದ ಅಪ್ಪ ಮಗಳ ಮನ ಮಿಡಿಯುವ ಕಥೆ

ದೊಡ್ಡವರ ಜಗಳದಲ್ಲಿ ಸಿಲುಕಿ ನರಳುತ್ತಿರುವ ಸಿರಿಯದ ನಿಷ್ಪಾಪಿ ಮಕ್ಕಳ ಬಗ್ಗೆ ಮೊದಲ ಬಾರಿ ಜಗತ್ತಿನ ಗಮನ ಸೆಳೆದವನು ಆಯ್ಲಾನ್ ಕುರ್ದಿ ಎಂಬ ಮುದ್ದು ಮಗ. ಟರ್ಕಿಯ ಕಡಲ ಕಿನಾರೆಯಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಆತನ ಶವ ದೊರಕಿದಾಗ ಜಗತ್ತು ಕಣ್ಣೀರು ಹಾಕಿತ್ತು. ಕೆಂಪು ಟೀ ಶರ್ಟು, ನೀಲಿ ಪ್ಯಾಂಟು, ಶೂ ಧರಿಸಿದ ಸ್ಥಿತಿಯಲ್ಲಿ ಆ ಮಗು ಕಡಲ ಕಿನಾರೆಯಲ್ಲಿ ದೊರಕಿತ್ತು. ಈ ಜಗತ್ತಿನ ದೊಡ್ಡವರ ಕ್ರೌರ್ಯವನ್ನು ನೋಡಲು ಅಸಹ್ಯವೆನಿಸುತ್ತಿದೆ ಎಂದು ಸಾರಿ ಹೇಳುವಂತೆ ಅದು ಕವುಚಿ ಮಲಗಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಮಾಯಾ ಮುಹಮ್ಮದ್ …

Read More »

ಸುರಕ್ಷಿತ ನೀರು ಸಿಗದೆ ವಾರ್ಷಿಕ 2 ಲಕ್ಷ ಜನರ ಸಾವು! ನೀರು ಪೋಲು ಮಾಡುವ ಮುನ್ನ ಈ ವರದಿ ಓದಿ

ಹೈದರಾಬಾದ್, ಜೂ.21: ಭಾರತ ಒಟ್ಟಾರೆಯಾಗಿ ಉಪಯೋಗಿಸುವ ನೀರಿನ ಅಗತ್ಯದಲ್ಲಿ ಕೃಷಿಗಾಗಿ ಬಳಸುವ ಭಾಗವನ್ನು ಶೇ. 50ರಷ್ಟು ಕಡಿಮೆ ಮಾಡಬೇಕು ಮತ್ತು ಒಂದು ಹನಿಯನ್ನು ಕೂಡಾ ಉಳಿಸಲು ಪ್ರಯತ್ನ ನಡೆಸಬೇಕು ಎಂದು ಖ್ಯಾತ ವಿಜ್ಞಾನಿ ಮತ್ತು ಇಸ್ರೋದ ಮಾಜಿ ಮುಖ್ಯಸ್ಥ ಕೆ. ಕಸ್ತೂರಿ ರಂಗನ್ ತಿಳಿಸಿದ್ದಾರೆ. ಭಾರತವು ತನ್ನ ಇತಿಹಾಸದಲ್ಲೇ ಅತ್ಯಂತ ಭೀಕರ ಜಲ ಸಮಸ್ಯೆಯಿಂದ ಬಳಲುತ್ತಿದೆ. ದೇಶದ 60 ಕೋಟಿ ಜನರು ತೀವ್ರ ಜಲ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವಾರ್ಷಿಕ ಎರಡು ಲಕ್ಷ ಮಂದಿ ಸುರಕ್ಷಿತ ನೀರು ಸರಿಯಾಗಿ ಸಿಗದ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಕಳೆದ …

Read More »

ಹಾಫಿಝ್ ಜುನೈದ್ ಕೊಲೆಗೆ ಒಂದು ವರ್ಷ

ಹೊಸದಿಲ್ಲಿ, ಜೂ.22: ಹರಿಯಾಣ ವಲ್ಲಭಗಡ ಹಾಫಿಝ್ ಜುನೈದ್ ಖಾನ್ ಹತ್ಯೆಗೆ ಒಂದು ವರ್ಷ ಪೂರ್ತಿಯಾಗಿದೆ. ರೈಲಿನಲ್ಲಿ 16 ವರ್ಷ ವಯಸ್ಸಿನ ಜುನೈದ್ ಖಾನ್‍ರನ್ನು ಕೋಮುವಾದಿಗಳು ಹೊಡೆದು ಕೊಂದು ಹಾಕಿ ಒಂದು ವರ್ಷ ಆಗುವಷ್ಟರಲ್ಲಿ ಪ್ರಕರಣದ ಆರೋಪಿಗಳಲ್ಲಿ ಐವರು ಜಾಮೀನು ಪಡೆದು ಹೊರಬಂದಿದ್ದಾರೆ. ಪ್ರಕರಣದ ಮೊದಲ ಆರೋಪಿ ಮಾತ್ರ ಜೈಲಿನ ಸಲಾಖೆಯೊಳಗಿದ್ದಾನೆ. ಬಾಲಕನ ಹತ್ಯೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಜುನೈದ್ ಹತ್ಯೆಯನ್ನು ವಿರೋಧಿಸಿ ನಾಟ್ ಇನ್ ಮೈನೇಮ್ ಎಂಬ ಅಭಿಯಾನವೇ ಆರಂಭವಾಗಿತ್ತು. ದಿಲ್ಲಿಯ ಸದರ್ ಬಜಾರ್‍ನಿಂದ ಹೊಸ ಬಟ್ಟೆಗಳನ್ನು ಖರೀದಿಸಿ ಅಣ್ಣಂದಿರಾದ ಮುಹ್ಸಿನ್, ಹಾಷಿಂ, ಝಕೀರ್ …

Read More »

ಇರಾನ್‍ನ ಇಸ್ಲಾಮೀ ವ್ಯವಸ್ಥೆ ಯಾರದೆ ಜೋರಿಗೆ ಮಣಿಯುವಂತಹದ್ದಲ್ಲ: ಇರಾನ್ ಪರಮೋಚ್ಚ ನಾಯಕ ಖಾಮಿನೈ

ಟೆಹ್ರಾನ್, ಜೂ. 22: ಇರಾನ್‍ನ ಮಜ್ಲಿಸೆ ಶೂರಾದ ಸಂಸದರು ಬುಧವಾರ ಇಸ್ಲಾಮೀ ಕ್ರಾಂತಿಯ ವರಿಷ್ಠ ನಾಯಕ ಆಯತುಲ್ಲಹ್ ಉಝ್ಮಾ ಸೈಯದ್ ಖಾಮ್‍ನೈವರನ್ನು ಭೇಟಿಯಾಗಿದ್ದು. ಅವರು ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ ಸೇರುವುದು ಮತ್ತು ಅದರಲ್ಲಿ ಸರಿಯಾದ ರೀತಿಯಲ್ಲಿ ಅದನ್ನು ಜಾರಿಗೆ ತರುವ ರೀತಿಯನ್ನು ವಿವರಿಸುತ್ತಾ ಇರಾನ್ ಯಾರದೆ ಜೋರಿಗೆ ಮಣಿಯುವಂತ ವ್ಯವಸ್ಥೆಯನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ. ಇರಾನ್ ಸಂಸದರು ತಿಳುವಳಿಕೆಯುಳ್ಳವರು ಮತ್ತು ಬುದ್ಧಿವಂತರು. ಭಯೋತ್ಪಾದನೆ ನಿಷೇಧ ಮತ್ತು ಮನಿ ಲಾಂಡ್ರಿಂಗ್ ವಿರುದ್ಧ ಅಭಿಯಾನದಂತಹ ವಿಷಯದಲಿ ಅವರು ಸ್ವಯಂ ಕಾನೂನು ರಚಿಸಬೇಕಿದೆ ಎಂದು ಸಲಹೆ ನೀಡಿದರು. ಇಸ್ಲಾಮೀ ಕ್ರಾಂತಿಕ …

Read More »

ಭಾರತೀಯ ಮುಸ್ಲಿಮರನ್ನು ಕೊಂಡಾಡಿದ ರಾಜನಾಥ ಸಿಂಗ್

ಭಾರತೀಯ ಮುಸ್ಲಿಮರು ವಿಶ್ವದಲ್ಲಿಯೇ ಅತ್ಯುತ್ತಮರು ಎಂದಿರುವ ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರು, ಮುಸ್ಲಿಮರು ಭಾರತಕ್ಕೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಇಸ್ಲಾಮಿನ ಎಲ್ಲ ಪಂಥಗಳೂ ಜೊತೆಯಾಗಿ ಬದುಕುವ ದೇಶ ಇದು. ವಿಶ್ವದ ಇನ್ನಾವ ರಾಷ್ಟ್ರದಲ್ಲೂ ಇಂಥದ್ದೊಂದು ವಾತಾವರಣವಿಲ್ಲ. ಭಾರತವು ಮುಸ್ಲಿಮರ ಆಯ್ಕೆಯ ದೇಶವಾಗಿದೆ. ದೇಶವು ಇಬ್ಬಾಗವಾಗುವಾಗ ಅವರು ಈ ದೇಶವನ್ನೇ ಆಯ್ಕೆಮಾಡಿಕೊಂಡರು. ಅವರು ಬಯಸಿರುತ್ತಿದ್ದರೆ ಇಲ್ಲಿಂದ ಹೋಗಬಹುದಿತ್ತು. ಆದರೆ, ಅವರು ಈ ದೇಶವನ್ನೇ ಆಯ್ಕೆ ಮಾಡಿಕೊಂಡರು ಎಂದು ದೆಹಲಿಯಲ್ಲಿ ನಡೆದ ಈದ್ ಮಿಲನ್ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರೊಂದಿಗೆ ಭಾಗವಹಿಸಿ …

Read More »

ತಾಯ್ನಾಡಿನಲ್ಲೇ 32 ವಿಧದ ಖರ್ಜೂರ ಬೆಳೆದ ನಿಝಾಮುದ್ದೀನ್

ಚೆನ್ನೈ, ಜೂ.20: ಸಿಹಿ ಸಿಹಿಯಾದ ಖರ್ಜೂರಗಳು ಕೇವಲ ಗಲ್ಫ್ ರಾಷ್ಟ್ರಗಳಲ್ಲಿ ಮಾತ್ರ ಬೆಳೆಯಲ್ಪಡುತ್ತವೆ ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ. ಆದರೂ ದೇಶದ ಗುಜರಾತ್, ಪಂಜಾಬ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಖರ್ಜೂರದ ಮರಗಳನ್ನು  ಬೆಳೆಸಲಾಗುತ್ತಿದೆ. ತಮಿಳುನಾಡು ಕೂಡ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದು, ಅಲ್ಲಿನ ವಾತಾವರಣ ಕೂಡ ಈ ಖರ್ಜೂರ ಮರಗಳಿಗೆ ಅನುಕೂಲಕರವಾಗಿದೆ.  ಖರ್ಜೂರ ಬೆಳೆಗಾರರಲ್ಲಿ ಒಬ್ಬರು ಅಪರೂಪದ ಬೆಳೆಗಾರರಿದ್ದಾರೆ. ಅಂಗಾಂಶ ಕೃಷಿಯ ಮೂಲಕ ಅವರು ಖರ್ಜೂರ ಬೆಳೆಯುವಲ್ಲಿ ಕ್ರಾಂತಿಯನ್ನೇ ಸಾಧಿಸಿದ್ದಾರೆನ್ನಬಹುದು. ಅವರೇ ಧರ್ಮಪುರಿ ಜಿಲ್ಲೆಯ ಅರಿಯಕುಲಂ ಎಂಬಲ್ಲಿನ ನಿಝಾಮುದ್ದೀನ್ ಎಸ್.  ತಮ್ಮ ತೋಟ ಹಾಗೂ …

Read More »

ಈದ್ ರಜೆಯಲ್ಲಿ ಮದಾಯಿನ್ ಶುಹೈಬ್‍ಗೆ ಜನ ಪ್ರವಾಹ

ಯಾಂಬು (ಸೌದಿ ಅರೇಬಿಯ), ಜೂ.21: ಪ್ರಕೃತಿಯ ವಿಶೇಷತೆಯನ್ನು ಎತ್ತಿ ಹಿಡಿದ ಕಲ್ಲಿನ ಗುಹೆಗಳಿರುವ ಮದಿಯನ್ ಶುಹೈಬ್ ವೀಕ್ಷಣೆಗೆ ಈದ್ ರಜೆಯಲ್ಲಿ ಜನಸಮೂಹ ಬರುತ್ತಿದೆ. ಸೌದಿಯ ವಿವಿಧ ಪ್ರದೇಶಗಳಿಂದ ಪ್ರವಾಸಾರ್ಥ ಯಾತ್ರೆ ತಂಡಗಳು ಕುಟುಂಬ ಸಮೇತ ಇಲ್ಲಿಗೆ ಬರುತ್ತಿದ್ದು, ತಬೂಕ್ ಪ್ರಾಂತದ ಮಖ್ನಾ ಸಮೀಪದ ಅಲ್ ಬಾದಿಲ್ ಮದಿಯನ್ ಶುಹೈಬ್ ಅರ್ಥಾತ್ ಪ್ರವಾದಿ ಶುಹೈಬ್‍ರ ನಗರ ಇದೆ. ಅಖ್ಲ ರಸ್ತೆಯಲ್ಲಿ ಅಲ್ ಬಾದ್ ನಗರದ ಕೇಂದ್ರ ದಾಟಿದೊಡನೆ ಎಡಭಾಗದಲ್ಲಿ ಬೆಟ್ಟ ಗುಡ್ಡಗಳು ತೆರೆದು ಕೊಂಡಿರುವ ಮನೆಗಳು ಮತ್ತು ನಿರ್ಮಿತಿಗಳು ಪ್ರಾಚೀನ ಸಮಾಜದ ಜೀವನ ರೀತಿಯನ್ನು ಎತ್ತಿ …

Read More »

ಮೂವರು ಮುಸ್ಲಿಮ್ ಸಹೋದರರಿಗೆ ಭಾರತದ ನಾಗರಿಕತೆ ಲಭ್ಯ

ಹೊಸದಿಲ್ಲಿ, ಜೂ.21: ಪಾಕಿಸ್ತಾನದಲ್ಲಿ ಹುಟ್ಟಿದ ಮೂವರು ಸಹೋದರರಿಗೆ ಭಾರತೀಯ ನಾಗರಿಕತೆ ನೀಡಲಾಗಿದೆ. ಮುಹಮ್ಮದ್ ಸನಾನ್(29), ತಮ್ಮರುಮಾನ್(27), ಸೈಫ್(25) ಎಂಬವರಿಗೆ ಭಾರತ ಸರಕಾರ ಭಾರತೀಯ ನಾಗರಿಕತೆ ನೀಡಿದೆ. ಕಂದಾಯ ವಿಭಾಗದ ಅಧಿಕಾರಿ ಟಿ.ವಿನೋದ್ ಕುಮಾರ್ ಮಂಗಳವಾರ ಮೂವರಿಗೆ ತಾಯಿ ಫೈಜುನ್ನೀಸ ಉಪಸ್ಥಿತಿಯಲ್ಲಿ ನಾಗರಿಕತೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದಾರೆ. ನಾಗರಿಕತೆಗೆ ಸಲ್ಲಿಸಿದ ಅರ್ಜಿಯನ್ನು ಗೃಹ ಸಚಿವಾಲಯ ಪುರಸ್ಕರಿಸಿದೆ. ಗೃಹ ಸಚಿವಾಲಯ ಎಪ್ರಿಲ್ 24ರಂದು ನಾಗರಿಕತಾ ಅಧಿ ನಿಯಮ -1955 ಕಲಂ 5(1) ಪ್ರಕಾರ ಆದೇಶವನ್ನು ಜಾರಿ ಮಾಡಿದೆ. ಸಹೋದರರು ಎಂಟು ವರ್ಷ ಮೊದಲು ನಾಗರಿಕತೆಗಾಗಿ ಮನವಿ ಸಲ್ಲಿಸಿದ್ದರು. …

Read More »

ಇಸ್ರೇಲ್‍ನ ವಸಾಹತು ಕಂಪೆನಿ ವಿಶ್ವಸಂಸ್ಥೆಯ ಬ್ಲಾಕ್ ಲೀಸ್ಟಿಗೆ

ಜೆರುಸಲೇಂ, ಜೂ. 21: ಫೆಲಸ್ತೀನ್ ಭೂಮಿಯಲ್ಲಿ ಅನಧಿಕೃತವಾಗಿ ವಸತಿ ನಿರ್ಮಾಣ ಮಾಡುತ್ತಿರುವ ಕಂಪೆನಿಗಳನ್ನು ವಿಶ್ವಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಿದೆ. 2016ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕು ಕೌನ್ಸಿಲ್ ಇಂತಹ ಕಂಪೆನಿಗಳ ವಿರುದ್ಧ ಕ್ರಮ ಜರಗಿಸಿದೆ. ಈ ವರ್ಷ ಜನವರಿಯಲ್ಲಿ ಫೆಲೆಸ್ತೀನ್‍ನ ವೆಸ್ಟ್ ಬ್ಯಾಂಕ್‍ನಲ್ಲಿ ಅನಧಿಕೃತವಾಗಿ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ 206 ಕಂಪೆನಿಗಳು ವಿರುದ್ಧ ಕ್ರಮ ಜರಗಿಸಲಾಗಿತ್ತು. ಜರುಸಲೆಂ ಪೋಸ್ಟ್ ಈ ಸುದ್ದಿ ವರದಿ ಮಾಡಿದೆ. ಸೋಮವಾರ ವಿಶ್ವ ಸಂಸ್ಥೆಯ ಮಾನವ ಹಕ್ಕು ಏಜೆನ್ಸಿ ಇಸ್ರೇಲಿನ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

Read More »

ಪಿಫ ಫುಟ್‍ಬಾಲ್‍ನಲ್ಲಿ ಮುಸ್ಲಿಮರ ಸಾಕ್ಷ್ಯ ವಚನ ಮುದ್ರಣ..!

ಹೊಸದಿಲ್ಲಿ, ಜೂ.19: ಪಿಫ ಫುಟ್‍ಬಾಲ್‍ನಲ್ಲಿ ಸೌದಿ ಅರೇಬಿಯದ ಬಾವುಟವನ್ನು ಮುದ್ರಿಸಿರುವ ಕುರಿತು ಮುಸ್ಲಿಮರು ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಸ್ಲಿಮರು ಜಗತ್ತಿನಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದು, ಸೌದಿ ಧ್ವಜವನ್ನು ತೆರವುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. ಸೌದಿ ಅರೇಬಿಯದ ಧ್ವಜದಲ್ಲಿ ಶಹಾದತ್ ಕಲಿಮ ಬರೆಯಲಾಗುತ್ತದೆ. ಈ ನೆಪದಲ್ಲಿ ಫಿಫ ಫುಟ್‍ಬಾಲ್‍ನಲ್ಲಿ ಸಾಕ್ಷ್ಯ ವಚನವನ್ನು ಬರೆದಿದೆ. ಫುಟ್‍ಬಾಲನ್ನು ಕಾಲಿನಿಂದ ಒದೆಯುವುದರಿಂದಾಗಿ ಮುಸ್ಲಿಮರ ನಡುವೆ ಇದು ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಈ ಫುಟ್‍ಬಾಲ್‍ನಲ್ಲಿ ಪಂದ್ಯ ಆಡಲಾಗುವುದಿಲ್ಲ. ಆದರೆ ಸ್ಮರಣಿಕೆ ಎಂಬ ನೆಲೆಯಲ್ಲಿ ಪಿಫ ಸೌದಿ ಅರೇಬಿಯದ ಧ್ವಜವನ್ನು ಮುದ್ರಿಸಿದೆ. …

Read More »