ಹಾದಿಯಾ ಮತ್ತು ಮತಾಂತರ


@ ಎಜಾಝ್ ಅಶ್ರಫ್

ಅಖಿಲಾ ಅಶೋಕನ್ ಇಸ್ಲಾಮ್ ಸ್ವೀಕರಿಸಿದ ಬಳಿಕ, ಶೆಫಿನ್ ಶಾಜಹಾನ್‍ನನ್ನು ಮದುವೆಯಾದ ಕುರಿತು ತನಿಖೆ ನಡೆಸುವ ಮೊದಲು ಪಾಶ್ಚಾತ್ಯ ಜಗತ್ತಿನಲ್ಲಿ ಸಾವಿರಾರು ಮಂದಿ ವಿಶೇಷವಾಗಿ ಬಿಳಿಯ ಮಧ್ಯಮ ವರ್ಗದ ಜನರು ಇಸ್ಲಾಂ ಧರ್ಮವನ್ನು ಯಾಕೆ ಆಯ್ಕೆ ಮಾಡಿ ಮುಸ್ಲಿಮರಾಗುತ್ತಿದ್ದಾರೆ ಎನ್ನುವುದನ್ನು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಕೇರಳದಲ್ಲಿ ಮುಸ್ಲಿಮರಲ್ಲದವರ ಮತಾಂತರ ತಡೆಯಲು ಯಾವುದೋ ಒಂದು ಇಸ್ಲಾಮಿಸ್ಟ್ ಸಂಚು ನಡೆಯುತ್ತಿದೆಯೇ ಎನ್ನುವ ಅಭಿಪ್ರಾಯವನ್ನು ತಿದ್ದಿ ಸರಿಪಡಿಸುವುದಕ್ಕೆ ಅದರಿಂದ ಸಾಧ್ಯವಾಗಲೂಬಹುದು.
ಪರಸ್ಪರ ಘರ್ಷಣೆಯನ್ನು ಸರಳೀಕರಿಸಿ, ಭಯೋತ್ಪಾದನೆಯನ್ನು ಪ್ರತಿರೋಧಿಸಲು ಲಂಡನ್ ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ಫೈಯ್ತ್ ಮ್ಯಾಟರ್ಸ್ ಎನ್ನುವ ಸಂಘಟನೆ 2011 ರಲ್ಲಿ ಪ್ರಕಟಿಸಿದ ಎ ಮೈನಾರಿಟಿ ವಿದಿನ್ ಎ ಮೈನಾರಿಟಿ ಎನ್ನುವ ವರದಿಯನ್ನು ಎನ್‍ಐಎ ಖಂಡಿತವಾಗಿಯೂ ಸೂಕ್ಷ್ಮವಾಗಿ ಅಧ್ಯಯನ ನಡೆಸಬೇಕಾಗಿದೆ. ಬಿಳಿಯರ ಇಸ್ಲಾಮ್ ಸ್ವೀಕಾರಕ್ಕೆ ಸಂಬಂಧಿಸಿ ಅಧ್ಯಯನ ಮಾಡುವ ಸ್ವಾನ್ಸಿ ವಿಶ್ವ ವಿದ್ಯಾನಿಲಯದ ಎಂ.ಐ. ಕೆವಿನ್ ಬ್ರೇಸ್ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಪ್ರಸ್ತುತ ವರದಿ ತಯಾರಿಸಲಾಗಿತ್ತು.
2001ರಲ್ಲಿ ಇಂಗ್ಲೆಂಡ್‍ನಲ್ಲಿ 60,669 ಮಂದಿ ಮತಾಂತರಗೊಂಡಿದ್ದಾರೆ ಎಂದು ಬ್ರೇಸ್ ಗುರುತಿಸಿತ್ತು. ಇವರಲ್ಲಿ ಶೇ. 55ರಷ್ಟು ಮಂದಿ ಬಿಳಿಯರು ಇದ್ದರು. ಹತ್ತು ವರ್ಷದ ಬಳಿಕ ಈ ಸಂಖ್ಯೆ ಸುಮಾರು 1,00,000ಕ್ಕೂ ಹೆಚ್ಚಾಯಿತು. 2010ರಲ್ಲಿ 5200 ಮಂದಿ ಇಸ್ಲಾಂ ಸ್ವೀಕರಿಸಿದ್ದರು. 1:2 ಎನ್ನುವ ಅನುಪಾತದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಮತಾಂತರಗೊಂಡಿದ್ದರೆಂದು ಬ್ರೇಸ್‍ನಂತೆ ಬೇರೆಯವರು ಕೂಡಾ ನಂಬಿದ್ದಾರೆ.
ಪೀವ್ಸ್ ರಿಸರ್ಚ್ ಸೆಂಟರ್‍ನ ಲೆಕ್ಕ ಪ್ರಕಾರ, ಅಮೆರಿಕದಲ್ಲಿ 2015ರಲ್ಲಿ 3.3 ಮಿಲಿಯನ್ ಮುಸ್ಲಿಮರಲ್ಲಿ ಶೇ. 23 ಮಂದಿ ಇಸ್ಲಾಮ್ ಸ್ವೀಕರಿಸಿದವರು ಆಗಿದ್ದಾರೆ. ಮತಾಂತರಗೊಂಡವರಲ್ಲಿ ಶೆ. 91ರಷ್ಟು ಮಂದಿ ಅಮೆರಿಕದಲ್ಲಿ ಹುಟ್ಟಿದವರು. ಇವರಲ್ಲಿ ಶೇ. 59ರಷ್ಟು ಮಂದಿ ಅಫ್ರೋ ಅಮೆರಿಕನ್ ಮಂದಿ. ಶೇ. 27ರಷ್ಟು ಮಂದಿ ಬಿಳಿಯರು. ಕೆಂಟುಕಿ ವಿಶ್ವವಿದ್ಯಾಲಯದ ಇಹ್ಸಾನ್ ಬಾಗ್ಬಿ ತನ್ನ 2001ರ ಅಧ್ಯಯನದಲ್ಲಿ ಹೀಗೆ ಹೇಳಿದ್ದಾರೆ- 4:1 ಎನ್ನುವ ಅನುಪಾತದಲ್ಲಿ ಮತಾಂತರವಾಗುವ ಮಹಿಳೆಯರು ಪುರುಷರನ್ನು ಮೀರಿಸಿದ್ದಾರೆ ಎಂಬುದನ್ನು ಬೇರೆ ಬೇರೆ ಅಧ್ಯಯನಗಳು ತಿಳಿಸಿವೆ ಎಂದಿದ್ದಾರೆ.
ಮತಾಂತರದ ಕಾರಣಗಳು
ಹೊಸ ಮುಸ್ಲಿಮರನ್ನು ಎರಡು ರೀತಿ ವಿಭಾಗಿಸಲಾಗಿದೆ. ಜೀವನ ಸಂಗಾತಿ ಮುಸ್ಲಿಂ ಆದ ಕಾರಣದಿಂದ ಇಸ್ಲಾಮ್ ಸ್ವೀಕರಿಸಿದ ವರ್ಗ ಒಂದಾದರೆ ಇನ್ನೊಂದು ವರ್ಗ ತಮ್ಮ ಸಾಂಸ್ಕøತಿಕ ಅನುಭವಗಳು, ಸೂಫೀಸಂನೊಂದಿಗೆ ಬೆರೆತದ್ದು, ಪ್ರಯಾಣ, ಮುಸ್ಲಿಂ ಗೆಳೆಯರು ಮುಂತಾದ ಕಾರಣಗಳಿಂದ ಇಸ್ಲಾಮಿನ ಕುರಿತು ಶೋಧ ನಡೆಸಿದವರು. ಕೊನೆಯಲ್ಲಿ ಅವರು ಇಸ್ಲಾಮ್‍ಗೆ ಮತಾಂತರಗೊಂಡಿದ್ದರು.
ಫೆಯ್ತ್ ಮ್ಯಾಟರ್ಸ್‍ನ ಸಮೀಕ್ಷೆ ಪ್ರಕಾರ, ಶೇ. 45ರಷ್ಟು ಮತಾಂತರಕ್ಕೂ ಮದುವೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರೆಲ್ಲ ಮದುವೆಯ ಮೊದಲು ಮತಾಂತರಗೊಂಡಿದ್ದರು. ಮಾತ್ರವಲ್ಲ ಮತಾಂತರಗೊಂಡ ಬಳಿಕ ಅವರು ಸಹಜವಾಗಿ ತಮ್ಮ ಹೊಸ ಧರ್ಮ ವಿಶ್ವಾಸದ ವ್ಯಕ್ತಿಯನ್ನು ಸಂಗಾತಿಯನ್ನಾಗಿ ಆಯ್ಕೆ ಮಾಡಿ ಕೊಂಡಿದ್ದರು.
ಅಖಿಲಾ ಈಗ ಹಾದಿಯಾ ಎನ್ನುವ ಹೆಸರಿನಲ್ಲಿ ಕರೆಯಲ್ಪಡುತ್ತಿದ್ದಾಳೆ. ಮೇಲೆ ವಿವರಿಸಿದ ರೀತಿಗೆ ಅಖಿಲಾಳ ಕತೆಯೂ ಸರಿ ಹೊಂದುತ್ತದೆ. ಮತಾಂತರವಾಗುವ ಸಮಯದಲ್ಲಿ ಶೆಫಿನ್ ಜಹಾನ್ ನೊಂದಿಗೆ ಅವಳಿಗೆ ಯಾವುದೇ ಸಂಬಂಧವಿರಲಿಲ್ಲ. ಮತಾಂತರವಾದ ಬಳಿಕ ಒಂದು ಮ್ಯಾಟ್ರಿಮೊನಿ ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿದ್ದಳು. ಶೆಫಿನ್‍ನನ್ನು ಆಯ್ಕೆ ಮಾಡಿದ್ದಳು. ಯಾಕೆಂದರೆ ಅವಳು ಬಯಸಿದ್ದಂತಹ ದೃಷ್ಟಿಕೋನವಿದ್ದ ಅವಳಿಗೊಪ್ಪುವ ವ್ಯಕ್ತಿ ಶೆಫಿನ್ ಆಗಿದ್ದ.
ಫೆಯ್ತ್ ಮ್ಯಾಟರ್ಸ್ ಸಮೀಕ್ಷೆ ಪ್ರಕಾರ, ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 86ರಷ್ಟು ಮಂದಿ ಮತಾಂತರಗೊಂಡಿದ್ದು, ಗೆಳೆಯರ ಅಥವಾ ನಿಕಟ ಸಂಬಂಧಿಕರ ಮೂಲಕವಾಗಿದೆ. ಶೇ. 96ರಷ್ಟು ಮಂದಿ ಪುಸ್ತಕ ಓದಿ, ಶೇ. 64 ಮಂದಿ ಇಂಟರ್‍ನೆಟ್ ಸಹಾಯದಿಂದ. ಮಸೀದಿಯ ಕ್ಲಾಸುಗಳಿಗೂ ಹೋಗದೆ ಮತಾಂತರಗೊಂಡವರು ಶೇ. 52ರಷ್ಟು ಮಂದಿ ಮಾತ್ರ. ಮತಾಂತರಗೊಳ್ಳಲು ಬಯಸುವ ಜನರು ವಿವಿಧ ಮಾರ್ಗಗಳನ್ನು ಅವಲಂಭಿಸಿದ್ದನ್ನು ಈ ಲೆಕ್ಕವು ತೋರಿಸಿಕೊಡುತ್ತದೆ.
ಹಾದಿಯಾಳ ವಿಷಯದಲ್ಲಿ ಇದು ಸತ್ಯವಾಗಿದೆ. ಇಸ್ಲಾಂ ಸ್ವೀಕಾರಕ್ಕೆ ಜಸೀನಾ ಎನ್ನುವ ಓರ್ವಳು ಮುಸ್ಲಿಂ ಹುಡುಗಿ ಪ್ರೇರಣೆಯಾಗಿದ್ದಳು. ಜಸೀನಾಳೊಂದಿಗೆ ಕಾಲೇಜು ಜೀವನ ಹಾದಿಯಾಳದ್ದಾಗಿತ್ತು. ಸ್ಕ್ರಾಲ್ ಇನ್ ವರದಿ ಪ್ರಕಾರ ಜಸೀನಾಳ ತಂದೆ ಹಾದಿಯಾಳನ್ನು ಇಸ್ಲಾಂ ಸ್ವೀಕರಿಸದಿರುವಂತೆ ನಿರುತ್ತೇಜಿಸಿದ್ದರು. ಆದರೆ ಹಾದಿಯಾಳ ಹಠದ ಮುಂದೆ ಅವರು ಸೋಲಬೇಕಾಯಿತು. ಇಸ್ಲಾಮ್ ಸ್ವೀಕಾರಕ್ಕೆ ಎರಡು ಸರಕಾರಿ ಅಂಗೀಕೃತ ಸಂಸ್ಥೆಯಿದ್ದು ಅವುಗಳಲ್ಲಿ ಒಂದಾದ ತರ್ಬಿಯತ್ ಇಸ್ಲಾಮ್ ಸಭೆಗೆ ಅವಳನ್ನು ಅವರು ಕರೆದು ಕೊಂಡು ಹೋದರು.
ಸಮೀಕ್ಷೆಯಲ್ಲಿ ಭಾಗವಹಿಸಿದ ಮತಾಂತರಗೊಂಡವರ ಬಯಕೆಗೆ ಪ್ರೇರಕವಾಗಿ ವರ್ತಿಸಿದ ಕಾರಣಗಳತ್ತ ಫೆಯ್ತ್ ಮ್ಯಾಟರ್ಸ್ ಗಮನ ನೀಡಿಲ್ಲ. ಆದರೂ, ಇದು ಮಾಡಬೇಕು, ಇದು ಮಾಡಬಾರದೆಂದು ಕಟ್ಟುನಿಟ್ಟಾಗಿ ಆದೇಶಿಸುವ ಶೈಲಿಯು ಇಸ್ಲಾಮಿನತ್ತ ಅಕರ್ಷಿಸಿದೆ ಎನ್ನುವುದನ್ನು ಸೂಚಿಸುತ್ತಿದೆ. ಶೇ. 59ರಷ್ಟು ಮಂದಿ ಮತಾಂತರಕ್ಕಿಂತ ಮುಂಚಿನ ತಮ್ಮ ಜೀವನ ಶೈಲಿ, ಕೆಟ್ಟದ್ದು, ಪಾಪ ಕಾರ್ಯ, ಅತೀವ ಮದ್ಯಪಾನ, ಅನೈತಿಕತೆ ಇತ್ಯಾದಿಯನ್ನು ತಾವು ಮತಾಂತರಗೊಳ್ಳಲಿರುವ ಕಾರಣವನ್ನು ಸೂಚಿಸಿದ್ದಾರೆ. ಅನಿಯಂತ್ರಿತ ಬಳಕೆ ಸಂಸ್ಕೃತಿ ಬ್ರಿಟಿಷ್ ಸಂಸ್ಕೃತಿಯ ಕೆಟ್ಟ ಗುಣವೆಂದು ಅವರಲ್ಲಿ ಹೆಚ್ಚಿನವರು ಹೇಳಿದ್ದಾರೆ.
ಕ್ಯಾಂಬ್ರಿಡ್ಜ್ ಯುನಿವರ್ಸಿಟಿಯ ಸೆಂಟರ್ ಫಾರ್ ಇಸ್ಲಾಮಿಕ್ ಸ್ಟಡೀಸ್‍ನ ಸಂಸ್ಥಾಪಕ ನಿರ್ದೇಶಕ ಯಾಸಿರ್ ಸುಲೈಮಾನ್ ಬರೆಯುತ್ತಾರೆ, “ಮತಾಂತರಗೊಳ್ಳುವ ಮಹಿಳೆಯರನ್ನು ಕೇಳಲಾಗುತ್ತಿರುವ ಪ್ರಶ್ನೆ ಇದು ‘ಸ್ವಾತಂತ್ರ್ಯ/ಸಮಾನತೆಯನ್ನು ದಮನಿಸುವ ಒಂದು ಹಳೆಯ ಧರ್ಮವನ್ನು ಯಾಕೆ ಸ್ವೀಕರಿಸುತ್ತಿದ್ದಾಳೆ?’ ಆಧುನಿಕ ಜಗತ್ತಿನಲ್ಲಿ ಎದುರಿಸುತ್ತಿರುವ ತಾತ್ವಿಕ, ಅಸ್ತಿತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪಾರಾಗಲು ಬಹುಶಃ ಪಾಶ್ಚಾತ್ಯ ಮಹಿಳೆಯರು ಇಸ್ಲಾಮ್‍ನ್ನು ಸ್ವೀಕರಿಸುತ್ತಿದ್ದಾರೆ ಎನ್ನುವ ವಸ್ತು ಸ್ಥಿತಿಯನ್ನು ನಿರಾಕರಿಸಲಾಗುತ್ತಿದೆ.”
2013ರಲ್ಲಿ ಪ್ರಕಟವಾದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ನರೇಟಿವ್‍ಸ್ ಆಫ್ ಕನ್‍ವೆನ್ಶನ್ ಟು ಇಸ್ಲಾಂ ಇನ್ ಬ್ರಿಟನ್: ಪಿಮೇಲ್ ಪಸ್ರ್ಪೆಕ್ಟಿವ್ ಎನ್ನುವ ಆಧ್ಯಯನಕ್ಕಾಗಿ ಬರೆದ ಪೀಠಿಕೆಯಲ್ಲಿ ಸುಲೈಮಾನ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೂರು ವರ್ಷದ ಬಳಿಕ ಮತಾಂತರದ ಪುರುಷರಿಗೆ ಸಂಬಂಧಿಸಿದ ಒಂದು ವರದಿಯನ್ನು ವಿಶ್ವವಿದ್ಯಾನಿಲಯ ಪ್ರಕಟಿಸಿತ್ತು. ಆಧುನಿಕತೆಯ ಒತ್ತಡವನ್ನು ಎದುರಿಸಲಿಕ್ಕಾಗಿ ಬಿಳಿಯ ಮಧ್ಯಮ ವರ್ಗದಿಂದ ಇಸ್ಲಾಮ್ ಸ್ವೀಕರಿಸುತ್ತಿದ್ದಾರೆ ಎನ್ನುವ ಎರಡು ವರದಿಗಳು ಪ್ರಕಟವಾಗಿದ್ದವು.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವರದಿಗಳೊಂದಿಗಿರುವ ಪ್ರತಿಕ್ರಿಯೆಯಲ್ಲಿದ ಇಕಾನಮಿಸ್ಟ್ ಮ್ಯಾಗಸಿನ್ ಪತ್ರಿಕೆಯು “ಬಳಕೆ ಉತ್ಪನ್ನಗಳಿಂದ ಹಿಡಿದು ನೈತಿಕ ಮೌಲ್ಯಗಳವರೆಗೆ ಎಲ್ಲದರಲ್ಲಿಯೂ 21ನೆ ಶತಮಾನದಲ್ಲಿ ಪಾಶ್ಚಾತ್ಯ ಸಂಸ್ಕೃತಿ ವೈವಿಧ್ಯತೆ, ಆಯ್ಕೆಯನ್ನು, ಪರೀಕ್ಷೆಯನ್ನು ಎದುರಿಸುತ್ತಿದೆ. ಇಸ್ಲಾಮ್ ಸ್ವೀಕರಿಸುವ ಓರ್ವ ಪಾಶ್ಚಾತ್ಯ ವ್ಯಕ್ತಿ ಸಂಪೂರ್ಣ ವಿರುದ್ಧ ದಿಕ್ಕಿನ ನಡೆಯನ್ನು ಕೈ ಗೊಳ್ಳುತ್ತಾನೆ. ಆಹಾರ, ಬಟ್ಟೆ, ಸಾಮಾಜಿಕ ವರ್ತನೆ ಎಂಬಿವುಗಳಲ್ಲಿ ಕಟ್ಟುನಿಟ್ಟಿನ ನಿಯಮಗಳು ಒಂದು ವಿಭಾಗವನ್ನು ಹೆಚ್ಚು ಆಕರ್ಷಿಸುತ್ತಿದೆ” ಎಂದು ಹೇಳಿದೆ.
ಇಸ್ಲಾಮಿನ ಕಟ್ಟು ನಿಟ್ಟು ಹಾದಿಯಾಳ ಮತಾಂತರಕ್ಕೆ ಪ್ರಚೋದನೆಯಾಗಿರಬಹುದೇ? ಅವಳ ಆಯ್ಕೆಯಲ್ಲಿ ಅದು ಒಂದು ಘಟಕವಾಗಿದೆ ಎಂದು ಅನಿಸುತ್ತದೆ. ಕೇರಳ ಹೈಕೋರ್ಟಿನಲ್ಲಿ ಹಾದಿಯಾ ಸಲ್ಲಿಸಿದ ಅಫಿದಾವಿತ್‍ನಲ್ಲಿ ಜಸೀನಾ, ಅವಳ ಸಹೋದರಿ ಫಸೀನಾರ ಉತ್ತಮ ಸ್ವಭಾವವನ್ನು ನೋಡಿ ಮತ್ತು ಸರಿಯಾದ ಸಮಯಕ್ಕೆ ನಿರ್ವಹಿಸುವ ನಮಾಝ್‍ಗೆ ಆಕರ್ಷಿತಳಾಗಿ ಮತಾಂತರವಾದೆ ಎಂದು ತಿಳಿಸಿದ್ದಾಳೆ.

Check Also

`ನಾಲ್ವರು ಖಲೀಫರೇ ನನ್ನ ಆದರ್ಶ’: ಅಗಲಿದ ಬಿ.ಎ. ಮೊಹಿದೀನ್ ಸ್ಮರಣೆ

ಮಾಜಿ ಉನ್ನತ ಶಿಕ್ಷಣ ಸಚಿವ, ಸಜ್ಜನ ರಾಜಕಾರಣಿ, ಮುಸ್ಲಿಮ್ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಧ್ವನಿಯಾಗಿದ್ದ ಬಿ.ಎ. ಮೊಹಿದೀನ್ (81) …

Leave a Reply

Your email address will not be published. Required fields are marked *