ಭೂಮಿ-ಆಕಾಶ ನಡುವಿನ ಸೃಷ್ಟಿ

ಅಲ್ಲಾಹನ ನಿದರ್ಶನಗಳು:
@ ಹಾರೂನ್ ಯಹ್ಯಾ

ಪವಿತ್ರ ಕುರ್‍ಆನಿನಲ್ಲಿ ಹಲವು ಸೂಕ್ತಗಳು ಭೂಮಿ-ಆಕಾಶಗಳ ನಡುವಿನಲ್ಲಿರುವ ಎಲ್ಲ ಸೃಷ್ಟಿಗಳ ಕುರಿತು ಯುಕ್ತಿಪೂರ್ಣವಾಗಿ ವಿಶ್ಲೇಷಿಸುತ್ತವೆ. ಅದನ್ನು ಈ ಕೆಳಗಿನ ಸೂಕ್ತಗಳ ಮೂಲಕ ತಿಳಿಯಬಹುದು.

“ನಾವು ಭೂಮಿ-ಆಕಾಶಗಳನ್ನೂ ಅವುಗಳಲ್ಲಿ ಇರುವುದೆಲ್ಲವನ್ನೂ ಪರಮ ಸತ್ಯವಾಗಿಯೇ ವಿನಾ ಸೃಷ್ಟಿಸಲಿಲ್ಲ ಮತ್ತು ತೀರ್ಮಾನದ ಗಳಿಗೆಯು ಖಂಡಿತವಾಗಿಯೂ ಬರಲಿದೆ. ಆದುದರಿಂದ ಓ ಪೈಗಂಬರರೇ, ನೀವು (ಇವರ ಅಸಭ್ಯ ವರ್ತನೆಗೆ ಪ್ರತಿಯಾಗಿ) ಸೌಜನ್ಯ ಪೂರ್ಣ ಕ್ಷಮೆಯೋಂದಿಗೆ ವರ್ತಿಸಿರಿ.” (15:85)

“ಅವನು, ಆಕಾಶಗಳಲ್ಲೂ ಭೂಮಿಯಲ್ಲೂ ಅವೆರಡರ ನಡುವೆಯೂ ಹಾಗೂ ಮಣ್ಣಿನಡಿಯಲ್ಲಿಯೂ ಇರುವ ಸಕಲ ವಸ್ತುಗಳ ಮಾಲಿಕನಾಗಿರುತ್ತಾನೆ.” (20:6)

“ನಾವು ಆಕಾಶವನ್ನೂ ಭೂಮಿಯನ್ನೂ ಅವುಗಳಲ್ಲಿ ಇರುವುದೆಲ್ಲವನ್ನೂ ಬರಿಯ ಲೀಲೆಗಾಗಿ ಸೃಷ್ಟಿಸಲಿಲ್ಲ.” (21:16)

ಅಧಿಕ ಸಾಂದ್ರತೆಯಲ್ಲಿ ಬಿಸಿ ಹೊಗೆಯಿರುವುದನ್ನು ವಿಜ್ಞಾನಿಗಳು ಮೊದಲು ವಿಶ್ಲೇಷಿಸುತ್ತಾರೆ. ಈ ಪ್ರಮಾಣವು ತದನಂತರ ಚಿಕ್ಕ ವಿಭಾಗಗಳಾಗಿ ಆಕಾಶ ಕಾಯಗಳ ರೂಪ ತಾಳುತ್ತವೆ. ಇವುಗಳು ಮತ್ತೆ ವಿಭಜಿಸಲ್ಪಟ್ಟು ನಕ್ಷತ್ರಗಳಾಗಿಯೂ, ಗ್ರಹಗಳಾಗಿಯೂ ವಿಭಜನೆಗೊಳ್ಳುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಭೂಮಿಯು ಸುತ್ತ ಮುತ್ತಲು ಗೋಚರಿಸುವ ನಕ್ಷತ್ರಗಳೆಲ್ಲವು ಆಕಾಶದ ಅನಿಲಾವೃತ್ತದಲ್ಲಿ ವಿಂಗಡಿಸಲ್ಪಟ್ಟಿವೆ. ಇವುಗಳು ಕೆಲವು ಸೂರ್ಯ ನಕ್ಷತ್ರಗಳ ರೂಪು ತಾಳುವ ಮೂಲಕ ಹಲವಾರು ಸೌರವ್ಯೂಹಗಳ ರಚನೆಗೆ ಆಕಾಶ ಗಂಗೆಗಳ ಸ್ಥಾಪನೆ ಕಾರಣವಾಗಿವೆ.

ಪ್ರಪಂಚವು ಮೊದಲು `ರತ್ಕ್’ನ (ಜೋಡಿಸಲ್ಪಟ್ಟಾಗ)  ಸ್ಥಿತಿಯಲ್ಲಿದ್ದ ಭೂಮಿ-ಆಕಾಶವನ್ನು ಅಲ್ಲಾಹನು ತದನಂತರ ಅದನ್ನು `ಫತಕ್’ (ವಿಭಜಿಸು)ಗೊಳಿಸಿರುವನು ಎಂಬುದನ್ನು ನಾವೀಗಾಗಲೇ ತಿಳಿದಿದ್ದೇವೆ. ಪ್ರಪಂಚದ ಉಗಮದ ಹಂತದಿಂದ ಅದನ್ನು ಬೇರ್ಪಡಿಸುವ, ತದನಂತರ ಅವುಗಳಲ್ಲಿರುವ ಎಲ್ಲ ವಿಭಾಗಗಳ ಕುರಿತು ವಿಶ್ಲೇಷಿಸಲು ಪವಿತ್ರ ಕುರ್‍ಆನ್ ಬಳಸಿರುವ ಪದಗಳು ವಿಜ್ಞಾನಿಗಳ ಸಂಶೋಧನೆಗೆ ದಾರಿ ಮಾಡಿಕೊಟ್ಟಿವೆ.

ಆಕಾಶಗಳಲ್ಲಿ ರೂಪು ಪಡೆಯುವ ಪ್ರತಿಯೊಂದು ವಿಭಜನೆಯು ಹೊಸ ಸೃಷ್ಟಿಗಳಿಗೆ ರೂಪು ನೀಡುವುದು. ವಿಜ್ಞಾನಿಗಳು ಈ ಹೆಚ್ಚಿನ ಪರಿಕರಗಳನ್ನು ಅಂತರ್ ನಕ್ಷತ್ರೀಯ ಕ್ಷೀರ ಪಥದ ಭಾಗಗಳು “Intersteller galatic materials ”  ಎಂಬುದಾಗಿ ಹೆಸರಿಸಿದ್ದಾರೆ.

ಅಂತರ್ ನಕ್ಷತ್ರೀಯವು 60% ಹೈಡ್ರೋಜನ್, 38% ಹೀಲಿಯಂ ಮತ್ತು 2% ಇತರೆ ಅಂಶಗಳನ್ನು ಒಳಗೊಂಡಿದೆ. ಅಂತರ್ ನಕ್ಷತ್ರೀಯ ವಸ್ತುಗಳಲ್ಲಿ 99% ಅಂತರ್ ನಕ್ಷತ್ರೀಯ ಅನಿಲ ಮತ್ತು 1% ಅಂತರ್ ನಕ್ಷತ್ರೀಯ ಧೂಳಿನ ಕಣಗಳನ್ನು ಒಳಗೊಂಡಿದ್ದು ಈ ಸಣ್ಣ ವಿಭಾಗವು ಬಾರವಾದ ವಸ್ತುಗಳನ್ನು ಹಿಡಿದಿಟ್ಟುಕೊಂಡಿದೆ. ಅವುಗಳ ವಿಸ್ತೀರ್ಣವು 0.001 ಮಿಲಿ ಮೀಟರ್‍ಗಿಂತ 0.001 ಮಿಲಿ ಮೀಟರ್ ಆಗಿದೆ. ವಿಜ್ಞಾನಿಗಳು ಈ ವಿಭಾಗಗಳು ಖಗೋಳ-ಭೌತ ವಿಜ್ಞಾನದ ಪ್ರಮುಖ ಅಂಶಗಳೆಂದು ಕರೆಯುತ್ತಾರೆ. ಈ ಪರಿಕರಗಳು ಧೂಳು, ಹೊಗೆ ಅಥವಾ ಅನಿಲಗಳೆಂದು ಸಾಮಾನ್ಯವಾಗಿ ಕರೆಯಲ್ಪಡುತ್ತವೆ. ಆದರೆ ಯಥಾರ್ಥವಾಗಿ ಇವುಗಳನ್ನು ಪರಿಗಣಿಸಿದಾಗ ಇಡೀ ಬಾಹ್ಯಾಕಾಶದಲ್ಲಿದ್ದ ಬಹು ಭಾಗವನ್ನು ಆವರಿಸಿರುವುದು ಕಂಡು ಬರುತ್ತದೆ.

1920 ರಲ್ಲಿ ಅಂತರ್ ನಕ್ಷತ್ರೀಯ ಕಣಗಳ ಕುರಿತು ವಿಜ್ಞಾನಿಗಳಿಗೆ ಕಂಡು ಹಿಡಿಯಲು ಸಾಧ್ಯವಾಯಿತಾದರೆ ಪವಿತ್ರ ಕುರ್‍ಆನ್ 1,400 ವರ್ಷಗಳ ಹಿಂದೆ ಈ ಕಣಗಳನ್ನುದ್ದೇಶಿಸಿ `ಮಾ ಬೈನಹುಮಾ’ ಅರ್ಥಾತ್ ‘ಅವುಗಳ ನಡುವೆ ಇರುವುದೆಲ್ಲವೂ’ ಎಂದು ಅಭಿಸಂಬೋಧಿಸಿತು.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *