ಲೇಖನಗಳು

ನಮಗೆಂತಹ ಬದಲಾವಣೆ ಬೇಕು?

@ ಅಬ್ದುಲ್ ಹಮೀದ್, ಪಕ್ಕಲಡ್ಕ ಪರಿವರ್ತನೆ ಜಗದ ನಿಯಮ. ನಮಗೆ ಇಷ್ಟವಿದೆಯೋ ಇಲ್ಲವೋ ಪರಿವರ್ತನೆ ಯಾ ಬದಲಾವಣೆಯೊಂದಿಗೆ ರಾಜಿ ಮಾಡಿಕೊಂಡು ನಾವು ಮುಂದೆ ಸಾಗಲೇಬೇಕಾಗಿದೆ. ಬದಲಾವಣೆಯೊಂದಿಗೆ ನಾವು ಹೆಜ್ಜೆ ಹಾಕದಿದ್ದರೆ ಬದಲಾವಣೆ ನಮ್ಮನ್ನು ಪ್ರತ್ಯಕ್ಷ ಯಾ ಪರೋಕ್ಷವಾಗಿ ಬಲಾತ್ಕಾರದಿಂದಲಾದರೂ ಬದಲಾವಣೆಗೆ ಒಳಪಡಿಸುತ್ತಿದೆ. ಇದು ಪ್ರಕೃತಿ ನಿಯಮ. ಬದಲಾವಣೆಯನ್ನು ಒಂದು ಪ್ರವಾಹಕ್ಕೆ ಹೋಲಿಸಬಹುದು. ಪ್ರವಾಹದ ಎದುರು ಈಜುತ್ತೇನೆ ಎಂಬುದು ಹುಚ್ಚು ಸಾಹಸವಾಗುತ್ತದೆ. ಹೀಗೇನಾದರೂ ನಾವು ನಡಕೊಂಡರೆ ಪ್ರವಾಹದೊಂದಿಗೆ ಕೊಚ್ಚಿಕೊಂಡು ಹೋಗುತ್ತೇವೆ. ಪ್ರವಾಹದ ಜೊತೆಯಾಗಿ ಸೇರಿಕೊಂಡು ಪ್ರವಾಹದೊಂದಿಗೆ ನಾವು ಕೂಡಾ ಈಜಿಕೊಂಡು ಹೋಗುವುದು ಜಾಣತನ. ಆದುದರಿಂದ ಬದಲಾವಣೆ …

Read More »

ಧರ್ಮದ ದುರುಪಯೋಗ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಮಹಾನ್ ಸಾಮ್ರಾಜ್ಯವಾದಿ ಸರ್ವಾಧಿಕಾರಿ ನೆಪೋಲಿಯನ್‍ನ ಕ್ರೂರ ಕೃತ್ಯಗಳ ಕುರಿತು ಕೇಳದವರು ವಿರಳ. ಅವನ ಎಲ್ಲ ಶ್ರಮವೂ ತನ್ನ ಶೋಷಕ ಆಧಿಪತ್ಯವನ್ನು ಶಾಶ್ವತಗೊಳಿಸುವುದಕ್ಕಾಗಿತ್ತು. ಕ್ರಿ.ಶ. 1808ರಲ್ಲಿ ಆತ ಇಂಪೀರಿಯಲ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದನು. ಅದರ ಎಲ್ಲ ವಿದ್ಯಾರ್ಥಿಗಳೂ ಕಡ್ಡಾಯವಾಗಿ ಕಲಿಯಬೇಕಾದ ಒಂದು ಪ್ರಶ್ನಾವಳಿಯನ್ನು ಇತಿಹಾಸಕಾರರು ಹೀಗೆ ಉದ್ಧರಿಸಿದ್ದಾರೆ. ಪ್ರಶ್ನೆ: ತಮ್ಮನ್ನು ಆಳುವ ಅರಸರ ಬಗ್ಗೆ ಕ್ರೈಸ್ತರಿಗೆ ಇರುವ ಕರ್ತವ್ಯಗಳು ಏನು? ಉತ್ತರ: ಕ್ರೈಸ್ತರು ತಮ್ಮನ್ನಾಳುವ ಅರಸರ ಬಗ್ಗೆ- ವಿಶೇಷವಾಗಿ ಚಕ್ರವರ್ತಿ ನೆಪೋಲಿಯನ್ ಬಗ್ಗೆ ಪ್ರೀತಿ, ಗೌರವ, ವಿಧೇಯತೆ ಮತ್ತು ಭಕ್ತಿಯನ್ನು …

Read More »

ಮುಹರ್ರಂ: ಇತಿಹಾಸದ ಮೈಲುಗಲ್ಲು

@ ಅಬೂಸಲ್‍ವಾನ್ ಹಿಜರಿ ಶಕೆಯ ಚಾಂದ್ರಮಾನ ದಿನಗಣನೆಯ ಮುಹರ್ರಂ ತಿಂಗಳು ಮತ್ತೆ ಬಂದಿದೆ. ಈ ಮುಹರ್ರಂ ತಿಂಗಳು ಇತಿಹಾಸದ ಅನೇಕ ಸ್ಮರಣೀಯ ಘಟನೆಗಳಿಗೆ ಸಾಕ್ಷಿಯಾಗಿದೆ. ಶತಮಾನಗಳಿಂದ ತಲೆ ತಲಾಂತರವಾಗಿ ಮುಸ್ಲಿಮ್ ಸಮುದಾಯವು ಮುಹರ್ರಂನ ಸಂದೇಶವನ್ನು ಸಾರುತ್ತಾ ಬಂದಿದೆ. ಇದು ಇಸ್ಲಾಮಿನ ಮಹತ್ತರವಾದ ತಿಂಗಳುಗಳಲ್ಲಿ ಒಂದಾಗಿದೆ. ಅಲ್ಲಾಹನು ಆಯ್ಕೆಗೊಳಿಸಿದ ಮಾಸಗಳಲ್ಲಿ ಒಂದು ಇದು ಎಂದೂ ಪ್ರವಾದಿರವರು(ಸ) ಹೇಳಿರುತ್ತಾರೆ. ಪವಿತ್ರ ಕುರ್‍ಆನಿನ ಅಲ್ ಫಜ್ರ್ ಅಧ್ಯಾಯದಲ್ಲಿ ಬರುವ ಪ್ರಥಮ ಸೂಕ್ತದಲ್ಲಿ ವಲ್ ಫಜ್ರ್ (ಪ್ರಾತಃ ಕಾಲದ ಆಣೆ) ಎಂದು ಹೇಳಲಾಗಿದ್ದು ಇದು ಮುಹರ್ರಂ ತಿಂಗಳ ಪ್ರಥಮ ಪ್ರಾತಃ …

Read More »

ಸಲಿಂಗ ಕಾಮ: ಇಸ್ಲಾಮ್‍ನ ನಿಲುವು?

ಪ್ರಶ್ನೆ: ಸಲಿಂಗ ಕಾಮದ ಕುರಿತು ಇಸ್ಲಾಮಿನ ನಿಲುವೇನು? ಸುಪ್ರೀಂ ಕೋರ್ಟು ಇದಕ್ಕೆ ಮುಕ್ತ ಅವಕಾಶ ಕೊಟ್ಟು ತೀರ್ಪು ನೀಡಿದೆಯಲ್ಲವೇ? ಉತ್ತರ: ಇಸ್ಲಾಮಿನ ದೃಷ್ಟಿಯಲ್ಲಿ ಸಲಿಂಗ ಕಾಮವು ಘೋರ ಅಪರಾಧವಾಗಿದೆ. ಅದು ಪ್ರಕೃತಿ ವಿರುದ್ಧ ಈ ಅಸಂಸ್ಕ್ರತವೂ ಆದ ಒಂದು ಮಾರ್ಗವಾಗಿದೆ. ಅದು ಮಾನವನ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಕೆಡಿಸಿ ಬಿಡುತ್ತದೆ. ಒಂದು ಸಮಾಜದಲ್ಲಿ ಸಲಿಂಗರತಿಯು ಸಾಮಾನ್ಯವಾಗಿ ಬಿಟ್ಟರೆ ಆ ಸಮಾಜವು ತಲೆಯೆತ್ತಲಸಾಧ್ಯವಾದ ಅಧಃಪತನಕ್ಕೆ ಸಿಲುಕಿದೆಯೆಂಬುದರ ಸಂಕೇತವಾಗಿದೆ. ಈ ನೀಚ ಕೃತ್ಯವನ್ನು ಅಭ್ಯಾಸವಾಗಿ ಮಾಡಿಕೊಂಡಿದ್ದ ಲೂತ್‍ರ ಜನಾಂಗವನ್ನು ಅಲ್ಲಾಹನು ಅತಿ ಕಠಿಣವಾಗಿ ಶಿಕ್ಷಿಸಿ ನಾಶ …

Read More »

ನೆಮ್ಮದಿಯ ಬದುಕಿಗಾಗಿ

ವ್ಯಕ್ತಿತ್ವ ವಿಕಸನ ಯಾರೋ ನಿಮಗೆ ಅವಮಾನ ಮಾಡಿರಬಹುದು. ಮೋಸ ಮಾಡಿರಬಹುದು. ಕಹಿ ನೆನಪುಗಳು ನಿಮ್ಮನ್ನು ಕಾಡುತ್ತಿರಬಹುದು. ದ್ವೇಷಾಗ್ನಿ ಮನಸ್ಸಿನಲ್ಲಿದ್ದರೆ ಅದು ನಿಮ್ಮನ್ನು, ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸುಡುತ್ತದೆ. ಒಬ್ಬ ಸಾಮಾನ್ಯ ಮನುಷ್ಯ ಎಷ್ಟು ಭಾರ ಹೊರಬಲ್ಲ. ಅವನ ಸಾಮರ್ಥ್ಯಕ್ಕಿಂತ ಹೆಚ್ಚು ಭಾರ ಹೊರಬೇಕಾದರೆ ಬೆನ್ನು ಕುಗ್ಗುತ್ತದೆ. ಇನ್ನೂ ಹೆಚ್ಚು ಭಾರ ಬಿದ್ದರೆ ಭಾರ ಹೊರುವ ಅವನ ಕ್ಷಮತೆ ಕುಗ್ಗಿ ಭಾರದ ಕೆಳಗೆ ಸಿಲುಕಿ ಅವನು ಸಮಾಧಿ ಆಗಬಹುದು. ದ್ವೇಷ ಸಹ ಒಂದು ಭಾರ ಇದ್ದ ಹಾಗೆ. ನಿಮ್ಮ ಮನಸ್ಸಿನಲ್ಲಿ ಅದನ್ನು ಹೊತ್ತ್ತುಕೊಂಡು, ನೀವು ಎಲ್ಲಿ …

Read More »

ಸಾಯಿಸಿ ಉಳಿಸಿಕೊಳ್ಳಬೇಕಾದ ಧರ್ಮ ಯಾವುದು?

ಯಾಸೀನ್ ಭಟ್ಕಳ್ ಯಾರು ಮತ್ತು ಇಂಡಿಯನ್ ಮುಜಾಹಿದೀನ್ ಏನು ಅನ್ನುವ ಪ್ರಶ್ನೆಯನ್ನು ಏಳೆಂಟು ವರ್ಷಗಳ ಹಿಂದೆ ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಎತ್ತಲಾಗಿತ್ತು. ಇಂಡಿಯನ್ ಎಂಬ ಆಂಗ್ಲ ಪದ ಹಾಗೂ ಮುಜಾಹಿದೀನ್ ಎಂಬ ಅರೇಬಿಕ್ ಪದಗಳು ಜೊತೆ ಸೇರಿಕೊಂಡು ಉಂಟಾದ ಇಂಡಿಯನ್ ಮುಜಾಹಿದೀನ್ ಎಂಬ ಸಂಘಟನೆಯ ಫಲಾನುಭವಿಗಳು ಯಾರು, ಮೂಲ ಕೇಂದ್ರ ಎಲ್ಲಿ, ಅದರ ಕಾರ್ಯಚಟುವಟಿಕೆ ಹೇಗೆ, ಯಾವ ಉದ್ದೇಶದಿಂದ ಅದನ್ನು ಹುಟ್ಟು ಹಾಕಲಾಗಿದೆ.. ಎಂಬೆಲ್ಲ ಪ್ರಶ್ನೆಗಳು ಆಗ ಮುಂಚೂಣಿಯಲ್ಲಿತ್ತು. ಬಳಿಕ ಸ್ಪಷ್ಟಗೊಂಡ ಸಂಗತಿ ಏನೆಂದರೆ, ಅದು ದೇಶದಲ್ಲಿ ಯಾವ ಸಮಾಜ ಸೇವಾ ಕಾರ್ಯವನ್ನೂ …

Read More »

ಪ್ರಕೃತಿ ವಿಕೋಪಕ್ಕೆ ಕಾರಣಗಳು

 @ ವಿ.ಟಿ. ಅಬ್ದುಲ್ಲ ಕೋಯ ತಂಙಳ್ ಇತ್ತೀಚೆಗೆ ನಡೆದ ಪ್ರಳಯದಿಂದ ಮನೆ ಮಠಗಳನ್ನು ಕಳೆದು ಅನೇಕ ರೀತಿಯ ಸಂಕಷ್ಟಗಳಿಗೆ ಗುರಿಯಾಗಿ ಹಲವರು ಸಂತ್ರಸ್ತ ಶಿಬಿರಗಳಲ್ಲಿ ಕಳೆಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ನಮಗೆ ಬರಗಾಲ ಬಾಧಿಸಿದಾಗ ಚರ್ಚಿಸಿ ಆ ಕುರಿತು ಪರಿಹಾರ ಮಾರ್ಗೋಪಾಯಗಳಿಗೆ ಪ್ರಯತ್ನಿಸಿದ್ದೆವು. ಪ್ರಾರ್ಥಿಸಿದ್ದೆವು. ವಿಶ್ವದಲ್ಲಿ ಹಲವೆಡೆ ಬರಗಾಲ, ಭೂಕಂಪ ಪ್ರಕೃತಿ ವಿಕೋಪದಂತಹ ದುರಂತಗಳು ಸಂಭವಿಸಿವೆ. ಸಹಸ್ರಾರು ಜನರು ಒಂದೇ ಪ್ರದೇಶದಲ್ಲಿ ಒಮ್ಮೆಲೇ ಬಲಿಯಾದ ಘಟನೆಗಳೂ ನಡೆದಿವೆ. ಪರಮ ದಯಾಮಯನಾದ ಸೃಷ್ಟಿಕರ್ತನು ಇರುವಂತೆಯೇ ಇವೆಲ್ಲವೂ ನಡೆದಿವೆ. ಹೀಗಿರುವಾಗ ದುರ್ಬಲರಾದ ಯಾವುದೇ ಅಪರಾಧವೆಸಗದ ವಾರ್ಧಕ್ಯದ …

Read More »

ಕೇರಳ ಪ್ರವಾಹ ಪೀಡಿತರ ಸೇವೆಗಾಗಿ ತೆರಳಿದ ಕರ್ನಾಟಕ ಹೆಚ್.ಆರ್.ಎಸ್. ತಂಡದ ಅನುಭವ

ದುರಂತ ಭೂಮಿಯ ದುಃಖಗಳು ಸಲೀಮ್ ಬೋಳಂಗಡಿ ಆಗಸ್ಟ್ 15ರಂದು ಫಜ್ರ್ ನಮಾಝ್ ಮುಗಿಸಿ ಮನೆಯಿಂದ ಹೊರಬಂದಾಗ ಮನೆಯ ಸುತ್ತಲೂ ನೀರು ತುಂಬಿತ್ತು. ಕಾಲಿಗೆ ಮೂರು ಶಸ್ತ್ರಕ್ರಿಯೆ ನಡೆಸಿದ್ದರಿಂದ ನನ್ನ ತಾಯಿ ನಡೆಯುತ್ತಿರಲಿಲ್ಲ. ಅವರನ್ನು ಎತ್ತಿಕೊಂಡೇ ಹೊರಬಂದೆ. ಮೂವರು ಮಕ್ಕಳು ಮತ್ತು ಹೆಂಡತಿಯನ್ನು ಕರೆದುಕೊಂಡು ಹೆಂಡತಿಯ ಮನೆಯಲ್ಲಿರಿಸಿದೆ. ಆಗ ನಾನು ತೊಟ್ಟ ಶರ್ಟ್ ಮತ್ತು ಲುಂಗಿಯನ್ನು ಹೊರತು ಪಡಿಸಿ ನಮ್ಮಲ್ಲಿ ಬೇರೇನೂ ಇರಲಿಲ್ಲ. ಸ್ವಲ್ಪ ಕಳೆಯುವಷ್ಟರಲ್ಲಿ ಹೆಂಡತಿಯ ಮನೆಯೊಳಗೂ ಪ್ರವಾಹ ನುಗ್ಗಿತು. ಅಲ್ಲಿಯೂ ಪ್ರವಾಹ ಉಕ್ಕಿ ಹರಿಯ ತೊಡಗಿದಾಗ ವಿಧಿಯಿಲ್ಲದೆ ಕುನ್ನಂಪುರದ ಅಂಗನವಾಡಿಯ ಹೆಲ್ತ್ ಸೆಂಟರ್‍ನ …

Read More »

ಹ. ಆಯಿಶಾ(ರ) – ಮೂರು ಉಪದೇಶಗಳು

@ ಮಾಯಿಲ್ ಖೈರಾಬಾದಿ ಒಂದು ಸ್ವಾರಸ್ಯಕರ ಘಟನೆ ನೋಡೋಣ. ಕಾಸಿಮ್ ಹಾಗೂ ಇಬ್ನು ಅಬೀ ಅತೀಕ್‍ರು ಆಯಿಶಾ(ರ)ರ ಸೋದರ ಪುತ್ರರು. ಇಬ್ನು ಅಬೀ ಅತೀಕ್‍ರು ಕುರೈಶ್ ಮಾತೆಯ ಪುತ್ರರು ಹಾಗೂ ಕಾಸಿಮ್ ದಾಸಿಯ ಪುತ್ರರಾಗಿದ್ದರು. ಕುರೈಶ್ ಮಾತೆಯ ಪುತ್ರರಾಗಿದ್ದ ಇಬ್ನು ಅಬೀ ಅತೀಕ್‍ರು ಅತ್ಯುತ್ತಮ ರೀತಿಯಲ್ಲಿ ಅರಬಿಯಲ್ಲಿ ಮಾತಾಡುತ್ತಿದ್ದರು, ಓದುತ್ತಿದ್ದರು. ಆದರೆ ಕಾಸಿಮ್‍ರು ಅರಬಿಯಲ್ಲಿ ಮಾತಾಡುವ ಶೈಲಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಹ. ಆಯಿಶಾ(ರ)ರು ಕಾಸಿಮ್ ರಿಗೆ, “ನೀವು ಇಬ್ನು ಅಬೀ ಅತೀಕ್‍ರಂತೆಯೇ ಮಾತನಾಡಿರಿ” ಎಂದು ಹುರಿದುಂಬಿಸುತ್ತಿದ್ದರು. ಆಯಿಶಾ(ರ)ರ ಹೆಚ್ಚಿನ ಗಮನದ ಪರಿಣಾಮ ಕಾಸಿಮ್‍ರು ತಮ್ಮ …

Read More »

ಅಪರಾಧಗಳ ದ್ವಾರ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ವಿಕ್ಟರ್ ಹ್ಯೂಗೋನ ‘ಬಡವರು’ ಎಂಬ ವಿಶ್ವವಿಖ್ಯಾತ ಕೃತಿಯಲ್ಲಿ ಪ್ರಧಾನ ಕಥಾ ಪಾತ್ರ. ಹಸಿವಿನಿಂದ ಬಳಲಿ ಬೆಂಡಾದ ಮಕ್ಕಳ ದೈನ್ಯತೆಯನ್ನು ಕಂಡು ಸಹಿಸದಾದಾಗ ಫೆವರೋಲಾ ಚರ್ಚ್‍ನ ಪಕ್ಕದಲ್ಲಿರುವ ಅಂಗಡಿಯಿಂದ ಒಂದು ತುಂಡು ರೊಟ್ಟಿ ಕದ್ದು ತಂದ. ಅದಕ್ಕಾಗಿ ಆತನನ್ನು ಐದು ವರ್ಷಗಳ ಕಠಿಣ ಶಿಕ್ಷೆಗೆ ಗುರಿಪಡಿಸಲಾಯಿತು. ಅಧಿಕಾರಿಗಳು ಆತನ ಕೊರಳಿಗೆ ಕಬ್ಬಿಣದ ಪಟ್ಟಿ ತೊಡಿಸಿ ಸಂಕೋಲೆಗಳಿಂದ ಬಿಗಿದು ಫೆವೆರೋಲಾದಿಂದ ತುಲೋಂಗಿಗೆ ಕರೆದೊಯ್ದರು. ನಾಲ್ಕು ವರ್ಷದ ಕಠಿಣ ಶಿಕ್ಷೆಯನ್ನು ಅನುಭವಿಸಿದ ಬಳಿಕ ಓಡಿ ಹೋಗಲು ಯತ್ನಿಸಿದ್ದರಿಂದ ಕಾರಣ ಶಿಕ್ಷಾವಧಿ ಹತ್ತೊಂಬತ್ತು …

Read More »