ಸವರ್ಣೀಯರಿಂದ ಗಾಯಕನ ಕೊಲೆ: ಮುಸ್ಲಿಮರಿಗೆ ಊರಿಗೆ ಮರಳಲು ಹೆದರಿಕೆ


ಜೈಪುರ, ಅ.13: ರಾಜಸ್ಥಾನದ ಮುಸ್ಲಿಮ್ ಜನಪದ ಗಾಯಕನ ಕೊಲೆಯ ನಂತರ ಹೆದರಿ ಊರು ತೊರೆದು ಹೋದ 200 ಮಂದಿ ಮುಸ್ಲಿಮರು ಊರಿಗೆ ಮರಳು ಹೆದರುತ್ತಿದ್ದಾರೆಂದು ವರದಿಯಾಗಿದೆ. ಮನೆಗೆ ಮರಳಿ ಬಂದರೆ ಪುನಃ ತಮ್ಮ ಮೇಲೆ ದೌರ್ಜನ್ಯ ಆಗಬಹುದೆಂದು ಮುಸ್ಲಿಂ ಕುಟುಂಬಗಳು ಹೆದರುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟಂಬರ್ 27ಕ್ಕೆ ಜೈ ಸಲ್ಮೇರನ ಲಂಗಾ ಮಂಗನಿಯರ್ ಸಮುದಾಯದ ಅಹ್ಮದ್ ಖಾನ್ ಕೊಲೆಯಾಗಿದ್ದರು. ದೇವಸ್ಥಾನಗಳಲ್ಲಿ ಹಿಂದೂ ಕೀರ್ತನೆ- ಭಕ್ತಿ ಗೀತೆ ಹಾಡುವ ವ್ಯಕ್ತಿಯಾಗಿದ್ದ ಅವರನ್ನು ಹಿಂದೂ ಭಕ್ತಿ ಗೀತೆ ಹಾಡುವಾಗ ತಪ್ಪಾಗಿ ಹಾಡಿದ್ದಾರೆಂದು ಆರೋಪಿಸಿ ಸವರ್ಣೀಯರು ಕೊಲೆ ಮಾಡಿದ್ದರು. ಘಟನೆಯಲ್ಲಿ ರಮೇಶ್ ಸುತಾರ್ ಎನ್ನುವ ಹಿಂದೂ ಪುರೋಹಿತನ್ನು ಪೊಲೀಸರು ಬಂಧಿಸಿದ್ದರು.
ಗಲಭೆ ವ್ಯಾಪಕಗೊಂಡದ್ದರಿಂದ ಪ್ರದೇಶದಲ್ಲಿ ಅರೆಸೇನಾ ತುಕಡಿಯನ್ನು ನೇಮಕಗೊಳಿಸಲಾಗಿತ್ತು. ತಮ್ಮ ಪ್ರಾಣಕ್ಕೆ ಅಲ್ಲಿ ಅಪಾಯವಿದೆ. ಅಲ್ಲಿಗೆ ಮರಳಲು ಹೆದರಿಕೆಯಾಗುತ್ತಿದೆ ಎಂದು ಅಹ್ಮದ್‍ರ ಸಹೋದರ ಚುಗಖಾನ್ ಹೇಳಿದರು.

Check Also

ಫಿಫಾ ವಿಶ್ವಕಪ್ ಪಂದ್ಯಾವಳಿ ಗಳಿಕೆಯನ್ನು ಮಸೀದಿ ನಿರ್ಮಾಣಕ್ಕೆ ದಾನ ಮಾಡಲಿರುವ ಫ್ರಾನ್ಸ್ ತಂಡದ ಉಸ್ಮಾನ್ ದೆಂಬೆಲ್

ಪ್ಯಾರಿಸ್, ಜು.20: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಗೆದ್ದ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಉಸ್ಮಾನ್ ದೆಂಬೆಲ್ ಪಂದ್ಯಾವಳಿಯ ತಮ್ಮ …

Leave a Reply

Your email address will not be published. Required fields are marked *