books

ಮಹಿಳೆ ಮತ್ತು ಸಮಾಜ1

ಇಸ್ಲಾಮ್ ಧರ್ಮದ ಕುರಿತು ಪ್ರಸ್ತಾಪ ಬಂದಾಗಲೆಲ್ಲಾ ಮುಸ್ಲಿಮ್ ಮಹಿಳೆ, ಆಕೆಯ ಸ್ಥಾನಮಾನ, ಕಾರ್ಯಕ್ಷೇತ್ರ, ಹಕ್ಕು ಮತ್ತು ಕರ್ತವ್ಯಗಳ ಚರ್ಚೆ ಬಂದೇ ಬರುತ್ತದೆ. ನಮ್ಮ ಪಾಶ್ಚಾತ್ಯ ಪ್ರಣೀತ ಸಮೂಹ ಮಾಧ್ಯಮಗಳು ಇಸ್ಲಾಮ್ ಮತ್ತು ಮುಸ್ಲಿಮ್ ಸಮಾಜದಲ್ಲಿ ಮಹಿಳೆಯ ಕುರಿತು ಅಷ್ಟೊಂದು ತಪ್ಪು ಕಲ್ಪನೆಗಳನ್ನು ಹರಡಿದೆ. ಪ್ರಸ್ತುತ ತಪ್ಪು ಕಲ್ಪನೆಗಳನ್ನು ನಿವಾರಿಸಿ ಇಸ್ಲಾಮ್ ಧರ್ಮದಲ್ಲಿ ಮಹಿಳೆಯರಿಗಿರುವ ನೈಜ ಸ್ಥಾನಮಾನ ಮತ್ತು ಹಕ್ಕು ಬಾಧ್ಯತೆಗಳನ್ನು ಅರಿಯಲು ಈ ಕೃತಿ ನೆರವಾದೀತು. ಲೇಖಕರು : ಇಬ್ರಾಹೀಮ್ ಸಈದ್ ಪುಟಗಳು:136 ಬೆಲೆ: ರೂ. 62.00

Read More »

ಯೇಸು ಮತ್ತು ಮೇರಿ ಕುರ್ ಆನಿನಲ್ಲಿ1

ಅಲ್ಲಾಹನ ವತಿಯಿಂದ ಜಗತ್ತಿಗೆ ನೇಮಕಗೊಂಡ ಎಲ್ಲ ಪ್ರವಾದಿಗಳನ್ನು ಮುಸ್ಲಿಮರು ನಂಬುತ್ತಾರೆ. ಏಸು ಅಥವಾ ಪ್ರವಾದಿ ಈಸಾ(ಅ) ಅಲ್ಲಾಹನ ಪ್ರವಾದಿಗಳ ಪೈಕಿ ಓರ್ವ ಮಹಾನ್ ಪ್ರವಾದಿ. ಪವಿತ್ರ ಕುರ್ ಆನಿನಲ್ಲಿ ಹೆಸರಿನೊಂದಿಗೆ ಪ್ರಸ್ತಾಪಿಸಲ್ಪಟ್ಟಿರುವಂತಹ ಏಕೈಕ ಮಹಿಳೆ ಏಸುವಿನ ತಾಯಿ ಮೇರಿ ಅಥವಾ ಮರ್ಯಮ್(ಅ) ಆಗಿರುವರು. ಅವರ ಚಾರಿತ್ರ್ಯವನ್ನು ಪವಿತ್ರ ಕುರ್ಆನ್ ಒಂದು ಆದರ್ಶವಾಗಿ ಜಗತ್ತಿನ ಮುಂದಿರಿಸಿದೆ. ಈ ಪುಸ್ತಕದಲ್ಲಿ ಏಸು ಮತ್ತು ಮೇರಿಯವರ ಕುರಿತು ದೃಷ್ಟಿಕೋನವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಲಾಗಿದೆ. ಲೇಖಕರು : ಇಬ್ರಾಹೀಮ್ ಸಈದ್ ಪುಟಗಳು: 56 ಬೆಲೆ: ರೂ. 25.00 –

Read More »

ಇಸ್ಲಾಮೀ ಜೀವನ ವ್ಯವಸ್ಥೆ

ಜಗದ್ವಿಖ್ಯಾತ ವಿದ್ವಾಂಸ ಮೌಲಾನಾ ಸೈಯದ್ ಅಬುಲ್ ಆಲಾ ಮೌದೂದಿ(ರ) ಅವರ ಪ್ರಸಿದ್ಧ ಕ್ರತಿಗಳ ಪೈಕಿ ಒಂದು ‘ಇಸ್ಲಾಮ್ ಕಾ ನಿಜ್ಹಾಮೆ ಹಯಾತ್’ ದೆಹಲಿಯ ಮರ್ಕಜ್ಹೀ ಮಕ್ತಬಾ ಸಂಸ್ಥೆಯೊಂದೇ 1971 ರಿಂದ 1991 ಮಧ್ಯೆ ಇದರ ಆರು ಆವ್ರತಿಗಳನ್ನು ಅಂದರೇ 22000 ಪ್ರತಿಗಳನ್ನು ಪ್ರಕಟಿಸಿವೆ ಎಂಬುದು ಇದರ ಜನಪ್ರಿಯತೆಗೆ ಸಾಕ್ಷಿ. ಇದರಲ್ಲಿ ಇಸ್ಲಾಮೀ ಜೀವನ ವ್ಯವಸ್ಥೆಯ ವಿವಿಧ ಮುಖಗಳ ಮೇಲೆ ಸಮಗ್ರವಾಗಿ ಆದರೆ ಸಂಕ್ಷಿಪ್ತವಾಗಿ ಬೆಳಕು ಚೆಲ್ಲಲಾಗಿದೆ. ಇಸ್ಲಾಮ್ ಕೇವಲ ಸೀಮಿತ ವ್ಯಾಪ್ತಿಯ ಒಂದು ಧರ್ಮ ಎಂದು ಭಾವಿಸಲಾಗುತ್ತಿರುವ ಇಂದಿನ ದಿನಗಳಲ್ಲಿ ಇಸ್ಲಾಮೀ ಜೀವನ ವ್ಯವಸ್ಥೆಯ ವಿಶಾಲ ಸ್ವರೂಪವನ್ನು ಒಳಗೊಂಡಿರುವ …

Read More »

ಯೇಸು ಮತ್ತು ಮೇರಿ ಕುರ್ ಆನಿನಲ್ಲಿ

ಅಲ್ಲಾಹನ ವತಿಯಿಂದ ಜಗತ್ತಿಗೆ ನೇಮಕಗೊಂಡ ಎಲ್ಲ ಪ್ರವಾದಿಗಳನ್ನು ಮುಸ್ಲಿಮರು ನಂಬುತ್ತಾರೆ. ಏಸು ಅಥವಾ ಪ್ರವಾದಿ ಈಸಾ(ಅ) ಅಲ್ಲಾಹನ ಪ್ರವಾದಿಗಳ ಪೈಕಿ ಓರ್ವ ಮಹಾನ್ ಪ್ರವಾದಿ. ಪವಿತ್ರ ಕುರ್ ಆನಿನಲ್ಲಿ ಹೆಸರಿನೊಂದಿಗೆ ಪ್ರಸ್ತಾಪಿಸಲ್ಪಟ್ಟಿರುವಂತಹ ಏಕೈಕ ಮಹಿಳೆ ಏಸುವಿನ ತಾಯಿ ಮೇರಿ ಅಥವಾ ಮರ್ಯಮ್(ಅ) ಆಗಿರುವರು. ಅವರ ಚಾರಿತ್ರ್ಯವನ್ನು ಪವಿತ್ರ ಕುರ್ಆನ್ ಒಂದು ಆದರ್ಶವಾಗಿ ಜಗತ್ತಿನ ಮುಂದಿರಿಸಿದೆ. ಈ ಪುಸ್ತಕದಲ್ಲಿ ಏಸು ಮತ್ತು ಮೇರಿಯವರ ಕುರಿತು ದೃಷ್ಟಿಕೋನವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಲಾಗಿದೆ. ಲೇಖಕರು : ಇಬ್ರಾಹೀಮ್ ಸಈದ್ ಪುಟಗಳು: 56 ಬೆಲೆ: ರೂ. 25.00 –

Read More »

ಮಹಿಳೆ ಮತ್ತು ಸಮಾಜ

ಇಸ್ಲಾಮ್ ಧರ್ಮದ ಕುರಿತು ಪ್ರಸ್ತಾಪ ಬಂದಾಗಲೆಲ್ಲಾ ಮುಸ್ಲಿಮ್ ಮಹಿಳೆ, ಆಕೆಯ ಸ್ಥಾನಮಾನ, ಕಾರ್ಯಕ್ಷೇತ್ರ, ಹಕ್ಕು ಮತ್ತು ಕರ್ತವ್ಯಗಳ ಚರ್ಚೆ ಬಂದೇ ಬರುತ್ತದೆ. ನಮ್ಮ ಪಾಶ್ಚಾತ್ಯ ಪ್ರಣೀತ ಸಮೂಹ ಮಾಧ್ಯಮಗಳು ಇಸ್ಲಾಮ್ ಮತ್ತು ಮುಸ್ಲಿಮ್ ಸಮಾಜದಲ್ಲಿ ಮಹಿಳೆಯ ಕುರಿತು ಅಷ್ಟೊಂದು ತಪ್ಪು ಕಲ್ಪನೆಗಳನ್ನು ಹರಡಿದೆ. ಪ್ರಸ್ತುತ ತಪ್ಪು ಕಲ್ಪನೆಗಳನ್ನು ನಿವಾರಿಸಿ ಇಸ್ಲಾಮ್ ಧರ್ಮದಲ್ಲಿ ಮಹಿಳೆಯರಿಗಿರುವ ನೈಜ ಸ್ಥಾನಮಾನ ಮತ್ತು ಹಕ್ಕು ಬಾಧ್ಯತೆಗಳನ್ನು ಅರಿಯಲು ಈ ಕೃತಿ ನೆರವಾದೀತು. ಲೇಖಕರು : ಇಬ್ರಾಹೀಮ್ ಸಈದ್ ಪುಟಗಳು:136 ಬೆಲೆ: ರೂ. 62.00

Read More »

ಸಾಮಾಜಿಕ ನ್ಯಾಯ ಮತ್ತು ಇಸ್ಲಾಮ್

ಸಾಮಾಜಿಕ ನ್ಯಾಯದ ಮಹತ್ವವನ್ನು ಈ ಕಿರುಹೊತ್ತಗೆಯಲ್ಲಿ ವಸ್ತುನಿಷ್ಠವಾಗಿ ಪ್ರತಿಪಾದಿಸಲಾಗಿದೆ. ಜೊತೆಗೆ ವಿವಿಧ ಕಾಲ, ಜನಾಂಗ ಹಾಗೂ ಭೌಗೋಳಿಕ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿದ್ದ ಭಾವನೆಗಳನ್ನೂ ಬೇರೆ ಬೇರೆ ಧರ್ಮಗಳ ಕಲ್ಪನೆಯನ್ನೂ ತುಲನಾತ್ಮಕವಾಗಿ ಇದರಲ್ಲಿ ವಿವರಿಸಲಾಗಿದೆ. ಇಸ್ಲಾಮ್ ಧರ್ಮದಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಮತ್ತು ಅದನ್ನು ಆಚರಣೆಗೆ ತಂದ ಐತಿಹಾಸಿಕ ಉದಾಹರಣೆಗಳನ್ನೂ ಇದರಲ್ಲಿ ಕೊಡಲಾಗಿದೆ. ಲೇಖಕರು : ಮೌ| ವಹೀದುದ್ದೀನ್ ಖಾನ್ ಅನುವಾದಕರು: ಬಿ.ಎಸ್. ಶರ್ಫುದ್ದೀನ್ ಪುಟಗಳು: 32 ಬೆಲೆ: ರೂ. 13.00

Read More »

ಬಡ್ಡಿ

ಇಸ್ಲಾಮ್ ಸ್ಥಾಪಿಸಿದ ಆರ್ಥಿಕ ವ್ಯವಸ್ಥೆಯು ಇಂದು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರ ತತ್ವ ಸಿದ್ಧಾಂತಗಳೂ  ಮುಸ್ಲಿಮರ ಮನದಿಂದ ಮರೆಯಾಗಿವೆ. ನಮ್ಮ ಸುತ್ತಮುತ್ತಲಿರುವ ಆರ್ಥಿಕ ವ್ಯವಸ್ಥೆಯು ಬಂಡವಾಳ ಶಾಹಿತ್ವದ ಆಧಾರದಲ್ಲಿ ನಡೆಯುತ್ತಿದೆ. ನಮ್ಮ ಮನ-ಮಸ್ತಿಷ್ಕಗಳ ಮೇಲೂ ಅದು ಗಾಢವಾದ ಪ್ರಭಾವವನ್ನು ಬೀರಿದೆ. ಇಸ್ಲಾಮ್ ಬಡ್ಡಿಯನ್ನು ನಿಷೇಧಿಸಿರುವುದರ ಕಾರಣಗಳನ್ನು ಆಳವಾಗಿ ಅಭ್ಯಸಿಸಿ ಅದನ್ನು ವೈಚಾರಿಕವಾಗಿ ಮನಗಾಣಿಸುವ ಪ್ರಯತ್ನ ಈ ಗ್ರಂಥದಲ್ಲಿ ಮಾಡಲಾಗಿದೆ. ಲೇಖಕರು :  ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ ಅನುವಾದಕರು: ಇಬ್ರಾಹೀಮ್ ಸಈದ್ ಪುಟಗಳು : 64 ಬೆಲೆ: ರೂ.23.00

Read More »

ಸನ್ಮಾರ್ಗ

ಸನ್ಮಾರ್ಗ ಎಂಬ ಈ ಕ್ರತಿಯಲ್ಲಿ ಮೌಲಾನ ಸೈಯದ್ ಯೂಸುಫ್ ರವರು ಇಸ್ಲಾಮಿನ ಮೂಲಭೂತ ವಿಶ್ವಾಸ ಮತ್ತು ಆರಾಧನಾ ಕರ್ಮಗಳಿಂದ ಹಿಡಿದು ಜೀವನದ ಹೆಚ್ಚಿನೆಲ್ಲ ರಂಗಗಳನ್ನು ಅತ್ಯಂತ ಚುಟುಕಾಗಿ, ಸರಳ ರೀತಿಯಲ್ಲಿ ಪರಿಚಯಿಸಲು ಪ್ರಯತ್ನಿಸಿದ್ದಾರೆ. ಈ ಕ್ರತಿಯ ಬಗ್ಗೆ ‘ಸಾಗರವನ್ನು ಹೂಜಿಯಲ್ಲಿ ತುಂಬಲಾಗಿದೆ’ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಲೇಖಕರು: ಮೌ/ ಸೈಯದ್ ಯೂಸುಫ್ ಪುಟಗಳು : 24 ಬೆಲೆ ರೂ : 10.00

Read More »

ಪ್ರವಾದಿ ಮುಹಮ್ಮದ್(ಸ) – ಲೋಕನಾಯಕ

ಪ್ರವಾದಿ ಮುಹಮ್ಮದ್ರ(ಸ) ಕುರಿತು ಪವಿತ್ರ ಕುರ್ಆನ್ ಹೇಳುತ್ತದೆ: “ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.” ಪ್ರಸ್ತುತ ಕುರ್ಆನಿನ ಹೇಳಿಕೆಗೆ ತಕ್ಕಂತೆ ಪ್ರವಾದಿ ಮುಹಮ್ಮದ್(ಸ) ಅವರು ಮಾತ್ರ ಲೋಕನಾಯಕನಾಗಲು ಅರ್ಹರಾದ ಏಕೈಕ ವ್ಯಕ್ತಿ ಎಂಬುದನ್ನು ಈ ಕಿರುಹೊತ್ತಿಗೆಯಲ್ಲಿ ಪ್ರತಿಪಾದಿಸಲಾಗಿದೆ. ಲೇಖಕರು : ಮೌ ಸಯ್ಯದ್ ಅಬುಲ್ ಆಲಾ ಮೌದೂದಿ ಅನುವಾದಕರು: ಎಮ್. ಸಾದುಲ್ಲಾ ಪುಟಗಳು: 12 ಬೆಲೆ: ರೂ. 5.00

Read More »