Breaking News
Home / ಲೇಖನಗಳು / ತಪ್ಪನ್ನರಿಯಿರಿ, ಒಪ್ಪಿಕೊಳ್ಳಿರಿ, ತಿದ್ದಿರಿ..

ತಪ್ಪನ್ನರಿಯಿರಿ, ಒಪ್ಪಿಕೊಳ್ಳಿರಿ, ತಿದ್ದಿರಿ..

ಡಾ. ಅಬ್ದುಲ್ ವಾಸಿಅï

ಅರೇಬಿಯ ಇತಿಹಾಸ ಅಧ್ಯಯನಿಸಿದಾಗ ಕುಪ್ರಸಿದ್ಧ ದರೋಡೆಕೋರರೊಬ್ಬರನ್ನು ಕಾಣಬಹುದು. ಅಲ್ ಉಹೈಮಿರ್ ಅಸ್ಸಅದಿ. ಒಂಟೆ ಕದಿಯುವುದರಲ್ಲಿ ಕದೀಮ. ಜತೆಗೆ ದಾರಿ ಹೋಕರ ದರೋಡೆ ಮಾಡುವುದರಲ್ಲಿಯೂ ನಿಸ್ಸೀಮ ಆಗಿದ್ದರು. ಈ ಕುರಿತು ಅವರಿಗೆ ಅಹಂಭಾವೂ ಇತ್ತು. ಊರಿನಲ್ಲಿ ಗಲಾಟೆ ಮಾಡಿ ಹೆದರಿಕೆ ಸೃಷ್ಟಿಲು ಅವರಿಗೆ ಸಾಧ್ಯವಾಗಿತ್ತು.

ಈ ದರೋಡೆಕೋರನಲ್ಲಿ ಒಂದು ವಿಶೇಷತೆಯೂ ಇತ್ತು. ಬೇರೆ ಕಳ್ಳರಿಗಿಂತ ಭಿನ್ನವಾದುದು. ದೋಚಿದರೆ ಆ ಅಪರಾಧಕ್ಕೆ ಅವರಲ್ಲಿ ಪಾಪ ಪ್ರಜ್ಞೆ ಇರುತ್ತಿರಲಿಲ್ಲ. ಅಂತಹ ನಂಬಿಕೆ ಅವರಿಗಿರಲಿಲ್ಲ. ಒಟ್ಟಿನಲ್ಲಿ ದೋಚುವುದು ಅಪರಾಧ ಎಂದು ಭಾವಿಸುತ್ತಿರಲಿಲ್ಲ. ಬದಲಾಗಿ ತನ್ನ ವೃತ್ತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರು.

ಅವರ ಪ್ರಸಿದ್ಧ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ. ನನ್ನ ಕೈಯಲ್ಲಿ ಒಂಟೆ ಕಟ್ಟಿ ಹಾಕುವ ಹಗ್ಗ ಇದೆ. ಆ ಹಗ್ಗದೊಂದಿಗೆ ನಾನು ಓಡಾಡುತ್ತೇನೆ. ಅದರ ಒಂದು ಕೊಡಿಯಲ್ಲಿ ಒಂಟೆಯಿಲ್ಲದಿದ್ದರೆ ಅದು ಅಲ್ಲಾಹನಿಗೆ ನಾಚಿಕೆಗೇಡು ಅಲ್ಲವೇ. ಊರಲ್ಲಿ ಎಷ್ಟೆಷ್ಟು ಒಂಟೆಗಲಿವೆ. ಆ ಒಂಟೆಗಳನ್ನು ತೆಗೆದುಕೊಳ್ಳದೆ ಒಂಟೆಯಿಲ್ಲದೆ ಖಾಲಿ ಹಗ್ಗದಿಂದ ನಾನು ಸಂಚರಿಸುತ್ತಿದ್ದೇನೆಂದು ನಾಚುವವನಲ್ಲ. ಆ ಲಜ್ಜೆಗಳೆಲ್ಲ ಅಲ್ಲಾಹನಿಗಾಗುತ್ತದೆ. ಆದ್ದರಿಂದ ನಾನು ಕದಿಯುವೆ. ಹೀಗೆ ಅವರು ಬಹಳ ಚೆಂದದಿಂದ ಸಮರ್ಥಿಸಿಕೊಳ್ಳುತ್ತಿದ್ದರು.

ಈ ಘಟನೆಗೆ ಮನುಷ್ಯರ ಜೀವನದಲ್ಲಿ ಅಭೇಧ್ಯ ಸಂಬಂಧ ಇದೆ. ತಪ್ಪು ಸಂಭವಿಸುವುದು ಮನುಷ್ಯನ ಪ್ರಕೃತಿಯಲ್ಲಿದೆ. ಆದರೆ ಆಗಿರುವ ತಪ್ಪನ್ನು ಸಮರ್ಥಿಸಿಕೊಳ್ಳುವ ಯತ್ನ ಮನುಷ್ಯರ ನಡುವೆ ಧಾರಾಳ ಕಂಡು ಬರುತ್ತದೆ. ಅಸ್ಸಅದಿ ಒಂದು ಕೆಟ್ಟ ಅಭ್ಯಾಸದ ಆರಂಭ ಅಂತ ಇಟ್ಟುಕೊಂಡರೆ ಅವರ ಹಲವು ಮುಖಗಳು ಸಮಾಜದಲ್ಲಿ ನಮಗೆ ಕಾಣ ಸಿಗುತ್ತದೆ. ಅಂದರೆ ಇಲ್ಲಿ ತಪ್ಪನ್ನುಸಮರ್ಥಿಸುವುದು ಸಮಸ್ಯೆ.

ಆದರೆ ಒಬ್ಬ ಮನುಷ್ಯನ ಯಶಸ್ಸು ಅಡಗಿರುವುದು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವಲ್ಲಾಗಿದೆ. ಪವಿತ್ರ ಕುರ್‍ಆನ್ ಆದಮ್(ಅ) ಮತ್ತು ಇಬ್ಲೀಸನ ಘಟನೆಯನ್ನು ನಮಗೆ ವಿವರಿಸಿ ಕೊಟ್ಟಿದೆ. ಆ ಚರಿತ್ರೆಯಲ್ಲಿ ಎರಡು ವ್ಯಕ್ತಿಗಳಿಗೂ ತಪ್ಪು ಸಂಭವಿಸಿದ್ದು ಎದ್ದು ಕಾಣುವ ವಿಷಯವಾಗಿದೆ. ಪ್ರವಾದಿ ಆದಮ್‍ರು(ಅ) ಅಲ್ಲಾಹನು ನಿಷೇಧಿಸಿದ ಫಲವನ್ನು ತಿಂದರು. ಇಬ್ಲೀಸನು ಆದಂರಿಗೆ ಸುಜೂದ್ ಮಾಡಲು ನಿರಾಕರಿಸಿ ಅಲ್ಲಾಹನ ಆಜ್ಞೆಯನ್ನು ಉಲ್ಲಂಘಿಸಿದನು. ಆದಮ್ ಮತ್ತು ಇಬ್ಲೀಸನನ್ನು ಪ್ರತ್ಯೇಕಿಸುವ ಪ್ರಧಾನ ವಿಷಯವನ್ನು ಪವಿತ್ರ ಕುರ್‍ಆನ್ ತಿಳಿಸುತ್ತದೆ. ಆದಮ್ ತನ್ನ ಪ್ರಭುವಿನ ಅನುಸರಣೆಗೇಡು ತೋರಿಸಿದರು. ಹೀಗೆ ಪ್ರಮಾದ ಮಾಡಿದರು. ನಂತರ ಅವರ ಪ್ರಭು ಅವರಿಗೆ ಔನ್ನತ್ಯ ನೀಡಿದನು. ಅವರ ಪಶ್ಚಾತ್ತಾಪ ಸ್ವೀಕರಿಸಿದನು. ಮಾರ್ಗದರ್ಶನ ಮಾಡಿದನು. ಆದಮರಿಗೆ ತಪ್ಪು ಮನಗಂಡಾಗ ಅಲ್ಲಾಹನೊಡನೆ ಪಶ್ಚಾತ್ತಾಪಟ್ಟರು. ಇಬ್ಲೀಸನು ತನ್ನ ತಪ್ಪಿಗೆ ಪಶ್ಚಾತ್ತಾಪ ಪಡಲಿಲ್ಲ. ಮಾತ್ರವಲ್ಲ ಅವನು ಅಹಂಭಾವ ತೋರಿಸಿದನು. ಇಬ್ಲೀಸನು ಆದಮರಿಗಿಂತ ಉತ್ಕಷ್ಟ. ನೀನು ನನ್ನನ್ನು ಅಗ್ನಿಯಿಂದ ಸೃಷ್ಟಿಸಿರುವಿ. ಅವನನ್ನು ಆವೆ ಮಣ್ಣಿನಿಂದ ಸೃಷ್ಟಿಸಿದೆ. ಹೀಗೆ ಆದಮರ ಮುಂದೆ ಸುಜೂದ್ ಮಾಡದೇ ತನ್ನ ತಪ್ಪನ್ನು ಒಪ್ಪದೆ ಆತ ಸಮರ್ಥಿಸಿಕೊಂಡ.

ಪವಿತ್ರ ಕುರ್‍ಆನ್ ತಪ್ಪಿಗೆ ಸಂಬಂಧಿಸಿ ಎರಡು ಪದ ಬಳಕೆ ಮಾಡಿದೆ. ಒಂದು ತಿಳಿಯದೆ ಮಾಡಿದ ತಪ್ಪು ಗೊತ್ತಾದಾಗ ಆ ತಪ್ಪನ್ನು ತಿದ್ದಿಕೊಳ್ಳುವ ಕುರಿತು ಮತ್ತು ತಪ್ಪು ಮಾಡಿ ಆ ತಪ್ಪನ್ನು ಸಮರ್ಥಿಸಿ ಅದರಲ್ಲೇ ಗಟ್ಟಿಯಾಗಿರುವುದು. ಆದ್ದರಿಂದ ಪವಿತ್ರ ಕುರ್‍ಆನ್ ನರಕದ ಆಹಾರದ ಕುರಿತು ತಪ್ಪೆಸಗಿದವರು ಮಾತ್ರ ಅದನ್ನು ತಿನ್ನುವರು ಎಂದು ಹೇಳಿದೆ. ತಪ್ಪು ಮಾಡಿ ಅದನ್ನು ಸಮರ್ಥಿಸಿ ಅದರಲ್ಲಿ ದೃಢವಾಗಿದ್ದು ಅದನ್ನು ಪುನಃ ಮಾಡುತ್ತಿರುವವರು ನರಕದ ಭಕ್ಷ್ಯಕ್ಕೆ ಅರ್ಹರು.

ತಪ್ಪುಗಳನ್ನು ಸಮರ್ಥಿಸಿದವರ ಕುರಿತು ಪವಿತ್ರ ಕುರ್‍ಆನ್ ಪರಾಮರ್ಶಿಸುವಾಗ ಕಪಟ ವಿಶ್ವಾಸಿಗಳನ್ನು ಉದಾಹರಣೆಯಾಗಿ ಬೆಟ್ಟು ಮಾಡಿದೆ. ಅವರು ಯಾವಾಗಲೂ ಪ್ರವಾದಿ(ಸ) ಬಳಿಗೆ ಬರುತ್ತಿದ್ದರು. ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಮೂಲಭೂತವಾಗಿ ಮನುಷ್ಯ ಇಷ್ಟು ಅರ್ಥ ಮಾಡಿಕೊಳ್ಳಬೇಕು. ಅಂದರೆ ತಪ್ಪನ್ನು ಒಪ್ಪಿಕೊಳ್ಳುವ ಒಂದು ಮಹಾ ಮನಸ್ಸಿನ ಗುಣ ತನ್ನಲ್ಲಿರಬೇಕು ಎಂಬುದು.

ಪ್ರವಾದಿ ಮೂಸಾ(ಅ)ರೊಡನೆ ಫರೋವ ನೀನಲ್ಲವೆ ಇಂತಿಂತಹ ಕೆಲಸ ಮಾಡಿದ್ದು ಎಂದು ಕೇಳುತ್ತಾನೆ. ಆ ಮನುಷ್ಯನನ್ನು ಕೊಂದದ್ದು ನೀ ಅಲ್ಲವೇ ಎಂದು. ಯೋಚಿಸುವ ಗೋಜಿಗೆ ಹೋಗದೆ ಕೂಡಲೇ ಮೂಸಾ(ಅ) ನಾನು ಹಾಗೆ ಮಾಡಿ ತಪ್ಪೆಸಗಿದ್ದೇನೆ ಎಂದರು. ತನ್ನಿಂದ ತಪ್ಪು ಸಂಭವಿಸಿದೆ ಎಂಬುದನ್ನು ಮೂಸಾ(ಅ) ಸಮರ್ಥಿಸದೆ ಒಪ್ಪಿಕೊಂಡರು. ಅದನ್ನು ತಿದ್ದಿಕೊಳ್ಳುವುದೆಂದರೆ ತಪ್ಪುಗಳಿಂದ ಮುಕ್ತಿ ಹೊಂದುವ ಮೊದಲ ಹೆಜ್ಜೆ ಆಗಿದೆ. ಯಾವುದೇ ವಿಷಯದಲ್ಲಿ ನಮ್ಮಿಂದಾಗುವ ಪ್ರಮಾದ ಆ ವಿಷಯದಲ್ಲಿ ನಮ್ಮ ಅಂತಿಮ ಪ್ರಮಾದ ಎಂದು ನಾವೇ ಪರಿಗಣಿಸಬೇಕು. ಇದು ಮನುಷ್ಯನ ನಿಲುವು ಆಗಿರಬೇಕು. ತಪ್ಪನ್ನು ಅರಿಯುವುದು ಒಪ್ಪುವುದು ತಿದ್ದುವುದು. ಹೀಗೆ ಉನ್ನತದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನಮ್ಮಿಂದ ಸಾಧ್ಯ.

About editor

Check Also

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್ ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ …

Leave a Reply

Your email address will not be published. Required fields are marked *