ಅಲ್ಲಾಮಾ ಇಕ್ಬಾಲ್ ರ ಜೀವನದಲ್ಲಿ ಕುರ್‍ಆನಿನ ಪ್ರಭಾವ

@ ಮೌ| ಅಬುಲ್ ಹಸನ್ ಅಲಿ ನದ್ವಿ

ಮಹಾ ಕವಿ ಅಲ್ಲಾಮಾ ಮುಹಮ್ಮದ್ ಇಕ್ಬಾಲ್(ರ) ಅವರ ಜೀವನವು ಪವಿತ್ರ ಕುರ್‍ಆನ್‍ನಿಂದ ಎಷ್ಟು ಪ್ರಭಾವಿತಗೊಂಡಿತ್ತೋ ಅಷ್ಟು ಅವರನ್ನು ಯಾವ ಗ್ರಂಥವೂ ಯಾವ ಮಹಾನ್ ವ್ಯಕ್ತಿತ್ವವೂ ಪ್ರಭಾವಿತಗೊಳಿಸಲಿಲ್ಲ. ಅವರ ಈಮಾನ್ ಓರ್ವ `ನವ ಮುಸ್ಲಿಮ್’ನ ಈಮಾನ್‍ನಂತಿತ್ತು. ಅವರಿಗೆ ಅದು ಪರಂಪರಾಗತವಾಗಿ ಬಂದು ಸಿಕ್ಕಿದ್ದಲ್ಲ. ಆದ್ದರಿಂದ ಅವರಲ್ಲಿ ಪಾರಂಪರ್ಯ ಮುಸಲ್ಮಾನರಿಗಿಂತ ಭಿನ್ನವಾಗಿ ಕುರ್‍ಆನಿನೊಂದಿಗೆ ಆಸಕ್ತಿ, ಸಂಬಂಧ, ಭಾವನಾತ್ಮಕ ನಂಟು ಅಪಾರವಾಗಿತ್ತು. ಆದ್ದರಿಂದ ಅವರು ಕುರ್‍ಆನನ್ನು ಆಳಕ್ಕಿಳಿದು ಅಧ್ಯಯನ ನಡೆಸುತ್ತಿದ್ದರು. ಅವರ ಅಧ್ಯಯನವು ಸಾಮಾನ್ಯ ಮುಸಲ್ಮಾನರ ಅಧ್ಯಯನದಂತಿರಲಿಲ್ಲ.

ತನ್ನ ಕುರ್‍ಆನ್ ಅಧ್ಯಯನದ ಕತೆಯನ್ನು ಅಲ್ಲಾಮಾ ಇಕ್ಬಾಲ್ ಹೀಗೆ ವಿವರಿಸುತ್ತಾರೆ- “ದಿನಂಪ್ರತಿ ಫಜ್ರ್ ನಮಾಝ್‍ನ ನಂತರ ಕುರ್‍ಆನ್ ಪಾರಾಯಣ ಮಾಡುವುದು ನನ್ನ ರೂಢಿ ಯಾಗಿತ್ತು. ನನ್ನ ತಂದೆ ಅವರು ಕುರ್‍ಆನ್ ಪಠಿಸುತ್ತಿರುವಾಗ ಹತ್ತಿರ ಏನು ಮಾಡುತ್ತಿ ಎಂದು ಕೇಳುತ್ತಿದ್ದರು. ನಾನು ಕುರ್‍ಆನ್ ಪಠಿಸುತ್ತಿದ್ದೇನೆಂದು ಹೇಳುತ್ತಿದೆ.” ಅವರ ತಂದೆ ಆಗಾಗ ಅವರನ್ನು ಕುರ್‍ಆನ್ ಪಠಿಸುತ್ತಿರುವುದರ ಕುರಿತು ವಿಚಾರಿಸುತ್ತಲೇ ಇದ್ದರು.

ಕೊನೆಗೊಮ್ಮೆ ಇಕ್ಬಾಲ್ ತಂದೆಯೊಂದಿಗೆ ಕೇಳಿದರು- “ಅಪ್ಪಾ! ತಾವು ಯಾವಾಗಲೂ ನನ್ನಲ್ಲಿ ವಿಚಾರಿಸುತ್ತಿದ್ದೀರಿ. ನಾನು ಒಂದೇ ಉತ್ತರ ನೀಡುತ್ತಿದ್ದೇನೆ. ತಾವು ಮರು ಮಾತಾಡುತ್ತಿರಲಿಲ್ಲ. ಹೋಗಿ ಬಿಡುತ್ತೀರಿ ಏಕೆ?” ತಂದೆ ಉತ್ತರಿಸಿದರು- “ನೀನು ಕುರ್‍ಆನ್ ಈಗ ತಾನೇ ಅವತೀರ್ಣಗೊಂಡಿದೆ ಎಂಬ ಭಾವನೆಯೊಂದಿಗೆ ಓದಬೇಕು.” ಅಂದಿನಿಂದ ಇಕ್ಬಾಲ್ ಕುರ್‍ಆನನ್ನು ಚೆನ್ನಾಗಿ ಗ್ರಹಿಸಿ ಅಧ್ಯಯನ ನಡೆಸ ತೊಡಗಿದರು.

ಅಲ್ಲಾಮಾ ಇಕ್ಬಾಲರು ತನ್ನ ಇಡೀ ಜೀವಮಾನದಲ್ಲಿ ಕುರ್‍ಆನಿನಲ್ಲಿ ಚಿಂತನೆ ನಡೆಸುತ್ತಾ ಪಠಿಸುತ್ತಿದ್ದರು. ಕುರ್‍ಆನಿನ ಬಗ್ಗೆಯೇ ಆಲೋಚಿಸುತ್ತಿದ್ದರು. ಕುರ್‍ಆನಿನ ಆಶಯದಂತೆಯೇ ಮಾತಾಡುತ್ತಿದ್ದರು. ಅದು ಅವರ ಅತ್ಯಂತ ಪ್ರಿಯ ಗ್ರಂಥವಾಯಿತು. ಅದರಿಂದ ಹೊಸ ಹೊಸ ಜ್ಞಾನ ಅವರಿಗೆ ಲಭಿಸುತ್ತಿತ್ತು. ಅವರಿಗೆ ಒಂದು ಹೊಸ ನಂಬಿಕೆ, ಹೊಸ ಪ್ರಕಾಶ, ಒಂದು ಹೊಸ ಶಕ್ತಿ ಪ್ರಾಪ್ತವಾಗುತ್ತಿತ್ತು. ಅವರು ಕುರ್‍ಆನಿನ ಅಧ್ಯಯನವನ್ನು ಹೆಚ್ಚಿಸುತ್ತಾ ಹೋದಂತೆ ಅವರ ವಿಚಾರದಲ್ಲಿ ಔನ್ನತ್ಯವುಂಟಾಯಿತು. ಅವರ ಈಮಾನ್ ಪ್ರಬಲವಾಯಿತು.

ಕುರ್‍ಆನ್ ಒಂದು ಜೀವಂತ ಗ್ರಂಥವಾಗಿದ್ದು ಎಲ್ಲ ಲೌಕಿಕ ಜ್ಞಾನ ಹಾಗೂ ಶಾಶ್ವತ ಪರಲೋಕ ಮೋಕ್ಷದ ಖಾತ್ರಿಯನ್ನು ನೀಡುತ್ತದೆಂದು ಅವರಿಗೆ ಮನವರಿಕೆಯಾಯಿತು. ಅಲ್ಲದೆ ಅದೊಂದು ಮಾಸ್ಟರ್ ಕೀ ಆಗಿದ್ದು ಮಾನವ ಜೀವನದ ಯಾವುದೇ ರಂಗದ ಯಾವುದೇ ಪ್ರಶ್ನೆ, ಯಾವುದೇ ಸಮಸ್ಯೆಯ ಪರಿಹಾರಕ್ಕಾಗಿ ಅದನ್ನು ಹಾಕಿದರೂ ಅದು ಕೂಡಲೇ ತೆರೆದು ಬಿಡುತ್ತದೆ. ಅದು ಜೀವನದ ಸುವ್ಯಕ್ತ ಸಂವಿಧಾನ ಹಾಗೂ ಅಂಧಕಾರದಲ್ಲಿ ಬೆಳಕಾಗಿದೆ ಎಂಬುದನ್ನು ಅವರು ಕಂಡುಕೊಂಡರು.

Check Also

ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ ಮಾನವನು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಆತನ ಸುಖ ಸಂಪಾದನೆಯ ಬಯಕೆ ಹೆಚ್ಚಿತು. ಈ ಬಯಕೆಯು ಅತಿಯಾಗಿ …

Leave a Reply

Your email address will not be published. Required fields are marked *