ಇಸ್ಲಾಮಿನ ದೃಷ್ಟಿಕೋನದ ಒಂದು ಸಣ್ಣ ಪರಿಚಯ

ಯೂರೋಪಿನಲ್ಲಿ ಇಸ್ಲಾಮ್ ಗೆ ಮತಾಂತರ ಆದ ಒಬ್ಬರೊಂದಿಗೆ “ತಾವು ಇಸ್ಲಾಮಿನಲ್ಲಿ ಯಾವುದರಿಂದ ಆಕರ್ಷಿತರಾದಿರಿ” ಅಂತ ಕೇಳಿದಾಗ ಅವರು ಇಸ್ಲಾಮಿನ ಬಹಳಷ್ಟು ಸಂಗತಿಗಳಿಂದ ಆಕರ್ಷಿತನಾಗಿದ್ದೇನೆ. ಅವುಗಳಲ್ಲಿ ಮನ ಪರಿವರ್ತನೆ ಆಗಿ ಇಸ್ಲಾಮ್ ನತ್ತ ಸೆಳೆದ ವೃತ್ತಾಂತ ಅಂದರೆ ಪ್ರವಾದಿ(ಸ) ಒಂದು ಸಭೆಯನ್ನು ಉದ್ದೇಶಿಸುತ್ತಿರುವಾಗ ಒಬ್ಬರು ಪ್ರವಾದಿ(ಸ)ಯವರೇ, ನನ್ನ ಮಗನು 3 ದಿನಗಳಿಂದ ಕಾಣೆ ಆಗಿರುವನು ಅವನು ಮರಳಿ ಸಿಗುವಂತಾಗಲು ದೇವನಲ್ಲಿ ಪ್ರಾರ್ಥಿಸಬೇಕು ಎಂದು ಬೇಡಿಕೊಳ್ಳುತ್ತಾರೆ.

ಪ್ರವಾದಿ(ಸ)ರವರು ಪ್ರಾರ್ಥಿಸಲು ಅಣಿ ಆಗುತ್ತಿರುವಾಗ ಸಭೆಯಲ್ಲಿದ್ದ ಒಬ್ಬರು ಇವರ ಮಗನನ್ನು ಈಗಷ್ಟೇ ಸಭೆಗೆ ಬರುವ ಮುನ್ನ ಇಂತಿಂತಹ ಒಂದು ತೋಟದಲ್ಲಿ ಮಕ್ಕಳೊಂದಿಗೆ ಆಡುತ್ತಿರುವಾಗ ಕಂಡಿದ್ದೇನೆ ಅನ್ನುತ್ತಾರೆ. ಇದನ್ನು ಕೇಳುತ್ತಲೇ ಅವರು ಮಗನನ್ನು ಕರೆ ತರಲು ಓಟಕ್ಕಿಟ್ಟುಕೊಂಡಾಗ ಪ್ರವಾದಿ(ಸ) ಸಭಿಕರಲ್ಲಿ ಹೇಳಿ ಅವರನ್ನು ವಾಪಾಸು ಕರೆ ತಂದು, ಏನು ಬಹಳ ಅವಸರ ಇದೇಯೇ? ಅಂತ ಕೇಳುತ್ತಾರೆ. ಅದಕ್ಕೆ ಅವರು “ಅವನು ನನ್ನ ಹೃದಯದ ಕುಡಿ 3 ದಿನಗಳಿಂದ ಮಗನಿಂದ ಬೇರ್ಪಟ್ಟಿರುವೆ ಮತ್ತು ಅವನ ತಾಯಿಯೂ ಅವನಿಗಾಗಿ ಕಂಬನಿ ಹಾಕುತ್ತಿರುವಳು. 3 ದಿನಗಳಿಂದ ಹೊಟ್ಟೆಗೆ ತಿಂದಿರುವನೋ ಇಲ್ಲವೋ ಎಂಬ ಚಿಂತೆ ಕಾಡುತ್ತಿದೆ. ಆದುದರಿಂದ ಬೇಗನೇ ಸಿಗಬೇಕಾಗಿದೆ ಅನ್ನುತ್ತಾರೆ.

ಬಹಳ ಒಳ್ಳೆಯದು. ಆದರೆ ನಿಮಗೆ ಒಂದು ವಿಷಯ ಹೇಳಲು ವಾಪಾಸು ಬರ ಹೇಳಿದ್ದು. ಅದೇನೆಂದರೆ ತೋಟಕ್ಕೆ ಹೋಗಿ ಎಲ್ಲರ ಎದುರು ಓ ನನ್ನ ಮಗನೇ ಅಂತ ಕರೆಯದೇ ಅವನ ಹೆಸರಿನಿಂದ ಕರೆಯಬೇಕು ಅನ್ನುತ್ತಾರೆ. ಈ ಮಾತಿಗೆ ಆ ಮನುಷ್ಯನು ಅವನು ನನ್ನ ಮಗ, ಮಗನೇ ಅಂತ ಕರೆದರೆ ಏನಾಗುತ್ತೆ? ಅಂತ ಪ್ರಶ್ನಿಸುತ್ತಾರೆ. ಅದಕ್ಕೆ ಪ್ರವಾದಿ(ಸ)ರವರು ನೀವು 3 ದಿನಗಳಿಂದ ಬೇರ್ಪಟ್ಟಿದ್ದೀರಿ ಅವನನ್ನು ಕರೆಯುವಾಗ ನಿಮ್ಮ ಸ್ವರದಲ್ಲಿ ಬಹಳ ಸಿಹಿತನ ಇರುತ್ತದೆ ಮತ್ತೆ ಅಲ್ಲಿ ಆಟವಾಡುತ್ತಿರುವ ಇತರ ಮಕ್ಕಳಲ್ಲಿ ಯಾರಾದರು ಅನಾಥರಾಗಿದ್ದರೆ ಅದು ಅವರಲ್ಲಿ ದುಖಃ ತರಿಸಬಹುದು .. ಒಂದು ವೇಳೆ ನನಗೂ ತಂದೆ ಇರುತ್ತಿದ್ದರೆ ಅನ್ನುವ ಭಾವನೆ ಅವರಲ್ಲಿ ತರಿಸಬಹುದು ಅನ್ನುತ್ತಾರೆ. ಅದಕ್ಕೆಯೇ ನಿಮ್ಮ ಒಡಲಿನ ಆಳವನ್ನು ಮನೆಗೆ ಸೇರಿದ ಮೇಲೆ ಪೂರೈಸಿಕೊಳ್ಳಬಹುದು ಅಂತ ಹೇಳಿ ಕಳುಹಿಸುತ್ತಾರೆ.

ಇದೇ ಆಗಿದೆ ಇಸ್ಲಾಮಿನ ಅಂದಾಜು, ಮತ್ತೆ ಇಸ್ಲಾಮ್ ವಿಧವೆಯ ಎದುರು ತನ್ನ ಮಡದಿಯನ್ನು ಮುದ್ದಿಸುವುದು, ಬಡವನ ಎದುರು ತನ್ನ ಐಶ್ವರ್ಯನ್ನು ತೋರಿಸುವುದನ್ನೂ ತಡೆಯುತ್ತದೆ. ಇಷ್ಟೇ ಅಲ್ಲದೇ ಮನೆಯಲ್ಲಿ ಭಾರಿ ಅಡುಗೆ ಮಾಡುವಾಗ ಅದರ ಸುವಾಸನೆ ಹರಡದಂತೆ ಮುಂಜಾಗ್ರತೆ ಎಂಬಂತೆ ಅಧಿಕ ನೀರನ್ನು ಬೆರೆಸುವ ಅಪ್ಪಣೆ ಮಾಡಿ, ಅಡುಗೆಯ ಒಂದಂಶವನ್ನು ನೆರೆಕರೆಯ ಮನೆಗಳಿಗೂ ಮುಟ್ಟಿಸಲು ಹೇಳಿದೆ. ಇದನ್ನು ಕೈಗೊಳ್ಳಲು ನಿಮಗೆ ಆಸಾಧ್ಯವೆಂದಾದರೆ ಅಡುಗೆಯನ್ನು ನೆರೆಕರೆಯ ಮಕ್ಕಳು ಮಲಗಿದ ಮೇಲೆ ತಯಾರಿಸಲು ಸೂಚಿಸಲಾಗಿದೆ.

ಪ್ರವಾದಿ(ಸ)ರವರು ಅನಾಥನನ್ನು ಗೌರವಿಸುವ ಮನೆಯೇ ಭೂಮಿಯಲ್ಲಿ ಅತ್ಯುತ್ತಮ ಮನೆ ಎಂದಿರುವರು.

  • ಮುಹಮ್ಮದ್ ಇಸ್ಹಾಖ್

Check Also

ಪ್ರವಾದಿಯವರ (ಸ) ಜೀವನ ಕ್ರಮ

ಡಾ| ಬಿ. ಎನ್. ಪಾಂಡೆ ಮುಹಮ್ಮದ್‍ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ …

Leave a Reply

Your email address will not be published. Required fields are marked *