Breaking News
Home / ಲೇಖನಗಳು

ಲೇಖನಗಳು

ಧನಿಕ ಉಸ್ಮಾನ್‍ರ ಬಾವಿ

ಹಝ್ರತ್ ಉಸ್ಮಾನ್(ರ) ಮಕ್ಕದ ಧನಿಕ ಕುರೈಶಿ ವ್ಯಕ್ತಿ. ಅವರು ಮದೀನಕ್ಕೆ ಬಂದಾಗ ಮದೀನಾದವರಿಗೆ ಕುಡಿಯುವ ನೀರಿನ ತಾಪತ್ರಯ ಇತ್ತು. ಇದ್ದ ಒಂದು ಬಾವಿ ಯಹೂದಿ ವ್ಯಕ್ತಿಯ ಕೈಯಲ್ಲಿತ್ತು. ಆತ ನೀರಿನ ವ್ಯಾಪಾರ ಮಾಡಿ ಹಣ ಸಂಪಾದಿಸುತ್ತಿದ್ದ. ದುಪ್ಪಟ್ಟು ಹಣಕೊಟ್ಟು ಅವನಿಂದ ಇತರರು ನೀರು ಸಂಗ್ರಹಿಸಬೇಕಿತ್ತು. ಇದು ಕಂಡು ಜನರು ಪ್ರವಾದಿವರ್ಯರ(ಸ) ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡರು. ಪ್ರವಾದಿ(ಸ) ಈ ಸಮಸ್ಯೆ ಪರಿಹಾರಕ್ಕೆ ಮುಂದಾದರು. ನೀರು ಎಲ್ಲರಿಗೂ ನಿರಾಂತಕವಾಗಿ ಸಿಗಬೇಕು. ಆದರೆ …

Read More »

ಚೆಂದದ ಹುಡುಗಿಯನ್ನು ಮದುವೆಯಾಗುವುದು..

ಕೆಲವರ ಮನಸ್ಸಿನಲ್ಲಿ ತಾನು ಮದುವೆಯಾಗುವ ಹುಡುಗಿ ಚೆಂದಗಿರಬೇಕಿದೆಂದಿರುತ್ತದೆ. ತಪ್ಪಲ್ಲ. ಚಂದ ಮಾತ್ರ ಸಾಲದು ಚಂದದೊಂದಿಗೆ ಅವಳ ಧಾರ್ಮಿಕ ಶಿಕ್ಷಣ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ಬಯಸಿದ್ದೆಲ್ಲವೂ ಸಿಗಬೇಕೆಂದಿಲ್ಲ. ಸಿಕ್ಕದ್ದನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ. ಚಂದವಿಲ್ಲದ ಹುಡುಗಿಯರಿರಲಿ, ಹುಡುಗರಿರಲಿ ಅವರೂ ಅಲ್ಲಾಹನ ಸೃಷ್ಟಿಗಳಾಗಿದ್ದಾರೆ. ಒಟ್ಟಿನಲ್ಲಿ ಚಂದ ಅಂದರೆ ಧರ್ಮ, ಗುಣ ನಡತೆಯೂ ಚಂದ ಆಗಿರಬೇಕು. ವಿವಾಹ ಒಂದು ಒಡಂಬಡಿಕೆ ಆದರೂ ತಾತ್ಕಾಲಿಕವಾದುದಲ್ಲ. ಈ ಒಪ್ಪಂದವನ್ನು ಮುರಿಯುವುದು ಅಲ್ಲಾಹನಿಗೆ ಅರೋಚಕವಾಗಿದೆ ಎಂಬುದನ್ನು ನಾವು ಅರಿತಿರಬೇಕು. ಜೀವನವಿಡೀ …

Read More »

ಪ್ರೀತಿ ಬೆಳೆಸಬೇಕಾದ ಸತ್ಯ ಬೋಧಕರು

ಶೈಕ್ ಮುಹಮ್ಮದ್ ಕಾರಕುನ್ನು ಇಂದು ನಮ್ಮ ನಾಡಲ್ಲಿ ಅತಿ ಪ್ರಬಲವಾಗಿ ದ್ವೇಷ ಭಾವನೆಯನ್ನು ಉತ್ಪಾದಿಸಲಾಗುತ್ತಿದೆ. ವೈರಿಗಳನ್ನು ಬೆಳೆಸಲಾಗುತ್ತಿದೆ. ನಿಜವಾದ ದೇವನ ದಾಸರು ದ್ವೇಷವನ್ನು ಪ್ರೀತಿಯಿಂದ ಎದುರಿಸಬೇಕಿದೆ. ಶತ್ರುತ್ವವವನ್ನು ಸೌಹಾರ್ದದಿಂದಲೂ. ವಿಶ್ವಾಸಿಗಳ ಹೃದಯ ವಿಶ್ವದಷ್ಟು ವಿಶಾಲವಾಗಿರಬೇಕು. ಅದರಲ್ಲಿ ಪ್ರಾಮಾಣಿಕ ಪ್ರೀತಿ ತುಂಬಿರಬೇಕು. ಮನುಷ್ಯರನ್ನು ಮಾತ್ರವಲ್ಲ. ವಿಶ್ವದಲ್ಲಿರುವುದೆಲ್ಲವನ್ನೂ ಪ್ರೀತಿಸುವುದು ವಿಶ್ವಾಸಿಗಳ ಹೊಣೆಯಾಗಿದೆ. ಅವೆಲ್ಲವೂ ನಮಗೆ ಜೀವ ಕೊಟ್ಟ ಅಲ್ಲಾಹನ ಸೃಷ್ಟಿಗಳೆಂಬುದು ನಮ್ಮ ಮನಸ್ಸಿನಲ್ಲಿರಬೇಕು. ಪ್ರೀತಿ ಪನ್ನೀರ ಹೂವಂತೆ. ಅದನ್ನು ಎಷ್ಟು ಮೆಟ್ಟಿದರೂ ಅದರ …

Read More »

ಅತ್ಯಾಚಾರಿಗೆ ಉಗ್ರ ಶಿಕ್ಷೆ ನೀಡಲು ಇಸ್ಲಾಮ್ ಕರೆ ಕೊಡುವುದಾದರೂ ಯಾಕೆ?

ಮಾನವ ಜೀವ, ಪವಿತ್ರ ಕಅಬಾದ ಪವಿತ್ರತೆಗೆ ಸಮಾನ ಎಂದು ಇಸ್ಲಾಮಿನ ಘೋಷಣೆಯಾಗಿದೆ. “ಒಬ್ಬ ಮಾನವನ ಕೊಲೆ ಅಥವಾ ಭೂಮಿಯಲ್ಲಿ ಕ್ಷೋಭೆ ಮಾಡುವ ಕಾರಣಕ್ಕಾಗಿ ಹೊರತು ಯಾರಾದರೂ ಒಬ್ಬ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವಕೋಟಿಯನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವಕೋಟಿಗೆ ಜೀವದಾನ ಮಾಡಿದಂತೆ” (ಪವಿತ್ರ ಕುರ್‍ಆನ್ – 5: 32) ಎಂಬುದು ಕುರ್‍ಆನಿನ ಸಾರಾಂಶವಾಗಿದೆ. ಇಲ್ಲಿ ಜಾತಿ ಮತ ದೇಶ ಭಾಷೆ ಧರ್ಮದ …

Read More »

ಸತ್ಯಸಾಕ್ಷ್ಯ(ಶಹಾದತ್) ನಿರ್ವಹಿಸಿರಿ

ಜಮಾಲ್ ಕೆ. ಅಶ್ಹದು ಅನ್‍ಲಾ ಇಲಾಹ ಇಲ್ಲಲ್ಲಾಹು ವ ಅಶ್ಹದು ಅನ್ನ ಮುಹಮ್ಮದುರ್ರಸೂಲುಲ್ಲಾಹ್ (ಅಲ್ಲಾಹನಲ್ಲದೆ ಅನ್ಯದ ದೇವನಿಲ್ಲ ಮುಹಮ್ಮದ್ ಅವನ ದಾಸರಾಗಿದ್ದಾರೆ) ಎಂಬ ಪವಿತ್ರ ವಚನ ಮನಸಾರೆ ದೃಢವಾಗಿರಿಸಿ ನಾಲಿಗೆಯಿಂದ ಉಚ್ಚರಿಸಿ ಶಹಾದತ್ ದೃಢೀಕರಿಸಿದಾಗ ಓರ್ವನು ಸತ್ಯವಿಶ್ವಾಸಿಯಾಗುವನು. ಅದರರ್ಥ ಓರ್ವ ಮುಸ್ಲಿಮ್ ಆಗುವುದರೊಂದಿಗೆ ಆತ ಇಸ್ಲಾಮೀ ಕಾರ್ಯಕರ್ತನೂ ಆಗುವನು ಎಂದಾಗಿದೆ. ಅಥವಾ ಕಲಿಮಾ ಅಥವಾ ಸಾಕ್ಷ್ಯ ವಚನ ವ್ಯಕ್ತಿ, ಕುಟುಂಬ, ಸಮಾಜ, ದೇಶ ಎಂದು ಮುಂತಾದ ಜೀವನದ ಎಲ್ಲ ಕ್ಷೇತ್ರಗಳಲ್ಲಿ …

Read More »

ಪ್ರವಾದಿ ಮುಹಮ್ಮದರ(ಸ) ಕಿರು ಚಿತ್ರ – ಸ್ವಾಮಿ ಶಿವಾನಂದ ಸರಸ್ವತಿ

ಇಸ್ಲಾಮಿನ ಪ್ರವಾದಿಯೆಂದು ಕರೆಯಲಾಗುವ ಮುಹಮ್ಮದ್‍ರು ಮಕ್ಕಾದ ಕುರೈಷ್ ಗೋತ್ರದಲ್ಲಿ ಜನಿಸಿದರು. ವ್ಯಾಪಾರವು ಅವರ ಗೋತ್ರದ ಕಸುಬಾಗಿತ್ತು. ಇಸ್ಲಾಮಿನ ಪ್ರವಾದಿಯವರು ಸರಳ ಮತ್ತು ದಾರಿದ್ರ್ಯದ ಜೀವನ ಸಾಗಿಸಿದರು. ದೀಪದೆಣ್ಣೆಯಿಲ್ಲದ ಮಣ್ಣಿನ ಹೆಂಟೆಯ ಗೋಡೆ ಮತ್ತು ಖರ್ಜೂರದ ಸೋಗೆ ಹಾಸಿದ ಅವರ ನಿವಾಸವು ಕೆಲವೊಮ್ಮೆ ಕತ್ತಲೆಯಲ್ಲಿರುತ್ತಿತ್ತು. ಹಲವೊಮ್ಮೆ ಮನೆಯಲ್ಲಿ ರೊಟ್ಟಿ ತಯಾರಿಸುವ ಧಾನ್ಯದ ಹುಡಿಯಿರುತ್ತಿರಲಿಲ್ಲ. ಮುಹಮ್ಮದ್‍ರ ತಂದೆಯ ಹೆಸರು ಅಬ್ದುಲ್ಲ. ಒಂದು ಪ್ರಯಾಣದಲ್ಲಿ ಅವರು ಮರಣ ಹೊಂದಿದ್ದರು. ಮುಹಮ್ಮದ್‍ರು ಹುಟ್ಟಿ ಆರು ವರ್ಷ …

Read More »

ಸತ್ಯ ಸಂಧತೆ ಉತ್ತಮ ರೀತಿ, ನೀತಿ

ಅಬ್ದುಲ್ಲಾ ಇಬ್ನು ಮಸ್‍ಊದ್(ರ)ರಿಂದ ವರದಿಯಾಗಿದೆ ಪ್ರವಾದಿವರ್ಯರು(ಸ) ಹೇಳಿದರು. ನೀವು ಸತ್ಯವನ್ನು ಬಿಗಿ ಹಿಡಿಯಿರಿ. ಸತ್ಯ ನಿಮ್ಮನ್ನು ಪುಣ್ಯ ಮತ್ತು ಸ್ವರ್ಗಕ್ಕೆ ಕರೆದೊಯ್ಯುವುದು. ಮನುಷ್ಯ ಸತ್ಯ ಹೇಳುವುದು ಮತ್ತು ಸತ್ಯದಲ್ಲಿ ನಿಷ್ಠೆ ಇರಿಸಿದರೆ ಅಲ್ಲಾಹನ ಬಳಿ ಸತ್ಯಸಂಧ(ಸಿದ್ದೀಕ್) ಎಂಬ ಪದವಿಗೆ ಅರ್ಹನಾಗುವನು. ನೀವು ಸುಳ್ಳು ಹೇಳುವುದರಿಂದ ಎಚ್ಚರ ವಹಿಸಿರಿ. ಸುಳ್ಳು ಅಧರ್ಮದೆಡೆಗೂ ಅಧರ್ಮ ನರಕದೆಡೆಗೂ ಕರೆದೊಯ್ಯುತ್ತದೆ. ನಿರಂತರ ಸುಳ್ಳು ಹೇಳುವುದರಿಂದ ಮನುಷ್ಯ ಅಲ್ಲಾಹನ ಬಳಿ ಸುಳ್ಳುಗಾರ ಎಂಬ ಕೆಟ್ಟ ಹೆಸರಿಗೆ ಪಾತ್ರನಾಗುವನು” …

Read More »

ಪವಿತ್ರ ಕುರ್‍ಆನ್ ವಿವರಿಸುವ ಪ್ರವಾದಿ ನೂಹರ ಪುತ್ರ

ಅಮೆರಿಕ ಪ್ರೊಫೆಸರ್ ಗಬ್ರಿಯೇಲ್ ಸಈದ್ ರೆನಾಲ್ಡ್ ಪವಿತ್ರ ಕುರ್‍ಆನ್ ವಿವರಿಸಿದ ಪ್ರವಾದಿ ನೂಹರನ್ನು ನಿರಾಕರಿಸಿದ ಪುತ್ರನ ಕಥೆಯನ್ನು ತನ್ನ ಲೇಖನದಲ್ಲಿ ಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಅಂದರೆ ಆಯಾ ಪ್ರವಾದಿಗಳ ಕುಟುಂಬ ಪ್ರವಾದಿಗಳನ್ನು ವಿರೋಧಿಸಿದ್ದನ್ನು ಅವರು ಜೋಡಿಸಿ ವಿಶ್ಲೇಷಿಸಿದ್ದಾರೆ. ರೆನಾಲ್ಡ್ ರಿಗೆ ದೇವ ಗ್ರಂಥದಲ್ಲಿ (ಸೆಮಿಟಿಕ್ ಗ್ರಂಥಗಳಲ್ಲಿ) ಅವರಿಗೆ ದೊಡ್ಡ ಮಟ್ಟದ ಪಾಂಡಿತ್ಯವಿದೆ. ಪವಿತ್ರ ಕುರ್‍ಆನ್ ಮತ್ತು ಅದಕ್ಕಿಂತ ಹಿಂದಿನ ದೇವ ಗ್ರಂಥಗಳ ಬೆಳಕಿನಲ್ಲಿ ಪವಿತ್ರ ಕುರ್‍ಆನ್ ನೂಹರ(ಅ)ರ ಪುತ್ರ ನ ಕುರಿತು …

Read More »

ಜುಮುಃ ಮಿಂಬರ್‍ ಗಳು: ವಿದ್ವಾಂಸರನ್ನು ನೇರ ಅರಿಯುವ ಅವಕಾಶ

ಈ ಸೌಭಾಗ್ಯ ಮುಸ್ಲಿಮ್ ಸಮುದಾಯಕ್ಕಲ್ಲದೆ ಬೇರಾರಿಗೆ ಸಿಗುವುದಿಲ್ಲ. ಜುಮುಃ ಕುತುಬ ವರ್ಷದಲ್ಲಿ ಹಲವು ವಿದ್ವಾಂಸರನ್ನು ಅರಿಯಲು, ವಿಚಾರಧಾರೆ ತಿಳಿಯಲು, ಧರ್ಮ ಕಲಿಯಲು ಸಿಗುವ ಅವಕಾಶವಾಗಿದೆ. ವರ್ಷದಲ್ಲಿ ಐವತ್ತಕ್ಕೂ ಹೆಚ್ಚು ಸಲ ಮುಸ್ಲಿಮರಾದ ಪ್ರತಿಯೊಬ್ಬ ವ್ಯಕ್ತಿಗೆ ವಿದ್ವಾಂಸರ ಸಾನಿಧ್ಯ ಮತ್ತು ಸಾಮೀಪ್ಯವನ್ನು ಅನುಭವಿಸಬಹುದಾಗಿದೆ. ಮುಸ್ಲಿಂ ಸಮುದಾಯದ ಒಳಿತು, ಸಂಸ್ಕರಣೆ, ಯಶಸ್ಸಿಗೆ ಇದು ಬಹು ದೊಡ್ಡ ಮಾರ್ಗದರ್ಶಿ. ಈಗಿನ ಇಸ್ಲಾಮಿನ ಅವಸ್ಥೆ ಏನನ್ನು ಹೇಳುತ್ತಿದೆ. ಹೆಚ್ಚು ಅಧ್ಯಯನ ಚಿಂತನೆ ಅಗತ್ಯವಿರುವಲ್ಲಿ ಏನಾಗುತ್ತಿದೆ. ಮೌರಿತಾನಿಯದಿಂದ …

Read More »

ಪ್ರವಾದಿಯವರ (ಸ) ಜೀವನ ಕ್ರಮ 

ಡಾ| ಬಿ. ಎನ್. ಪಾಂಡೆ ಮುಹಮ್ಮದ್‍ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ ಜೀವನವು ಗೃಹಸ್ಥ ಮತ್ತು ಸನ್ಯಾಸ ಜೀವನದ ಅದ್ಭುತ ಸಂಕಲನವಾಗಿತ್ತು. ಸಾದ್ಯಂತ ಅವರ ಜೀವನವು ಶ್ರಮದಾಯಕ ಮತ್ತು ಸರಳವಾಗಿತ್ತು. ಸರಕಾರಿ ತೆರಿಗೆ, ಝಕಾತ್, ಅಥವಾ ಸದಕ(ದಾನ)ದ ಬಾಬ್ತಿನಲ್ಲಿ  ತನ್ನ ಅಥವಾ ಕುಟುಂಬದ ಅಗತ್ಯಗಳಿಗಾಗಿ ಪಡೆಯುವುದು ಪಾಪವೆಂದು ಅವರು ಪರಿಗಣಿಸಿದ್ದರು. ಕೆಲವು ಆಪ್ತ ಮಿತ್ರರಿಂದ ಏನಾದರೂ ಉಪಾಹಾರ ಅಥವಾ ಕೊಡುಗೆಗಳನ್ನು ಸ್ವೀಕರಿಸಿದ್ದರು. …

Read More »