ಬ್ರಝಿಲ್: ಜೆರುಸಲೇಂಗೆ ಧೂತವಾಸ ಸ್ಥಳಾಂತರದ ವಿಚಾರ ಮರುಪರಿಶೀಲನೆ

ರಿಯೊ ಡಿ ಜೆನೈರೊ, ನ.9: ಬ್ರಝಿಲ್ ತನ್ನ ಧೂತವಾಸವನ್ನು ಟೆಲ್‍ಅವೀವ್‍ನಿಂದ ಜೆರುಸಲೇಂಗೆ ಬದಲಾಯಿಸುವ ವಿಷಯದಲ್ಲಿ ಮರು ಪರಿಶೀಲನೆ ನಡೆಸಲಿದೆ ಎಂದು ಬ್ರಝಿಲ್ ಅಧ್ಯಕ್ಷ ಇಲಕ್ಟ್ ಜೆಯರ್‍ಬೊಲಸನಾರೊ ಹೇಳಿದರು.

ಬ್ರಝಿಲ್ ವಿದೇಶ ಸಚಿವರೊಂದಿಗೆ ಈಜಿಪ್ಟ್ ನಿಗದಿಗೊಳಿಸಿದ್ದ ಚರ್ಚೆಯಿಂದ ಬ್ರಝಿಲ್ ಹಿಂದೆ ಸರಿದಿದ್ದು ಇದು ಬ್ರಝಿಲ್‍ನ ನಿರ್ಧಾರದಲ್ಲಾಗಿರುವ ಬದಲಾವಣೆಯನ್ನು ಸೂಚಿಸುತ್ತಿದೆ ಎಂದು ವರದಿಗಳು ವಿವರಿಸಿವೆ.

ಟೆಲ್‍ಅವಿವ್‍ನಿಂದ ಧೂತವಾಸವನ್ನು ಜೆರುಸಲೇಂಗೆ ಸ್ಥಳಾಂತರಿಸಲಾಗುವುದು ಎಂದು ಈ ಹಿಂದೆ ಬ್ರಝಿಲ್ ಘೋಷಿಸಿತ್ತು. ಇದರ ವಿರುದ್ಧ ವ್ಯಾಪಕ ಟೀಕೆ ಕೇಳಿ ಬಂದಿತ್ತು.

ಈ ವರೆಗೂ ಬಗೆಹರಿಯದಿರುವ ವಿಷಯವೊಂದರಲ್ಲಿ ಇಷ್ಟು ಬೇಗನೆ ನಿರ್ಧಾರ ತಳೆಯಬೇಕಾದ ಅಗತ್ಯವಿಲ್ಲ ಎಂದು ಬ್ರಝಿಲ್ ಅಧ್ಯಕ್ಷರು ಕಳೆದ ದಿವಸ ಹೇಳಿದ್ದಾರೆ. ಸೋಮವಾರ ಈಜಿಪ್ಟ್ ಬ್ರಝಿಲ್‍ಗಳ ನಡುವಿನ ಚರ್ಚೆಯನ್ನು ರದ್ದುಗೊಳಿಸಲಾಗಿದೆ ಎಂದು ಬ್ರಝಿಲ್ ಪ್ರಕಟನೆ ನೀಡಿದೆ.

Check Also

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು, ನ.15: ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ …

Leave a Reply

Your email address will not be published. Required fields are marked *