Breaking News
Home / editor

editor

ಟರ್ಕಿಯ ಉರ್ತುಗಲ್ ಟಿವಿ ಸೀರಿಯಲ್ ನೋಡಿ ಇಸ್ಲಾಂ ಧರ್ಮ ಸ್ವೀಕರಿಸಿದ ಮೆಕ್ಸಿಕನ್ ದಂಪತಿ – ವಿಡಿಯೋ

ಅಂಕಾರ,ಡಿ.4: ಟರ್ಕಿಯ ಟಿವಿ ಸೀರಿಯಲ್ ಉರ್ತುಗಲ್ ನೋಡಿ ಮೆಕ್ಸಿಕದ ದಂಪತಿ ಇಸ್ಲಾಂ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ರವಿವಾರ ಮೆಕ್ಸಿಕೊದ ಈ ಜೋಡಿ ಸೀರಿಯಲ್‍ನಲ್ಲಿ ಪಾತ್ರ ವಹಿಸಿದ ಶಹಲ್ ಅಲ್‍ರ ಮುಂದೆ ಇಸ್ಲಾಂ ಧರ್ಮವನ್ನು ತಮ್ಮದಾಗಿಸಿಕೊಂಡಿತು. ಶಹಲ್ ಅಲ್ ಜೋ ಅಬ್ದುರ್ರಹ್ಮಾನ್ ಪಾತ್ರ ವಹಿಸುತ್ತಿದ್ದಾರೆ. ಮುಸ್ಲಿಂ ಕೌನ್ಸಿಲ್ ಮೂಲಕ ಟ್ವೀಟ್ ಮಾಡಲಾದ ವೀಡಿಯೊದಲ್ಲಿ ಟರ್ಕಿಯ ಹಿಟ್ ಸೀರಿಯಲ್ ನಿಂದ ಪ್ರೇರಿತರಾಗಿ ಇಸ್ಲಾಮ್‍ನ ಗಹನ ಅಧ್ಯಯನ ನಡೆಸಿದೆವು. ನಂತರ ಇಸ್ಲಾಂ ಸ್ವೀಕರಿಸಿದೆವು ಎಂದು …

Read More »

ನನ್ನ ಯಶಸ್ಸಿನಲ್ಲಿ ಇಸ್ಲಾಮಿನ ಪಾತ್ರ ನಿರ್ಣಾಯಕ: ಅಕೋನ್

ಶಾರ್ಜಾ : ತಾನು ನಂಬಿರುವ ಇಸ್ಲಾಂ ಧರ್ಮವೇ ತನ್ನ ಯಶಸ್ಸಿನ ಮೂಲ ಎಂದು ಖ್ಯಾತ ಅಮೆರಿಕನ್-ಸೆನಗಲೀಸ್ ಗಾಯಕ, ರಾಪರ್ ಅಕೋನ್ (ಅಲಿಯೋನ್ ಥಿಯಮ್) ಹೇಳಿದ್ದಾರೆ. ಸೋಮವಾರ ಶಾರ್ಜಾ ಎಂಟ್ರಪ್ರನೇರಿಯಲ್ ಫೆಸ್ಟಿವಲ್ ಅಂಗವಾಗಿ ಶಾರ್ಜಾ ಎಕ್ಸ್‍ಪೋ ಸೆಂಟರ್‍ ನಲ್ಲಿ 2,000ಕ್ಕೂ ಅಧಿಕ ಮಂದಿಯೆದುರು ಭಾಷಣ ಮಾಡಿದ ಅಕೋನ್, ಕಾರು ಕಳ್ಳನಿಂದ ಪಾಪ್ ಸ್ಟಾರ್ ಹಾಗೂ ಸಾಮಾಜಿಕ ಉದ್ಯಮಿಯಾದ ತಮ್ಮ ಜೀವನದ ಪಯಣವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ತನ್ನ ಹಾಡುಗಳ ಮಿಲಿಯಗಟ್ಟಲೆ ಆಲ್ಬಂಗಳು ಮಾರಾಟವಾಗಿ, …

Read More »

HRS ಮಹಿಳಾ ವಿಭಾಗದಿಂದ “ತಿಬ್ಬುನ್ನಬವಿ” {ಪ್ರವಾದಿ ಮುಹಮ್ಮದ್(ಸ) ಆರೋಗ್ಯ ಮಾಹಿತಿ} ಕಾರ್ಯಾಗಾರ

ಮಂಗಳೂರು: ಪ್ರವಾದಿ ಮುಹಮ್ಮದ್(ಸ) ಮಾರ್ಗದರ್ಶನದಿಂದ ದೂರ ಸರಿದು ಬದುಕುತ್ತಿರುವುದೇ ಇಂದು ಮುಸ್ಲಿಮ್ ಸಮುದಾಯವು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗಲು ಕಾರಣ ಎಂದು ನೂರುನ್ನೀಸಾ (ಶಿಕ್ಷಕಿ ಜಾಮಿಯಾ ಮದ್ರಸ ಕುದ್ರೋಳಿ) ಹೇಳಿದರು. ಇವರು ಜಮಾಅತೆ ಇಸ್ಲಾಮೀ ಹಿಂದ್‍ನ ಅಂಗ ಸಂಸ್ಥೆಯಾದ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ(HRS) ಮಹಿಳಾ ವಿಭಾಗವು ಮಂಗಳೂರಿನ ಬೋಳಾರ್ ಇಸ್ಲಾಮಿಕ್ ಸೆಂಟರ್‍ ನಲ್ಲಿ ಹಮ್ಮಿಕೊಂಡ ತಿಬ್ಬುನ್ನಬವಿ (ಪ್ರವಾದಿ ಮುಹಮ್ಮದ್(ಸ) ಆರೋಗ್ಯ ಮಾಹಿತಿ) ಎಂಬ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 1,400 ವರ್ಷಗಳ …

Read More »

ಅತ್ಯಾಚಾರಿಗೆ ಉಗ್ರ ಶಿಕ್ಷೆ ನೀಡಲು ಇಸ್ಲಾಮ್ ಕರೆ ಕೊಡುವುದಾದರೂ ಯಾಕೆ?

ಮಾನವ ಜೀವ, ಪವಿತ್ರ ಕಅಬಾದ ಪವಿತ್ರತೆಗೆ ಸಮಾನ ಎಂದು ಇಸ್ಲಾಮಿನ ಘೋಷಣೆಯಾಗಿದೆ. “ಒಬ್ಬ ಮಾನವನ ಕೊಲೆ ಅಥವಾ ಭೂಮಿಯಲ್ಲಿ ಕ್ಷೋಭೆ ಮಾಡುವ ಕಾರಣಕ್ಕಾಗಿ ಹೊರತು ಯಾರಾದರೂ ಒಬ್ಬ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವಕೋಟಿಯನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವಕೋಟಿಗೆ ಜೀವದಾನ ಮಾಡಿದಂತೆ” (ಪವಿತ್ರ ಕುರ್‍ಆನ್ – 5: 32) ಎಂಬುದು ಕುರ್‍ಆನಿನ ಸಾರಾಂಶವಾಗಿದೆ. ಇಲ್ಲಿ ಜಾತಿ ಮತ ದೇಶ ಭಾಷೆ ಧರ್ಮದ …

Read More »

ಕುರ್‍ಆನ್ ಪ್ರವಚನಕಾರ ಮುಹಮ್ಮದ್ ಕುಂಞಯವರಿಗೆ ಶ್ರೀ ರುದ್ರಾಕ್ಷಿ ಮಠದಿಂದ ‘ಸೇವಾರತ್ನ’ ಪ್ರಶಸ್ತಿ

ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿ ಮಠ ವತಿಯಿಂದ ನೀಡಲ್ಪಡುವ ಪ್ರತಿಷ್ಠಿತ ‘ಸೇವಾರತ್ನ’ ಪ್ರಶಸ್ತಿಗೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಯವರು ಭಾಜನರಾಗಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು ರೂ. 10000/- ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿದೆ. ನಾಡಿನ ಖ್ಯಾತ ವಾಗ್ಮಿಯಾಗಿರುವ ಮುಹಮ್ಮದ್ ಕುಂಞಯವರು ನಾಡಿನ ವಿವಿಧ ಕಡೆಗಳಲ್ಲಿ ಕನ್ನಡ ಭಾಷೆಯಲ್ಲಿ ಸರಳವಾಗಿ ನೂರಾರು ಕುರ್‍ಆನ್ …

Read More »

ಯಹೂದಿ ಕುಟುಂಬವನ್ನು ರಕ್ಷಿಸಿದ ಮುಸ್ಲಿಂ ಮಹಿಳೆ – ವೀಡಿಯೊ

ಮುಸ್ಲಿಂ ಮಹಿಳೆ ಅಸ್ಮಾ ಶುವೇಕ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯಹೂದಿ ಕುಟುಂಬದ ನೆರವಿಗೆ ಬಂದು ಹಲ್ಲೆಯಿಂದ ರಕ್ಷಿಸಿದ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಜನಾಂಗೀಯ ವಿರೋಧಿಗಳಾದ ಕೆಲವರು ಯಹೂದಿ ಕುಟುಂಬವನ್ನು ತರಾಟೆಗೆ ತೆಗೆದುಕೊಂಡಾಗ ಮಧ್ಯ ಪ್ರವೇಶಿಸಿದ ಅಸ್ಮಾ ಅವರನ್ನು ಅಕ್ರಮದಿಂದ ಹಿಂಜರಿಯುವಂತೆ ಮಾಡಿದರು. ರೈಲಿನಲ್ಲಿ ಒಬ್ಬ ವ್ಯಕ್ತಿ ಯಹೂದಿ ವಿರೋಧಿ ಬೈಬಲ್ ಓದುತ್ತಿದ್ದ ಮತ್ತು ಯಹೂದಿ ತಂದೆಯ ಮೇಲೆ ಉದ್ರಿಕ್ತಗೊಂಡಿದ್ದ. ಆಗ ಅಸ್ಮಾ ಅವನನ್ನು ಸಾಂತ್ವನಗೊಳಿಸಲು ಯತ್ನಿಸಿದರು. ಪರಿಸ್ಥಿತಿ ಉದ್ರಿಕ್ತಗೊಳ್ಳದೆ …

Read More »

ಬಿಹಾರದಲ್ಲಿ 22 ಮುಸ್ಲಿಮ್ ಜಡ್ಜ್

ಬಿಹಾರ, ಡಿ.2: ಬಿಹಾರದಲ್ಲಿ ಜಡ್ಜ್ ಪರೀಕ್ಷೆಯಲ್ಲಿ 22 ಮುಸ್ಲಿಮ್ ಅಭ್ಯರ್ಥಿಗಳು ಗೆದ್ದು ಜಡ್ಜ್ ಆಗಿದ್ದಾರೆ. ಇವರಲ್ಲಿ ಏಳು ಯುವತಿಯರೂ ಸೇರಿದ್ದಾರೆ. ಎಲ್ಲರಿಗಿಂತ ಉನ್ನತ ರಾಂಕ್ ನ್ನು ಮುಸ್ಲಿಂ ಕ್ಯಾಂಡಿಡೇಟ್‍ಗಳು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸನಮ್ ಹಯಾತ್‍ಗೆ 10ನೇ ರಾಂಕ್ ಇದೆ. ಉತ್ತರ ಪ್ರದೇಶದಲ್ಲಿ 38 ಮುಸ್ಲಿಮರು ಜಡ್ಜ್ ಆಗಿ ನ್ಯಾಯಾಂಗ ಸೇವೆಗೆ ದಾಖಲಾಗಿದ್ದು ಇವರಲ್ಲಿ ಹದಿನೆಂಟು ಯುವತಿಯರೂ ಇದ್ದಾರೆ. ಇತ್ತೀಚೆಗೆ ರಾಜಸ್ತಾನದಲ್ಲಿ ಆರು ಮುಸ್ಲಿಮರು ಜಡ್ಜ್ ಆಗಿದ್ದರು. ಇವರಲ್ಲಿ ಐವರು …

Read More »

ಬುರ್ಕಾ ವಿವಾದ: ಕ್ಷಮೆ ಯಾಚಿಸುವುದಿಲ್ಲ ಎಂದ ಬೊರಿಸ್ ಜಾನ್ಸನ್

ಲಂಡನ್, ನ.30: ಬುರ್ಕ ಕುರಿತು 2018ರಲ್ಲಿ ನೀಡಿದ ಹೇಳಿಕೆಗೆ ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್ ಕ್ಷಮೆ ಯಾಚಿಸುವುದಿಲ್ಲ ಎಂದಿದ್ದಾರೆ. ಬುರ್ಕ ಮತ್ತು ಮುಸ್ಲಿಮ್ ಮಹಿಳೆಯರನ್ನು ದಮನದ ಪ್ರತೀಕ ಎಂದು ಹೇಳಿದ್ದರು. ಇಂತಹ ಉಡುಪು ಧರಿಸುವ ಮುಸ್ಲಿಂ ಮಹಿಳೆ ಲೆಟರ್ ಬಾಕ್ಸ್ ನಂತೆ ಎಂದು ಬೊರಿಸ್ ಪ್ರತಿಕ್ರಿಯಿಸಿದ್ದರು. ತದನಂತ ಬ್ರಿಟನ್‌ನಲ್ಲಿ ಜನಾಂಗೀಯ ದಾಳಿಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಲಂಡನ್‌ನ ಎಲ್‌ಬಿಸಿ ರೇಡಿಯೊ ಸ್ಟೇಶನ್ ಸಂವಾದದಲ್ಲಿ ಬೊರಿಸ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಈಗಲೂ …

Read More »

ಸತ್ಯಸಾಕ್ಷ್ಯ(ಶಹಾದತ್) ನಿರ್ವಹಿಸಿರಿ

ಜಮಾಲ್ ಕೆ. ಅಶ್ಹದು ಅನ್‍ಲಾ ಇಲಾಹ ಇಲ್ಲಲ್ಲಾಹು ವ ಅಶ್ಹದು ಅನ್ನ ಮುಹಮ್ಮದುರ್ರಸೂಲುಲ್ಲಾಹ್ (ಅಲ್ಲಾಹನಲ್ಲದೆ ಅನ್ಯದ ದೇವನಿಲ್ಲ ಮುಹಮ್ಮದ್ ಅವನ ದಾಸರಾಗಿದ್ದಾರೆ) ಎಂಬ ಪವಿತ್ರ ವಚನ ಮನಸಾರೆ ದೃಢವಾಗಿರಿಸಿ ನಾಲಿಗೆಯಿಂದ ಉಚ್ಚರಿಸಿ ಶಹಾದತ್ ದೃಢೀಕರಿಸಿದಾಗ ಓರ್ವನು ಸತ್ಯವಿಶ್ವಾಸಿಯಾಗುವನು. ಅದರರ್ಥ ಓರ್ವ ಮುಸ್ಲಿಮ್ ಆಗುವುದರೊಂದಿಗೆ ಆತ ಇಸ್ಲಾಮೀ ಕಾರ್ಯಕರ್ತನೂ ಆಗುವನು ಎಂದಾಗಿದೆ. ಅಥವಾ ಕಲಿಮಾ ಅಥವಾ ಸಾಕ್ಷ್ಯ ವಚನ ವ್ಯಕ್ತಿ, ಕುಟುಂಬ, ಸಮಾಜ, ದೇಶ ಎಂದು ಮುಂತಾದ ಜೀವನದ ಎಲ್ಲ ಕ್ಷೇತ್ರಗಳಲ್ಲಿ …

Read More »

ಪ್ರವಾದಿ ಮುಹಮ್ಮದರ(ಸ) ಕಿರು ಚಿತ್ರ – ಸ್ವಾಮಿ ಶಿವಾನಂದ ಸರಸ್ವತಿ

ಇಸ್ಲಾಮಿನ ಪ್ರವಾದಿಯೆಂದು ಕರೆಯಲಾಗುವ ಮುಹಮ್ಮದ್‍ರು ಮಕ್ಕಾದ ಕುರೈಷ್ ಗೋತ್ರದಲ್ಲಿ ಜನಿಸಿದರು. ವ್ಯಾಪಾರವು ಅವರ ಗೋತ್ರದ ಕಸುಬಾಗಿತ್ತು. ಇಸ್ಲಾಮಿನ ಪ್ರವಾದಿಯವರು ಸರಳ ಮತ್ತು ದಾರಿದ್ರ್ಯದ ಜೀವನ ಸಾಗಿಸಿದರು. ದೀಪದೆಣ್ಣೆಯಿಲ್ಲದ ಮಣ್ಣಿನ ಹೆಂಟೆಯ ಗೋಡೆ ಮತ್ತು ಖರ್ಜೂರದ ಸೋಗೆ ಹಾಸಿದ ಅವರ ನಿವಾಸವು ಕೆಲವೊಮ್ಮೆ ಕತ್ತಲೆಯಲ್ಲಿರುತ್ತಿತ್ತು. ಹಲವೊಮ್ಮೆ ಮನೆಯಲ್ಲಿ ರೊಟ್ಟಿ ತಯಾರಿಸುವ ಧಾನ್ಯದ ಹುಡಿಯಿರುತ್ತಿರಲಿಲ್ಲ. ಮುಹಮ್ಮದ್‍ರ ತಂದೆಯ ಹೆಸರು ಅಬ್ದುಲ್ಲ. ಒಂದು ಪ್ರಯಾಣದಲ್ಲಿ ಅವರು ಮರಣ ಹೊಂದಿದ್ದರು. ಮುಹಮ್ಮದ್‍ರು ಹುಟ್ಟಿ ಆರು ವರ್ಷ …

Read More »