ಅರಫಾ ಸಂಗಮದ ಭಾಷಣ ಈ ಸಲ ಐದು ಭಾಷೆಯಲ್ಲಿ

ಸೌದಿ ಅರೇಬಿಯ, ಆ.8: ಹಜ್‍ನ ಪ್ರಧಾನ ಕರ್ಮವಾಧ ಅರಫಾ ಸಂಗಮದ ಭಾಷಣವನ್ನು ಈ ಸಲ ಐದು ಭಾಷೆಗಳಲ್ಲಿ ನೀಡಲು ತಯಾರಿ ನಡೆದಿದೆ.

ಹೆಚ್ಚಾಗಿ ಅರಫಾ ಸಂಗಮದ ಭಾಷಣ ಅರಬಿ ಭಾಷೆಯಲ್ಲಿರುತ್ತದೆ. ಆದರೆ ಈ ಸಲ ಅರಬಿ ಭಾಷೆಯನ್ನು ತತ್ಸಮಯ ಅನುವಾದಿಸಲು ವ್ಯವಸ್ಥೆ ಮಾಡಲಾಗಿದೆ.

ಅರಫಾ ಸಂಗಮ ಹಜ್‍ನ ಪ್ರಧಾನ ಕರ್ಮವಾಗಿದೆ. ಜಗತ್ತಿನ ವಿವಿಧ ಕಡೆಗಳಿಂದ ಬರುವ ವಿಶ್ವಾಸಿಗಳು ಅರಫಾದಲ್ಲಿ ಒಟ್ಟು ಸೇರುತ್ತಾರೆ. ಇಲ್ಲಿ ಪ್ರವಾದಿವರ್ಯರು(ಸ) ಭಾಷಣ ನೀಡಿದ್ದರು. ಅದರ ಸ್ಮರಣೆಯಲ್ಲಿ ಸೌದಿ ಅರೇಬಿಯದ ಗ್ರಾಂಟ್ ಮುಫ್ತಿ ಅರಫಾ ಭಾಷಣ ಮಾಡುತ್ತಾರೆ. ಅರಫಾ ಮೈದಾನದೊಳಗಿರುವ ಮಸೀದಿ ನಿಮಿರ್‍ನಲ್ಲಿ ಭಾಷಣ ನಡೆಯುತ್ತದೆ.

ಅರಬ್ ಭಾಷೆಯಲ್ಲಿ ಭಾಷಣ ನೀಡಿದರೂ ಐದು ಭಾಷೆಗೆ ಅದು ತರ್ಜುಮೆಗೊಳ್ಳಲಿದೆ. ಇಂಗ್ಲಿಷ್, ಫ್ರೆಂಚ್, ಉರ್ದು, ಮಲಯು, ಪರ್ಶಿಯನ್ ಭಾಷೆಗಳಲ್ಲಿ ಭಾಷಣ ಲಭ್ಯವಿರಲಿದೆ.

ಇನ್ನು ಮುಂದೆ ರೇಡಿಯೊ 88.3ಎಫ್‍ಎಂ ಮೂಲಕ ಮತ್ತು ಆಪ್ ಮೂಲಕ ಹಾಜಿಗಳು ಅರಫಾ ಭಾಷಣ ಆಲಿಸಬಹುದಾಗಿದೆ. ಲಕ್ಷಾಂತರ ಮಂದಿ ಭಾಗವಹಿಸುವ ಅರಫಾದಲ್ಲಿ ಹೆಚ್ಚು ಮಂದಿ ಭಾಷಣದ ಅರ್ಥವನ್ನು ಆಯಾ ಸಮಯದಲ್ಲಿ ತಲುಪಿಸುವ ಉದ್ದೇಶವನ್ನು ಎರಡು ಹರಂಗಳ ಕಾರ್ಯಾಲಯ ಹೊಂದಿದೆ.

Check Also

ಮಕ್ಕದಲ್ಲಿ ನಡೆಯಲು ಕಷ್ಟಪಡುತ್ತಿದ್ದ ಮಹಿಳೆಗೆ ತನ್ನ ಶೂ ನೀಡಿದ ಪೊಲೀಸ್- ವೀಡಿಯೊ ವೈರಲ್

ಸೌದಿ ಅರೇಬಿಯ, ಆ.14: ಮಕ್ಕದಲ್ಲಿ ಭಾರೀ ಉಷ್ಟತೆಯಿದೆ. ಆದ್ದರಿಂದ ರಸ್ತೆಯಲ್ಲಿ ನಡೆಯಲು ಆಗದೆ ಕಷ್ಟ ಅನುಭವಿಸಿದ ಮಹಿಳಾ ಹಾಜಿಯೊಬ್ಬರಿಗೆ ಸೌದಿ …

Leave a Reply

Your email address will not be published. Required fields are marked *