ಹಾದಿಯಾಳನ್ನು ದಿಗ್ಬಂಧನದಲ್ಲಿಡುವಂತಿಲ್ಲ : ಸುಪ್ರೀಂ ಕೋರ್ಟು


ಹೊಸದಿಲ್ಲಿ, ಅ.11: ಹಾದಿಯಾ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟು ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಹಾದಿಯಾಳನ್ನು ಕಾನೂನು ಬದ್ಧವಾಗಿ ಕೋರ್ಟಿಗೆ ಹಾಜರು ಪಡಿಸಬೇಕು, ಕಾನೂನು ಜವಾಬ್ದಾರಿಯನ್ನು ಕೈ ಬಿಡುವಂತಿಲ್ಲ ಎಂದು ಸುಪ್ರೀಂಕೋರ್ಟು ಹೇಳಿದೆ. ಅಂಗವಿಕಲೆಯಲ್ಲದ ಅಂಗಾಗ ಊನವಾಗದ ಪುತ್ರಿಯನ್ನು ತಂದೆಯೊಬ್ಬ ದಿಗ್ಬಂಧನದಲ್ಲಿಡುವಂತಿಲ್ಲ ಎಂದು ಕೋರ್ಟು ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ ಕಾನೂನು ಮುಖ್ಯ ವಿಷಯವಾಗಿದ್ದು, ಇಬ್ಬರು ಪ್ರಾಪ್ತ ವಯಸ್ಕರು ಪರಸ್ಪರ ಮದುವೆಯಾದರೆ, ಅವರಲ್ಲಿ ದೂರುಗಳಿಲ್ಲದಿದ್ದರೆ ಯಾವ ಕೋರ್ಟಿಗೂ ಏನೂ ಮಾಡಲಿಕ್ಕೆ ಆಗುವುದಿಲ್ಲ. ಕೋರ್ಟಿಗೆ ಮದುವೆ ರದ್ದು ಪಡಿಸುವ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ತಿಳಿಸಿದ್ದಾರೆ.
ಹಾದಿಯಾ ಹೋಗಲು ಬಯಸುವಲ್ಲಿಗೆ ಹೋಗಲು ಬಿಡಬೇಕೆಂದು ತಾನು ಭಾವಿಸುತ್ತೇನೆಂದು ಮುಖ್ಯ ನ್ಯಾಯಾಧೀಶರು ಹೇಳಿದರು. ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಆಕೆಯ ಹೇಳಿಕೆಯನ್ನು ಆಲಿಸಲು ಸುಪ್ರೀಂ ಕೋರ್ಟು ಬಯಸುತ್ತಿದೆ. ಆಕೆ ಸ್ವ ಇಚ್ಛೆಯಿಂದ ಅರ್ಜಿದಾರನನ್ನು ಮದುವೆಯಾಗಿದ್ದಾರೆ. ಪತಿಯ ವಿರುದ್ಧ ಯಾವುದಾದರೂ ರೀತಿಯ ದೂರನ್ನಾಗಲಿ ರಿಟ್ ಕೇಸನ್ನಾಗಲಿ ಹಾದಿಯಾ ದಾಖಲಿಸಿಲ್ಲ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.
ಹೈ ಕೋರ್ಟಿನಲ್ಲಿ ಅರ್ಜಿದಾರನನ್ನು ಮದುವೆಯಾಗುವುದಾಗಿ ಹಾದಿಯಾ ಹೇಳಿದ್ದಾಳೆ. ಆಕೆಯ ಒಪ್ಪಿಗೆ ಪಡೆಯದೇ ಹೈಕೋರ್ಟಿಗೆ ಮದುವೆ ರದ್ದು ಮಾಡುವ
ಅಧಿಕಾರವಿದೆಯೇ ಎಂದು ನಮಗೆ ತಿಳಿಯಬೇಕಿದೆ ಎಂದು ಚೀಫ್ ಜಸ್ಟಿಸ್ ದೀಪಕ್ ಮಿಶ್ರ ಹೇಳಿದಾಗ ಆ ವರೆಗೂ ಭಿನ್ನ ನಿಲುವನ್ನು ವ್ಯಕ್ತಪಡಿಸಿದ್ದ ಜಸ್ಟಿಸ್ ಚಂದ್ರ ಚೂಡರು ಕೂಡಾ ಸಹಮತ ವ್ಯಕ್ತಪಡಿಸಿದರು. ಹೇಗೆ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಒಂದು ಮದುವೆಯನ್ನು ರದ್ದು ಮಾಡಲು ಸಾಧ್ಯ ಎಂದು ಜಸ್ಟಿಸ್ ಚಂದ್ರ ಚೂಡರು ಕೂಡಾ ಪ್ರಶ್ನಿಸಿದ್ದಾರೆ.

Check Also

ಫಿಫಾ ವಿಶ್ವಕಪ್ ಪಂದ್ಯಾವಳಿ ಗಳಿಕೆಯನ್ನು ಮಸೀದಿ ನಿರ್ಮಾಣಕ್ಕೆ ದಾನ ಮಾಡಲಿರುವ ಫ್ರಾನ್ಸ್ ತಂಡದ ಉಸ್ಮಾನ್ ದೆಂಬೆಲ್

ಪ್ಯಾರಿಸ್, ಜು.20: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಗೆದ್ದ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಉಸ್ಮಾನ್ ದೆಂಬೆಲ್ ಪಂದ್ಯಾವಳಿಯ ತಮ್ಮ …

Leave a Reply

Your email address will not be published. Required fields are marked *