Breaking News
Home / ವಾರ್ತೆಗಳು

ವಾರ್ತೆಗಳು

ಶಹೀದ್ ಅಶ್ಫಾಕುಲ್ಲಾಹ್ ಖಾನ್‍ರ 119 ಜನ್ಮ ದಿನ; ಬಲಿದಾನವನ್ನು ಮರೆಯಲಾದೀತೆ?

ಹೊಸದಿಲ್ಲಿ, ಅ. 23: ಉಪರಾಷ್ಟ್ರಪತಿ ವೆಂಕಯ್ಯನಾಯಿಡು ಮಂಗಳವಾರ ಶಹೀದ್ ಅಶ್ಫಾಕುಲ್ಲಾ ಖಾನ್‍ರ 119ನೇ ಜನ್ಮದಿನದ ಕುರಿತು ಟ್ವೀಟ್ ಮಾಡಿದ್ದು ” ಇಂದು ಅಶ್ಫಾಕುಲ್ಲಾರ ಜನ್ಮದಿನವಾಗಿದೆ. ಬಲಿದಾನದ ಪುಣ್ಯ ಸ್ಮತಿಗೆ ಪ್ರಣಾಮ ಮಾಡುವೆ. ದೇಶಕ್ಕಾಗಿ ಹುತಾತ್ಮರಾದ ರಾಷ್ಟ್ರದ ಚೇತನ ಅವರು ಎಂದು ಹೇಳಿದರು. ಅಶ್ಫಾಕುಲ್ಲಾ ಉತ್ತರ ಪ್ರದೇಶ ಶಹಜಾನ್ ಪುರದವರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಮುಂಚೂಣಿಯ ಸದಸ್ಯನಾಗಿದ್ದರು. ಅಶ್ಫಾಕುಲ್ಲಾ ಅಕ್ಟೋಬರ್ 22, 1900ರಲ್ಲಿ ಉತ್ತರ ಪ್ರದೇಶದ ಶಾಜಹಾನ್ ಪುರದಲ್ಲಿ ಜನಿಸಿದರು. …

Read More »

ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಲು ಸೌದಿ ಅರೇಬಿಯ ಭೇಟಿಗೂ ಸಿದ್ಧ: ಇರಾನ್ ವಿದೇಶ ಸಚಿವ

ಟೆಹ್ರಾನ್, ಆ. 23: ಸೌದಿ ಅರೇಬಿಯ ಮತ್ತು ಇರಾನ್ ಪರಸ್ಪರ ಭಿನ್ನಮತವನ್ನು ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಮುಂದಿಡುವ ಲಕ್ಷಣಗಳು ಗೋಚರಿಸಿವೆ. ಈ ವಿಷಯದಲ್ಲಿ ತಾನು ಸೌದಿ ಅರೇಬಿಯ ಸಂದರ್ಶಿಸಲು ಸಿದ್ಧ ಎಂದು ಇರಾನಿನ ವಿದೇಶ ಸಚಿವ ಸಾರಿಫ್ ಹೇಳಿದರು. ಕಳೆದ ದಿವಸ ಟೆಹ್ರಾನ್‍ನಲ್ಲಿ ಅಂತಾರಾಷ್ಟ್ರೀಯ ಕಾನೂನು , ಏಕಪಕ್ಷೀಯ ನಡೆ ಎಂಬ ವಿಷಯದ ಮೇಲೆ ನಡೆದ ಸಮ್ಮೇಳನದಲ್ಲಿ ಅವರು ಮಾತಾಡುತ್ತಾ ಭಿನ್ನಾಭಿಪ್ರಾಯ ಬಗೆಹರಿಸಲು ಸೌದಿಯೊಂದಿಗೆ ಚರ್ಚಿಸಲು ಸಿದ್ಧ ಎಂದು ತಿಳಿಸಿದರು. …

Read More »

ಮಸೀದಿಗೆ ಹಾನಿ: ಮುಸ್ಲಿಮರ ಕ್ಷಮೆ ಯಾಚಿಸಿದ ಹಾಂಕಾಂಗ್ -ವೀಡಿಯೊ

ಹಾಂಕಾಂಗ್, ಅ. ರವಿವಾರ ರಾತ್ರೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ವೇಳೆ ನಗರದ ದೊಡ್ಡ ಮಸೀದಿಗೆ ಹಾನಿಯಾಗಿದ್ದು, ಸೋಮವಾರ ಸ್ವಾಯತ್ತ ಪ್ರದೇಶದ ಮುಖ್ಯ ಅಧಿಕಾರಿ ಕೆರಿ ಲೆಮ್ ಮತ್ತು ಪೊಲೀಸ್ ಮುಖ್ಯಸ್ಥರು ಘಟನೆಗಾಗಿ ಮುಸ್ಲಿಮರಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಧಿಕಾರಿಗಳ ಕ್ಷಮೆ ಯಾಚನೆಯಿಂದ ಗೊಂದಲ ಪರಿಹಾರವಾಗಿದ್ದು ಹಾಕಾಂಗಿನ ಮುಸ್ಲಿಮ್ ಸಮುದಾಯ ಶಾಂತಿ ಕಾಪಾಡಬೇಕೆಂದು ಮುಸ್ಲಿಮ್ ನಾಯಕರು ಕರೆ ನೀಡಿದ್ದಾರೆ. ಪೊಲೀಸರ ಜಲಫಿರಂಗಿಯಿಂದ ಮಸೀದಿಯ ಗೋಡೆ ಹಾನಿಗೊಳಗಾಗಿತ್ತು. ಪ್ರಜಾಪ್ರಭುತ್ವಾದಿಗಳ ಮೆರವಣಿಗೆ …

Read More »

ಮುತ್ತಲಾಕ್ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಮುಸ್ಲಿಂ ಪರ್ಸನಲ್ ಲಾ ದಿಂದ ಸುಪ್ರೀಂಕೋರ್ಟಿನಲ್ಲಿ ಅರ್ಜಿ

ಹೊಸದಿಲ್ಲಿ, ಅ. 22: ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಹಿಳಾ (ವಿವಾಹ ಸಂರಕ್ಷಣೆ ಅಧಿನಿಯಮ) ಆಧಿನಿಯಮ 2019ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ. ತಲಾಕ್ ಬಿದ್‍ಅತ್ ಅನ್ನು ಅಪರಾಧ ಎನ್ನುವುದು ಅಸಂವಿಧಾನಾತ್ಮಕ ಎಂದು ಪರ್ಸನಲ್ ಲಾ ಬೋರ್ಡು ವಾದಿಸಿದೆ. ಎನ್‍ಐಎ ಸೋಮವಾರ ಮುತ್ತಲಾಕ್ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವುದನ್ನು ವರದಿ ಮಾಡಿದೆ. ಕಳೆದ ಜುಲೈ ಮೂವತ್ತೊಂದರಂದು ಕೇಂದ್ರ ಸರಕಾರ …

Read More »

82 ಕೋಟಿ ಜನರು ಹಸಿವಿನಲ್ಲಿ; ಫೋಲಾಗುತ್ತಿರುವ ಆಹಾರ 100 ಕೋಟಿ ಟನ್

ನ್ಯೂಯಾರ್ಕ್, ಅ. 22: ಜಗತ್ತಿನಲ್ಲಿ 82 ಕೋಟಿ ಜನರು ಆಹಾರ ಕೊರತೆ ಎದುರಿಸುತ್ತಿದ್ದಾರೆ. ಆದರೆ ನೂರು ಕೋಟಿ ಟನ್ ಆಹಾರ ವೇಸ್ಟ್ ಆಗಿತ್ತಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಜಗತ್ತಿನ ಬೃಹತ್ ಆಹಾರ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟನಿಯೋ ಗುಟರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಸಿಯುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಾ ಇದೆ. ಇದೇ ಸಂದರ್ಭದಲ್ಲಿ ಫೋಲಾಗುವ ಆಹಾರದ ಪ್ರಮಾಣ ಕಂಡಾಗ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು …

Read More »

ಕುರ್‍ಆನ್ ಫಾರ್ ಆಂಡ್ರಾಯಿಡ್

ವಿಕೆ ಅಬ್ದು ಆಂಡ್ರಾಯಿಡ್ ಫೋನ್ ಉಪಯೋಗಿಸುವವರಿಗೆ ಈಗ ಪ್ಲೇ ಸ್ಟೋರಿನಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಈಗ ಇಪ್ಪತ್ತೆಂಟು ಲಕ್ಷ ಆಪ್‍ಗಳು ಲಭ್ಯವಿದ್ದು ಇದರಲ್ಲಿ ಪವಿತ್ರ ಕುರ್‍ಆನ್‍ಗೆ ಸಂಬಂಧಿಸಿದ ನೂರಾರು ಆಪ್‍ಗಳೂ ಸೇರಿವೆ. ಹೆಚ್ಚು ಜನಪ್ರಿಯ ಮತ್ತು ಜನಪ್ರಿಯವಲ್ಲದ್ದೂ ಇವೆ. ಪ್ರತಿಯೊಂದು ಆಪ್‍ನಲ್ಲಿ ಬೇರೆ ಬೇರೆ ರೀತಿಯ ಕಾರ್ಯ, ಮತ್ತು ಗುರಿಯಿರಬಹುದು. ಆದರೆ ಜಗತ್ತಿನಾದ್ಯಂತ ವಿವಿಧ ಭಾಷೆಗಳ ಪವಿತ್ರ ಕುರ್‍ಆನ್ ಅನುವಾದ ವ್ಯಾಖ್ಯಾನಗಳನ್ನು ಆಪ್ ಮೂಲಕ ನೋಡುವ ಸೌಕರ್ಯ ದೊರೆಯುತ್ತಿದೆ. ಇವುಗಳಲ್ಲಿ …

Read More »

ಬಹ್ರೈನ್ ಶೃಂಗದಲ್ಲಿ ಇಸ್ರೇಲ್ ಪ್ರಾತಿನಿದ್ಯ ವಿರೋಧಿಸಿದ ಹಮಾಸ್

ಮನಾಮ, ಅ.21: ಬಹ್ರೈನ್‍ನಲ್ಲಿ ನಡೆಯುವ ಸಮುದ್ರ ತೀರದ ಸುರಕ್ಷಿತತೆಗೆ ಸಂಬಂಧಿಸಿದ ಶೃಂಗದಲ್ಲಿ ಇಸ್ರೇಲಿನ ಪ್ರಾತಿನಿಧ್ಯವನ್ನು ಹಮಾಸ್ ವಿರೋಧಿಸಿದೆ. ಸೋಮವಾರ ಅಮೆರಿಕದ ನೇತೃತ್ವದಲ್ಲಿ ಹಡಗು ಮೇಲೆ ದಾಳಿಯ ಬೆದರಿಕೆಯ ಕುರಿತು ಚರ್ಚಿಸಲು ಶೃಂಗ ಸಮ್ಮೇಳನ ನಡೆಯುತ್ತಿದೆ. ಶೃಂಗದಲ್ಲಿ ಇಸ್ರೇಲ್ ಭಾಗವಹಿಸುವುದನ್ನು ಹಮಾಸ್ ಖಂಡಿಸಿದೆ. ಇದು ವಲಯದ ಸುರಕ್ಷೆ ಮತ್ತು ಇಸ್ರೇಲಿನ ಅತಿಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ ವೈಫಲ್ಯವಾಗಿದೆ ಎಂದು ಹಮಾಸ್ ವಕ್ತಾರ ಹಸೀಂ ಖಾಸಿಂ ಹೇಳಿದರು. ಈ ರೀತಿ ಇಸ್ರೇಲಿನೊಂದಿಗಿನ ಸಂಬಂಧವನ್ನು ಎಲ್ಲರೂ …

Read More »

ಆಂಧ್ರ ಸರಕಾರದಿಂದ ಇಮಾಮರಿಗೆ ಮನೆ ಕಟ್ಟಲು ಸ್ಥಳ ನೀಡುವ ಯೋಜನೆ

ವಿಜಯವಾಡ, ಅ.21: ಸ್ವಂತ ಮನೆ, ಹಾಗೂ ಜಮೀನಿಲ್ಲದ, ಬಡತನ ರೇಖೆಗಿಂತ ಕೆಳಗಿರುವ ಮಸೀದಿ ಇಮಾಮರಿಗೆ ಸ್ಥಳವನ್ನು ಒದಗಿಸುವ ಯೋಜನೆಯನ್ನು ಆಂಧ್ರ ಸರಕಾರ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ. ಆಂಧ್ರ ಪ್ರದೇಶ ವಕ್ಫ್ ಬೋರ್ಡಿನ ಅಧೀನದಲ್ಲಿ ಯೋಜನೆಗೆ ರೂಪು ನೀಡಲಾಗಿದ್ದು ಅರ್ಹ ಫಲಾನುಭವಿಗಳು ಸಂಬಂಧಿಸಿದ ವಾರ್ಡ್ ಮೆಂಬರ್ ಅಥವಾ ಪಂಚಾಯತ್‍ನಿಂದ ದೃಢೀಕರಣ ಪತ್ರ ಪಡೆದು ಅದರೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಆಂಧ್ರ ವಕ್ಫ್ ಬೋರ್ಡು ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ಸಯ್ಯಿದ್ ಶಬ್ಬೀರ್ ಭಾಷ …

Read More »

ಮಂಗಳೂರು: ಬಂದರ್ ನ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಗೆ ಬೆಂಕಿ; ಸ್ಥಳೀಯ ಮುಸ್ಲಿಂ ಯುವಕರಿಂದಾಗಿ ತಪ್ಪಿದ ಭಾರೀ ಅನಾಹುತ

ಮಂಗಳೂರು: ಸೆ. 17- ಇಲ್ಲಿನ ಬಂದರ್ ನ ಬೀಬಿ ಅಲಾಬಿ ರಸ್ತೆಯಲ್ಲಿರುವ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಗೆ ಬುಧವಾರ ರಾತ್ರಿ 10ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯ ಮುಸ್ಲಿಂ ಯುವಕರು ತಕ್ಷಣ ಧಾವಿಸಿ ಬಂದು ಕಾರ್ಯಪ್ರವೃತ್ತರಾದುದರಿಂದ ಭಾರೀ ಜೀವ ಹಾನಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಸನ್ಮಾರ್ಗ ಪತ್ರಿಕೆ ಕಛೇರಿಯಿರುವ ಹಿದಾಯತ್ ಸೆಂಟರ್ ನ ಪಕ್ಕದ ಕಟ್ಟಡವಾದ M.M. ಕಾಂಪ್ಲೆಕ್ಸ್ ನಲ್ಲಿ ಕೆ ಸಿ ಸುರೇಶ್ ಅವರು …

Read More »

ಕೊಡಗು ಸಿದ್ದಾಪುರ ಮಹಾ ಪ್ರಳಯದಿಂದ ಪರೋಕ್ಷವಾಗಿ ತತ್ತರಿಸಿದ ಕೂಲಿ ಕಾಮಿ೯ಕರಿಗೆ HRS ವತಿಯಿಂದ ಬಟ್ಟೆ ಹಾಗೂ ಪಾತ್ರೆಗಳ ಉಚಿತ ಮಹಾ ಸಂತೆ

ಸಿದ್ದಾಪುರ: ಇತ್ತೀಚೆಗೆ ಸಂಭವಿಸಿದ ಮಹಾ ಪ್ರಳಯದಿಂದ ಸಂತ್ರಸ್ತರಾದ ಜನರಿಗೆ HRS ವತಿಯಿಂದ ಜಾತಿ ಮತ ಭೇದವಿಲ್ಲದೇ ಹತ್ತು ಹಲವು ಸಹಾಯ ಸಹಕಾರಗಳನ್ನು ನೀಡಿ ಸಮಾಜ ಸೇವಾ ಕಾಯ೯ಗಳಲ್ಲಿ ಮಾದರಿಯಾಗಿರುವ ಸಂಸ್ಥೆ ಈ ಹಿಂದೆ ಸಂತ್ರಸ್ತರಿಗಾಗಿ ಸಿದ್ದಾಪುರದ ಹಿರಾ ಮಸೀದಿಯ ಕೆಳ ಅಂತಸ್ತಿನಲ್ಲಿ ಸೂಪರ್ ಮಾಕೆ೯ಟನ್ನು ತೆರೆದು ಅಗತ್ಯ ವಸ್ತುಗಳನ್ನು ವಿತರಿಸಲಾಗಿತ್ತು. ಅದೇ ರೀತಿ ಪ್ರಳಯದಿಂದ ಪರೋಕ್ಷವಾಗಿ ನೊಂದ ಬಡ ಕೂಲಿ ಕಾಮಿ೯ಕರಿಗಾಗಿ ಉಡುಪುಗಳ ಉಚಿತ ಸಂತೆಯನ್ನು ವಾರದ ಹಿಂದೆ ನಡೆಸಲಾಗಿತ್ತು. …

Read More »