Breaking News
Home / ವಾರ್ತೆಗಳು / 82 ಕೋಟಿ ಜನರು ಹಸಿವಿನಲ್ಲಿ; ಫೋಲಾಗುತ್ತಿರುವ ಆಹಾರ 100 ಕೋಟಿ ಟನ್

82 ಕೋಟಿ ಜನರು ಹಸಿವಿನಲ್ಲಿ; ಫೋಲಾಗುತ್ತಿರುವ ಆಹಾರ 100 ಕೋಟಿ ಟನ್

ನ್ಯೂಯಾರ್ಕ್, ಅ. 22: ಜಗತ್ತಿನಲ್ಲಿ 82 ಕೋಟಿ ಜನರು ಆಹಾರ ಕೊರತೆ ಎದುರಿಸುತ್ತಿದ್ದಾರೆ. ಆದರೆ ನೂರು ಕೋಟಿ ಟನ್ ಆಹಾರ ವೇಸ್ಟ್ ಆಗಿತ್ತಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.

ಜಗತ್ತಿನ ಬೃಹತ್ ಆಹಾರ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟನಿಯೋ ಗುಟರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಸಿಯುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಾ ಇದೆ. ಇದೇ ಸಂದರ್ಭದಲ್ಲಿ ಫೋಲಾಗುವ ಆಹಾರದ ಪ್ರಮಾಣ ಕಂಡಾಗ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಜಗತ್ತಿನಲ್ಲಿ 200 ಕೋಟಿ ಜನರು ದಪ್ಪ ಶರೀರ, ಅತಿಭಾರ ಸಮಸ್ಯೆ ಎದುರಿಸುತ್ತಿದ್ದಾರೆ. ಅನಾರೋಗ್ಯಕರ ಆಹಾರ ಸೇವಿಸುವುದು ಈ ಅಸೌಖ್ಯಗಳಿಗೆ ಕಾರಣ, ಇವೆಲ್ಲ ಬದಲಾಯಿಸಬೇಕಾದ ಅನಿವಾರ್ಯತೆ ಇರುವ ಕಾಲವಿದು ಎಂದು ಗುಟರಸ್ ಹೇಳಿದರು.

ವಿಶ್ವಸಂಸ್ಥೆಯ ಆಹಾರ , ಕೃಷಿ ಸಂಘಟನೆಯ ವರದಿಯ ಪ್ರಕಾರ ಜಗತ್ತಿನಲ್ಲಿ ಅತಿ ಹೆಚ್ಚು ಪೋಷಕಾಹಾರ ಕೊರತೆ ಭಾರತದಲ್ಲಿದ್ದು 19.44 ಕೋಟಿ ಜನರು ಆಹಾರ ಕೊರತೆ ಎದುರಿಸುತ್ತಿದ್ದಾರೆ.

About editor

Check Also

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು …

Leave a Reply

Your email address will not be published. Required fields are marked *