ismika

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ ಕಾಂಟಾಸ್ಟಿನ್ ಲೆನಿನ್ ಕಟ್ಟಾ ನಾಸ್ತಿಕನಾಗಿದ್ದನು. ದೇವ ವಿಶ್ವಾಸವು ವ್ಯರ್ಥವೆಂದು ಆತ ವಾದಿಸುತ್ತಿದ್ದನು. ಆದರೆ ಆತನ ಪತ್ನಿ ಕಿಟ್ಟಿ ಹೆರಿಗೆ ನೋವಿನಿಂದ ನರಳುತ್ತಿರುವಾಗ ಆತ ಅದನ್ನೆಲ್ಲಾ ಮರೆತು ಬಹಳ ಪ್ರಾಮಾಣಿಕವಾಗಿ ದೇವರನ್ನು ಕರೆದು ಪ್ರಾರ್ಥಿಸಿದನು. “ದೇವಾ! ನಮ್ಮನ್ನು ರಕ್ಷಿಸು. ನಮಗೆ ನೆರವಾಗು” ಈ ಪ್ರಾರ್ಥನೆಯನ್ನು ಲೆನಿನ್ ಹಲವು ಸಲ ಮಾಡುತ್ತಿದ್ದನು. ಹೆಚ್ಚಿನ ಜನರ ಸ್ಥಿತಿ ಇದುವೇ ಆಗಿದೆ. ಕಷ್ಟ ಕೋಟಲೆಗಳಿಲ್ಲದ ಸುಖಮಯ ಜೀವನ ಸಾಗಿಸುವಾಗ …

Read More »

ಶ್ರೇಷ್ಠತೆಯ ಮಾನದಂಡ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಖಲೀಫಾ ಉಮರ್ ಫಾರೂಕ್‍ರವರ(ರ) ಆಡಳಿತ ಕಾಲ. ಅಮ್ರ್ ಬಿನ್ ಆಸ್ ಈಜಿಪ್ಟ್ ನ ರಾಜ್ಯಪಾಲರಾಗಿದ್ದರು. ಅವರು ದಿಗ್ವಿಜಯಗಳನ್ನು ಕೈಗೊಂಡಿದ್ದರು. ಹಲವಾರು ಸಾಧನೆಗಳನ್ನೂ ಮಾಡಿದ್ದರು. ಅವರಿಗೆ ಮುಹಮ್ಮದ್ ಎಂಬ ಓರ್ವ ಮಗನಿದ್ದನು. ಆತ ಕಾಪ್ಟ್ ವಂಶಜನಾದ ಒಬ್ಬ ಸಾಮಾನ್ಯ ಗ್ರಾಮಸ್ಥನನ್ನು ಚೆನ್ನಾಗಿ ಥಳಿಸಿದನು. ಉಮರ್  ಫಾರೂಕ್‍ರ(ರ) ಬಳಿ ಅದರ ದೂರು ಬಂತು. ಅವರು ರಾಜ್ಯಪಾಲರನ್ನೂ ಅವರ ಮಗನನ್ನೂ ಮತ್ತು ಆ ಗ್ರಾಮಸ್ಥನನ್ನೂ ಕರೆಯಿಸಿ ವಿಚಾರಣೆ ನಡೆಸಿದರು. ಥಳಿಸಿದ್ದು ನಿಜವೆಂದು ಸಾಬೀತಾದಾಗ, ರಾಜ್ಯಪಾಲರ ಪುತ್ರನನ್ನು ಪ್ರತಿಯಾಗಿ ಥಳಿಸುವಂತೆ ಹಳ್ಳಿಗನಿಗೆ ಆದೇಶ …

Read More »

ವಂಚಿಸದ ಗೆಳೆಯ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಖ್ಯಾತ ದಾರ್ಶನಿಕನೊಬ್ಬನು ಹೀಗೆ ಹೇಳಿರುವನು- “ಪುಸ್ತಕವು ಮಧ್ಯರಾತ್ರಿಯಲ್ಲೂ ನಿನ್ನೊಂದಿಗೆ ಮಾತಾಡುವ ಗೆಳೆಯನಾಗಿದ್ದಾನೆ. ನೀನು ಓದುವಾಗ ಅದು ನಿನ್ನೊಂದಿಗೆ ಮಾತಾಡಲು ಆರಂಭಿಸುತ್ತದೆ. ನೀನು ಮಲಗಿರುವಾಗ ಅದು ನಿನ್ನನ್ನು ಕರೆದು ಕೀಟಲೆ ಕೊಡುವುದಿಲ್ಲ. ಅದನ್ನು ಭೇಟಿಯಾಗಲು ಅಥವಾ ಮಾತನಾಡಿಸಲು ನೀನು ಏನೂ ಸಿದ್ಧತೆ ಮಾಡಬೇಕಾಗಿಲ್ಲ. ಅದು ನಿನ್ನನ್ನು ಅತಿಯಾಗಿ ಹೊಗಳುವುದು ಅಧವಾ ತೆಗಳುವುದು ಮಾಡುವುದಿಲ್ಲ. ಪುಸ್ತಕ ನಿನ್ನನ್ನು ಎಂದೂ ವಂಚಿಸದು.” ಮನುಷ್ಯನು ಒಂದು ಹೆಜ್ಜೆಯಿಡಲೂ ಸಾಧ್ಯವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿ ಜನಿಸುತ್ತಾನೆ. ಮಗುವಾಗಿದ್ದಾಗ ಆತ ದುರ್ಬಲ. ಆದರೆ ಮೊಟ್ಟೆಯೊಡೆದು ಹೊರಬರುವ ಕೋಳಿ …

Read More »

ಉತ್ತಮ ವ್ಯಕ್ತಿ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಪ್ರವಾದಿ ಮುಹಮ್ಮದ್‍ರವರ(ಸ) ಒಂದು ವಚನವು ಹೀಗಿದೆ, “ಖೈರುನ್ನಾಸಿ ಮನ್ ಯನ್‍ಫಉನ್ನಾಸ್”- ಮಾನವರ ಪೈಕಿ ಅತ್ಯುತ್ತಮನು ಮಾನವರಿಗೆ ಅತ್ಯಧಿಕ ಲಾಭ ಉಂಟು ಮಾಡುವವನಾಗಿದ್ದಾನೆ. ಇನ್ನೊಂದು ಪ್ರವಾದಿ ವಚನದಲ್ಲಿ ಹೀಗೆ ಹೇಳಲಾಗಿದೆ- “ಖೈರುಕುಮ್ ಖೈರುಕುಮ್ ಲಿ ಅಹ್ಲೀಕುಮ್”- ತನ್ನ ಮನೆ ಮಂದಿಯ ಪಾಲಿಗೆ ಉತ್ತಮನಾದವನೇ ನಿಮ್ಮ ಪೈಕಿ ಅತ್ಯುತ್ತಮನಾಗಿದ್ದಾನೆ. ಒಮ್ಮೆ ಪ್ರವಾದಿವರ್ಯರು(ಸ) ಒಂದು ಸಭೆಯಲ್ಲಿ ನಿಂತು ಹೇಳಿದರು: ನಾನು ನಿಮ್ಮ ಪೈಕಿ ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿ ಯಾರೆಂದು ತಿಳಿಸಲೇ? ಜನರು ಸುಮ್ಮನಿದ್ದರು. ಪ್ರವಾದಿವರ್ಯರು(ಸ) ಈ ಪ್ರಶ್ನೆಯನ್ನು ಮೂರು ಸಲ …

Read More »

ಸಂತುಲಿತ ನಿಲುವು

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಪ್ರವಾದಿ ವಚನವೊಂದು ಹೀಗೆ ಹೇಳುತ್ತದೆ: “ಖೈರುಲ್ ಉಮೂರಿ ಔಸತುಹಾ” ಅತ್ಯುತ್ತಮ ಕರ್ಮವು ಸಂತುಲಿತ ಕರ್ಮವಾಗಿದೆ. ಖಲೀಫಾ ಅಲೀಯವರ(ರ) ಒಂದು ಪ್ರಸಿದ್ಧ ಉಪದೇಶ ಹೀಗಿದೆ- ‘ಅಲೈಕುಮ್ ಬಿನ್ನಮ್ತಲ್ ಔಸತ್.’ ಅರ್ಥಾತ್ ನೀವು ಮಧ್ಯಮ ನಿಲುವನ್ನೇ ಕೈಗೊಳ್ಳಿರಿ. ಮಧ್ಯಮ ನಿಲುವೆಂದರೆ ಸಂತುಲಿತ ಕರ್ಮ. ಒಂದು ಉದಾಹರಣೆ ಪವಿತ್ರ ಕುರ್‍ಆನಿನಲ್ಲಿ ಖರ್ಚಿನ ಕುರಿತು ನೀಡಿದ ಆದೇಶದಲ್ಲಿದೆ. “(ವ್ಯಯ ಮಾಡುವ ವಿಷಯದಲ್ಲಿ) ನೀವು ನಿಮ್ಮ ಕೈಯನ್ನು ನಿಮ್ಮ ಕೊರಳಿಗೆ ಕಟ್ಟಿ ಕೊಳ್ಳಬಾರದು ಮತ್ತು ನಿಂದ್ಯರೂ ನಿಸ್ಸಹಾಯಕರೂ ಆಗಿ ಬಿಡುವಂತೆ ಅದನ್ನು ಸಂಪೂರ್ಣವಾಗಿ ತೆರೆದಿಡಲೂಬಾರದು.” …

Read More »

ಕುಂದು-ಕೊರತೆಗಳು ದಾಂಪತ್ಯ ಜೀವನಕ್ಕೆ ಧಕ್ಕೆ ತರಬಾರದು

@ ಡಾ| ಹಸ್ಸಾನ್ ಪಾಶಾ ಸಂಗಾತಿ ಹೇಗಿರುತ್ತಾಳೋ ಹಾಗೆಯೇ ಅವಳನ್ನು ಪ್ರೀತಿಸುವುದು ದಾಂಪತ್ಯ ಜೀವನದ ಯಶಸ್ಸಿನ ಗುಟ್ಟು. ಅವಳಲ್ಲಿರುವ ಕುಂದು-ಕೊರತೆಗಳನ್ನು ಪ್ರೀತಿಯಿಂದ ಗೆಲ್ಲಬೇಕು. ಅವಳ ದೌರ್ಬಲ್ಯದ ವಿಮರ್ಶೆಗಳು ಅದಕ್ಕೆ ತಡೆಯಾಗಬಾರದು. ಶ್ರೇಷ್ಠತೆಗಳು ಮತ್ತು ನ್ಯೂನತೆಗಳು ಸಬಲ ಮತ್ತು ದುರ್ಬಲ ಇವೆಲ್ಲವನ್ನು ಅರಿತು ಜೀವಿಸಲು ಸಾಧ್ಯವಾಗಬೇಕು. ಪ್ರೀತಿಯೆಂಬುದು ದಂಪತಿಗಳಿಗೆ ದೇವನಿಂದ ಸಿಗುವ ಅನುಗ್ರಹವಾಗಿದೆ. ಸಂತೋಷದ, ಸ್ನೇಹದ, ಪ್ರೀತಿಯ ಎಲ್ಲ ರೀತಿಯ ಹೂಗಳು ಅದರಿಂದಲೇ ಅರಳುತ್ತವೆ. ಅದು ನೆಲೆಯೂರ ಬೇಕಾದರೆ ಕೆಲವು ವಿಚಾರಗಳನ್ನು ಅರಿಯಬೇಕು. ಸಂಗಾತಿಯ ದೌರ್ಬಲ್ಯಗಳು ಕುಂದು- ಕೊರತೆಗಳನ್ನು ಕಾಣದಂತೆ ನಟಿಸಬೇಕು. ಆ ಕುಂದು-ಕೊರತೆಗಳನ್ನು ಮರೆತು …

Read More »

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ ಹೇಟ್‍ನ ನೇತೃತ್ವದಲ್ಲಿ ಮಕ್ಕಳನ್ನು ಕಳಕೊಂಡ ತಾಯಂದಿರು ಪ್ರತಿಭಟನಾ ಜಾಥಾ ನಡೆಸಿದ್ದಾರೆ. ನಜೀಬ್ ಕಾಣೆಯಾಗಿ ಎರಡು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ದಿಲ್ಲಿಯ ಮಂಡಿ ಹೌಸ್‍ನಿಂದ ಪಾರ್ಲಿಮೆಂಟ್‍ಗೆ ನಡೆಸಿದ ಜಾಥಾದಲ್ಲಿ ನಜೀಬ್ ತಾಯಿ ಫಾತಿಮಾ ನಫೀಸ್‍ರ ಜೊತೆ ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ಕೂಡ ಇದ್ದರು. ಜುನೈದ್‍ನ ತಾಯಿ ಸೈರಾ ಖಾನ್, ಗುಜರಾತ್‍ನಲ್ಲಿ ಕಾಣೆಯಾದ ಮಾಜಿದ್ ಪತ್ನಿ ಆಶಿಯಾನ ತೆಬೆ ಕೂಡ ಭಾಗವಹಿಸಿದ್ದರು. ನಜೀಬ್‍ಗೆ …

Read More »

ಪಾಕಿಸ್ತಾನದಲ್ಲಿ ಝೈನಬಾ ಕೊಲೆ ಆರೋಪಿಗೆ ಮರಣ ದಂಡನೆ

ಲಾಹೋರ್: ಪಾಕಿಸ್ತಾನದ ಲಾಹೋರಿನಲ್ಲಿ 7 ವರ್ಷದ ಬಾಲಕಿ ಝೈನಬಾ ಅನ್ಸಾರಿ ಅತ್ಯಾಚಾರ ಹತ್ಯೆ ಪ್ರಕರಣದ ಆರೋಪಿ ಸೀರಿಯಲ್ ಕಿಲ್ಲರ್ ಇಮ್ರಾನ್ ಅಲಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಲಾಹೋರಿನ ಕೋಟ್ ಲಖ್‍ಪತ್ ಜೈಲಿನಲ್ಲಿ ಇಂದು ಮುಂಜಾನೆ 5: 30ಕ್ಕೆ ಗಲ್ಲಿಗೇರಿಸಲಾಯಿತು. ಇಮ್ರಾನ್‍ನ ಮೃತ ದೇಹವನ್ನು ಪಡೆಯಲಿಕ್ಕಾಗಿ ಆತನ ಮಾವ ಮತ್ತು ತಂದೆ ಜೈಲಿಗೆ ಆಗಮಿಸಿದ್ದಾರೆ. ಆರೋಪಿ ಲಾಹೋರ್ ಹೈಕೋರ್ಟಿನಲ್ಲಿ ತನ್ನ ವಿರುದ್ಧದ ಮರಣದಂಡನೆಯನ್ನು ರದ್ದು ಪಡಿಸಬೇಕೆಂದು ಅರ್ಜಿ ಸಲ್ಲಿಸಿದ್ದರೂ ಕೋರ್ಟು ತಿರಸ್ಕರಿಸಿತ್ತು. ಈತ ಕೊಲೆಯಾದ ಬಾಲಕಿಯ ನೆರೆಮನೆಯ ವ್ಯಕ್ತಿಯಾಗಿದ್ದ. ಝೈನಬಾ ಅತ್ಯಾಚಾರ ಹತ್ಯೆಯ …

Read More »

ಸೌದಿ ಅರೇಬಿಯ ಆಕಾಶ ಯುದ್ಧ ನಿಲ್ಲಿಸದಿದ್ದರೆ ಯಮನ್‍ನಲ್ಲಿ ಶತಮಾನದಲ್ಲೇ ದೊಡ್ಡ ಕ್ಷಾಮ ಬಡಿದಪ್ಪಳಿಸಲಿದೆ: ವಿಶ್ವಸಂಸ್ಥೆ

ಸನಾ, ಅ.17: ಸೌದಿ ಅರೇಬಿಯದ ನೇತೃತ್ವದ ಸಖ್ಯ ಸೇನೆ ಯೆಮನ್‍ನಲ್ಲಿ ವ್ಯೋಮದಾಳಿ ಮಾಡುವುದನ್ನು ನಿಲ್ಲಿಸದಿದ್ದರೆ ಯಮನ್ ಶತಮಾನದಲ್ಲೇ ಭೀಕರ ಕ್ಷಾಮ ಪರಿಸ್ಥಿತಿಯನ್ನು ಎದುರಿಸಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಯುದ್ಧ ಮುಂದುವರಿದರೆ ಮೂರು ತಿಂಗಳೊಳಗೆ ಆ ದೇಶವನ್ನು ಕ್ಷಾಮ ಬಡಿದಪ್ಪಳಿಸುವುದು ನಿಶ್ಚಿತ ಎಂದು ಅದು ಎಚ್ಚರಿಸಿತು. ಸುಮಾರು ಒಂದೂವರೆ ಕೋಟಿ ಜನರು ಹಸಿವಿನಿಂದ ನರಳಬಹುದು ಎಂದು ಯೆಮನ್‍ನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕು ಕಾರ್ಯ ಚಟುವಟಿಕೆಗಳನ್ನು ಒಗ್ಗೂಡಿಸುವ ಲಿಸ್ ಗ್ರಾಂಡ್ ಎಚ್ಚರಿಕೆ ನೀಡಿದ್ದಾರೆ. ಒಂದು ತಿಂಗಳಿಂದ ದೇಶದ ಕರೆನ್ಸಿ ಬಹುದೊಡ್ಡ ಮೌಲ್ಯ ಕುಸಿತವನ್ನು ಎದುರಿಸುತ್ತಿದೆ. ನಿತ್ಯೋಪಯೋಗಿ ವಸ್ತುಗಳ …

Read More »

ಪ್ರವಾದಿ(ಸ) ಕಾಲದ ಮಹಿಳಾ ಸ್ವಾತಂತ್ರ್ಯ ಇವತ್ತೇಕೆ ಇಲ್ಲ?

@ ಅಬ್ದುಲ್ ಹಲೀಮ್ ಅಬೂಶಖ ಪ್ರವಾದಿವರ್ಯರ(ಸ) ಕಾಲದಲ್ಲಿ ಸಾಮಾಜಿಕ ರಂಗಗಳಲ್ಲಿ ಮಹಿಳೆಯರು ಸಕ್ರಿಯರಾಗಿರಲು ಪ್ರೇರಕವಾದ ಅಂಶಗಳು ಯಾವುವು? ಎಂಬ ಕುರಿತು ಕುರ್‍ ಆನಿನಲ್ಲಿ ಅಥವಾ ಹದೀಸ್‍ಗಳಲ್ಲಿ ಅದನ್ನು ಪ್ರತ್ಯೇಕವಾಗಿ ಗುರುತಿಸಿರುವುದನ್ನು ಕಾಣಲು ಸಾಧ್ಯವಿಲ್ಲ. ಆದರೂ ಇತಿಹಾಸ ಮತ್ತು ಆಧಾರ ಪ್ರಮಾಣಗಳನ್ನು ಜೊತೆಯಾಗಿಸಿ ಅಧ್ಯಯನ ಮಾಡಿದಾಗ ಮಹಿಳೆಯರಿಗೆ ಸಾಮಾಜಿಕ ರಂಗದಲ್ಲಿ ಸಕ್ರಿಯರಾಗಿರಲು ಸ್ಫೂರ್ತಿ ನೀಡಿದ ಅಂಶಗಳು ಯಾವುವು ಎಂಬುದನ್ನು ತಿಳಿಯಬಹುದು. ಆ ಕುರಿತು ಕೆಲವನ್ನು ಪರಿಶೀಲಿಸೋಣ. ಬದುಕಿನ ಅಗತ್ಯಗಳಿಗೆ ತಡೆಯಾಗದಂತೆ ಜೀವನ ಸುಗಮವಾಗಿ ಸಾಗಿಸುವಲ್ಲಿ ಮಹಿಳೆಯ ಪಾತ್ರ ಬಹು ಮಹತ್ವವಾದದ್ದು. ಆಯಿಶಾ(ರ) ಹೇಳುತ್ತಾರೆ, “ಎರಡರಲ್ಲಿ ಯಾವುದಾದರೊಂದನ್ನು …

Read More »