ಅಯೋಧ್ಯೆಯಲ್ಲಿ ಆರೆಸ್ಸೆಸ್‍ನಿಂದ ನಮಾಝ್, ಕುರ್‍ಆನ್ ಪಾರಾಯಣ ಇಲ್ಲ

ತಿರುವನಂತಪುರಂ, ಜು.12: ರಾಷ್ಟ್ರೀಯ ಮುಸ್ಲಿಮ್ ಮಂಚ್ ಅಯೋಧ್ಯೆಯಲ್ಲಿ ನಮಾಝ್ ಮತ್ತು ಪವಿತ್ರ ಕುರ್‍ಆನ್ ವಾಚನ ಕಾರ್ಯಕ್ರಮ ಇಟ್ಟು ಕೊಂಡಿದೆ ಎಂಬುದನ್ನು ಸ್ವಯಂ ಆರೆಸ್ಸೆಸ್ ತನ್ನ ಅಧಿಕೃತ ಟ್ವಿಟರ್‍ನಲ್ಲಿ ನಿರಾಕರಿಸಿದೆ.  ಮಾಧ್ಯಮಗಳಲ್ಲಿ ಪ್ರಕಟಗೊಂಡ ಇಂತಹ ವರದಿಗಳು ನಿರಾಧಾರದ್ದು ಮತ್ತು ಸತ್ಯಕ್ಕೆ ವಿರುದ್ಧವಾದುದು ಎಂದು ಅದು ತಿಳಿಸಿದೆ.

ಈ ಹಿಂದೆ ಮಾಧ್ಯಮಗಳಲ್ಲಿ ಆರೆಸ್ಸೆಸ್‍ನ ಮುಸ್ಲಿಂ ಸಂಘಟನೆಯಾದ ರಾಷ್ಟ್ರೀಯ ಮುಸ್ಲಿಂ ಮಂಚ್ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ನಮಾಜ್ ಮತ್ತು ಕುರ್‍ಆನ್ ವಾಚನ ದ ಬಹು ದೊಡ್ಡ ಕಾರ್ಯಕ್ರಮ ನಡೆಸುತ್ತಿದೆ ಎಂದು ಅದರ ನಾಯಕರೇ ಹೇಳಿಕೊಂಡಿದ್ದರು.

ಈಗ ಆರೆಸ್ಸೆಸ್ ಟ್ವೀಟ್ ಪರಕಾರ ಬರೇ ಬೊಗಳೆಯಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ದಿಟವಾಗಿದೆ. ಆರೆಸ್ಸೆಸ್‍ನ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಅರುಣ್ ಕುಮಾರ್ ಹೆಸರಿನಲ್ಲಿ ಟ್ವೀಟ್ ಇದ್ದು ಆರೆಸ್ಸೆಸ್ ಅಯೋಧ್ಯೆಯಲ್ಲಿ ಸಾಮೂಹಿಕ ನಮಾಝ್ ಆಯೋಜಿಸುತ್ತಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ವಾಸ್ತವ ವಿರುದ್ಧ ಮತ್ತು ಅಸತ್ಯವಾದುದು ಎಂದು ತಿಳಿಸಲಾಗಿದೆ.

ಆದರೆ, ಈ ಮೊದಲು ಒಂದು ದೊಡ್ಡ ಕಾರ್ಯಕ್ರಮವಾಗಲಿದ್ದು, 1500 ಆಹ್ವಾನಿತ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ರಾಷ್ಟ್ರೀಯ ಮುಸ್ಲಿಮ್ ಮಂಚ್‍ನ ಮಾಧ್ಯಮ ಸಂಯೋಜಕ ರಝಾ ರಿಝ್ವಿ ಹೇಳಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಸರಯೂ ನದಿಯಲ್ಲಿ ಅಂಗಸ್ನಾನ ಮಾಡಿ ನಂತರ ನಮಾಝ್ ಮತ್ತು ಕುರ್‍ಆನ್ ಪಾರಾಯಣ ಮಾಡಲಿದ್ದಾರೆ ಎಂದು ರಝಾ ರಿಝ್ವಿ ಹೇಳಿದ್ದರು. ಕಾರ್ಯಕ್ರಮವನ್ನು ಸಹೋದರತೆ ಪ್ರೀತಿಯ ಮತ್ತು ಶಾಂತಿಯ ಸಂದೇಶವಾಗಿ ಜಗತ್ತಿನ ಮುಂದಿಡಲಾಗುವುದು ಎಂದು ಅವರು ತಿಳಿಸಿದ್ದರು.

ಮುಸ್ಲಿಮರಿಗೆ ಅವರ ಧಾರ್ಮಿಕ ಆಚಾರಗಳನ್ನು ನಿರ್ವಹಿಸಲು ಬಿಡುವುದಿಲ್ಲ ಎನ್ನುವುದು ಸರಿಯಲ್ಲ. ಆರೆಸ್ಸೆಸ್ ಮುಸ್ಲಿಮ್ ವಿರುದ್ಧ ಇದೆ ಎನ್ನುವ ಆರೋಪವನ್ನು ನಿರಾಕರಿಸಿದ್ದ ಅವರು ಈ ಕಾರ್ಯಕ್ರಮವನ್ನು ಆರೆಸ್ಸೆಸ್ ಆಯೋಜಿಸುತ್ತಿರುವುದು ಅಯೋಧ್ಯೆ ಹಿಂದೂಗಳದ್ದು ಮತ್ತು ಮುಸ್ಲಿಮರದ್ದಾಗಿದೆ ಎಂಬ ಸಂದೇಶ ಸಾರಲಿಕ್ಕಾಗಿದೆ ಎಂದು ರಾಷ್ಟ್ರೀಯ ಮುಸ್ಲಿಮ್ ಮಂಚ್ ನಾಯಕಿ ಶಬಾಬ ಅಝ್ಮಿ ತಿಳಿಸಿದ್ದರು. ಇವೆಲ್ಲವನ್ನೂ ಈಗ ಆರೆಸ್ಸೆಸ್ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ನಿರಾಕರಿಸಿದೆ.

Check Also

‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು, ನ.15: ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ …

Leave a Reply

Your email address will not be published. Required fields are marked *