Breaking News
Home / ವಾರ್ತೆಗಳು / ಮಸೀದಿ ಮೇಲೆ ದಾಳಿ: ಫ್ರಾನ್ಸ್ ಅಧ್ಯಕ್ಷರಿಂದ ಖಂಡನೆ

ಮಸೀದಿ ಮೇಲೆ ದಾಳಿ: ಫ್ರಾನ್ಸ್ ಅಧ್ಯಕ್ಷರಿಂದ ಖಂಡನೆ

ಪ್ಯಾರಿಸ್, ಅ. 30: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೇಲ್ ಮೆಕ್ರೋನ್ ಮಸೀದಿಯ ಮೇಲೆ ದಾಳಿ ನಡೆಸಿದ ದುಷ್ಟ ಕೃತ್ಯವನ್ನು ಖಂಡಿಸಿದ್ದಾರೆ. ಫ್ರಾನ್ಸ್ ಗಣರಾಜ್ಯ ದ್ವೇಷವನ್ನು ಸಹಿಸದು ಎಂದು ಟ್ವೀಟ್ ಮಾಡಿದ್ದಾರೆ.

ಈ ದುಷ್ಟ ಶಕ್ತಿಗಳನ್ನು ದಂಡಿಸುವುದು ಮತ್ತು ದೇಶದಲ್ಲಿನ ಮುಸ್ಲಿಮರ ರಕ್ಷಣೆಗೆ ಅಗತ್ಯ ಕ್ರಮ ಜರಗಿಸುವುದಾಗಿ ಅವರು ತಿಳಿಸಿದರು. ಇವರಂತೆ ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಿಣಿಗಳು ದಕ್ಷಿಣ ಬಯೋನ್ ನಗರದಲ್ಲಿ ಮಸೀದಿಯ ಮೇಲೆ ದಾಳಿ ನಡೆದ ಕೃತ್ಯವನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ.

ಸೋಮವಾರ ಬಯೋನ್ ನಗರದ ಮಸೀದಿಯೊಂದಕ್ಕೆ ವ್ಯಕ್ತಿಯೊಬ್ಬ ಗುಂಡು ಹಾರಾಟ ನಡೆಸಿ ಇಬ್ಬರನ್ನು ಗಾಯಗೊಳಿಸಿದ್ದು ಗಾಯಾಳುಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ದುಷ್ಕರ್ಮಿ ಮಸೀದಿಯ ಗೋಡೆಗೆ ಬೆಂಕಿಯಿಡಲು ಯತ್ನಿಸಿದ್ದ. ನಂತರ ದುಷ್ಕರ್ಮಿಯನ್ನು ಪೊಲೀಸರು ಅವನ ಮನೆಯ ಸಮೀಪ ಬಂಧಿಸಿದರು.

ಇತ್ತೀಚೆಗೆ ಫ್ರಾನ್ಸ್ ಸಹಿತ ಹೆಚ್ಚಿನ ಯುರೋಪ್ ದೇಶಗಳಲ್ಲಿ ಮುಸ್ಲಿಮರ ವಿರುದ್ಧ ಉಗ್ರವಾದಿಗಳು ದಾಳಿ ನಡೆಸುತ್ತಿದ್ದಾರೆ. ಜೊತೆಗೆ ಫ್ರೆಂಚ್ ಸರಕಾರ ಕೂಡ ಮುಸ್ಲಿಮರ ಮೇಲೆ ನಾನಾ ರೀತಿಯ ನಿರ್ಬಂಧಗಳನ್ನು ಹೇರಿದೆ.

About editor

Check Also

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು …

Leave a Reply

Your email address will not be published. Required fields are marked *