ಅಮೆರಿಕದ ದೂತವಾಸ ಉದ್ಘಾಟನೆಗೆ 54 ರಾಷ್ಟ್ರಗಳ ಬಹಿಷ್ಕಾರ

ಜೆರುಸಲೇಂ, ಮೇ 16: ಟೆಲ್‍ಅವೀವ್ ನಿಂದ ಜೆರುಸಲೇಮ್‍ಗೆ ಸ್ಥಳಾಂತರಗೊಂಡ ಅಮೆರಿಕದ ದೂತವಾಸದ ಉದ್ಘಾಟನಾ ಕಾರ್ಯಕ್ರಮವನ್ನು 54 ದೇಶಗಳು ಬಹಿಷ್ಕರಿಸಿವೆ.

86 ರಾಷ್ಟ್ರಗಳಿಗೆ ದೂತವಾಸ ಉದ್ಘಾಟನೆಗೆ ಆಹ್ವಾನ ನೀಡಲಾಗಿತ್ತು. ಇಸ್ರೇಲಿನ ಸಮಯ ಸೋಮವಾರ ಮಧ್ಯಾಹ್ನ ಒಂದು ಗಂಟೆಗೆ ದೂತವಾಸ ಉದ್ಘಾಟನೆಯ ಕಾರ್ಯಕ್ರಮವು ನಡೆದಿದೆ. ಯುರೋಪಿಯನ್ ಯೂನಿಯನ್ ದೇಶಗಳ ಹೆಚ್ಚಿನ ಪ್ರತಿನಿಧಿಗಳು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.

ರಷ್ಯ, ಈಜಿಪ್ಟ್, ಭಾರತ, ಜಪಾನ್, ಮೆಕ್ಸಿಕೊ ಸಮಾರಂಭದಿಂದ ದೂರ ಉಳಿದಿವೆ. ವಿವಿಧ ದೇಶಗಳ 32 ರಾಯಬಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಇಸ್ರೇಲಿನ ಹಾರಿಟರ್ಸ್ ಪತ್ರಿಕೆ ವರದಿ ಮಾಡಿದೆ. ಯುರೋಪಿಯನ್ ಯೂನಿಯನ್ ಸದಸ್ಯರ ದೇಶಗಳಲ್ಲಿ ನಾಲ್ಕು ದೇಶಗಳು ಮಾತ್ರ ಉದ್ಘಾಟನೆಯಲ್ಲಿ ಭಾಗವಹಿಸಿವೆ.

ಆಸ್ಟ್ರೀಯ, ಹಂಗೆರಿ, ರೊಮೆನಿಯ, ಚೆಕ್ ರಿಪಬ್ಲಿಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, 12 ಆಫ್ರಿಕನ್ ದೇಶಗಳು ಕಾರ್ಯಕ್ರಮದಲ್ಲಿ ಭಾಗವಹಿಸಿವೆ.

ಫೆಲಸ್ತೀನ್‍ನ ಜೆರುಸಲೇಮಿನ ವಿವಿಧ ಕಡೆಗಳಲ್ಲಿ ಬಲವಾದ ಪ್ರತಿಭಟನೆ ನಡೆಯಿತು. ಜೆರುಸಲೇಂ ದೂತವಾಸ ಉದ್ಘಾಟನೆ ಕಾರ್ಯಕ್ರಮ ಇವ್ಯಾವುದನ್ನೂ ಲೆಕ್ಕಿಸದೆ ನಡೆದಿದೆ. ಇಸ್ರೇಲ್ ಸೇನೆ ಗುಂಡು ಹಾರಿಸಿ 58 ಮಂದಿ ಫೆಲಸ್ತೀನಿಯರನ್ನು ಕೊಂದು ಹಾಕಿದೆ. 2700 ಮಂದಿ ಗಾಯಗೊಂಡಿದ್ದಾರೆ.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *