ವೈಮನಸ್ಸು ಮತ್ತು ದ್ವೇಷದಿಂದ ಹೊರ ಬಂದು ಚಿಂತಿಸೋಣ…

ಡಿಸೆಂಬರ್ 6 ಅಂಬೇಡ್ಕರ್ ಪುಣ್ಯತಿಥಿ. ಆ ದಿನವನ್ನು ಒಂದು ಮಸೀದಿ ಮಂದಿರಕ್ಕಿಂತ ನೋಡುವ ಬದಲು ಅದು ಸಂವಿದಾನ ಶಿಲ್ಪಿ ರೂಪಿಸಿದ ಈ ದೇಶದ ನ್ಯಾಯ ವ್ಯವಸ್ಥೆ ಮತ್ತು ಸಂವಿಧಾನದ ಮೂಲಕ ಬಗೆ ಹರಿಸಬೇಕಾದ ವಿಷಯವಾಗಿದೆ. ಅದನ್ನು ನಮ್ಮ ಹಿಂದೂ ಮುಸ್ಲಿಂ ಹಿರಿಯರು ಕಾನೂನಿನ ಮೂಲಕ ಮಾಡುತ್ತಿದ್ದಾರೆ.
ಮಂದಿರವಾಗಲಿ ಮಸೀದಿಯಾಗಲಿ ಅದರ ಹೆಸರಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ನಾಶ ಪಡಿಸಿ ಇನ್ನಷ್ಟು ಭಾರತದ ಮಕ್ಕಳ ರಕ್ತ ಹರಿಯುವುದು ಎಷ್ಟು ಸರಿ?
ಇನ್ನು ಭಾರತ ಹಿಂದೂ ಮುಸ್ಲಿಮರಿಗೆ ಕ್ರೈಸ್ತರಿಗೆ ಮತ್ತು ಸರ್ವ ಧರ್ಮದವರಿಗೆ ಸಂವಿದಾನದ ಮೂಲಕ ಆರಾಧನೆ ಮಾಡಲು ಅನುಮತಿ ನೀಡಿದೆ. ಆದ್ದರಿಂದ ಇಡೀ ನಮ್ಮ ಭೂಮಿ ನಮಗೆ ದೇವನನ್ನು ಪೂಜಿಸಲು (ಎಲ್ಲ ಧರ್ಮೀಯರಿಗೆ) ಯೋಗ್ಯವಾಗಿದೆ. ಈ ದೇಶದ ದೊಡ್ಡ ಉದ್ದುದ್ದದ ಪರ್ವತಗಳು ದೇವಾಲಯದ ಧಾರ್ಮಿಕ ಸ್ಥಂಭದಂತೆ ಮತ್ತು ಚರ್ಚ್ ನ ಧಾರ್ಮಿಕ ಸ್ಥಂಭಗಳಂತೆ, ಮಸೀದಿಯ ಮಿನಾರದಂತೆ ಕಾಣುತ್ತಿದೆ. ಇಲ್ಲಿನ ನದಿಗಳು ತೀರ್ಥ ಸ್ಥಾನ ಮಾಡಲು, ವುಜೂ ಮಾಡಲು, ಬ್ಯಾಪ್ಟಿಸಮ್(ಕ್ರೈಸ್ತ ಸ್ತಾನ) ಮಾಡಲು ಪೂರಕವಾಗಿದೆ.
ನಾವು ಪರಸ್ಪರ ವೈಮನಸ್ಸು ಮತ್ತು ದ್ವೇಷದಿಂದ ಹೊರ ಬಂದು ಪ್ರಕೃತಿ ತೋರಿಸಿ ಕೊಟ್ಟಿರುವ ಸೌಹಾರ್ದತೆಯತ್ತ ಮುಂದೆ ಸಾಗಿ ಮುಂದಿನ ಪೀಳಿಗೆಗೆ ಶಾಂತಿ ಪ್ರಿಯ, ಸುಪರ್ ಪವರ್, ಒಗ್ಗಟ್ಟಿನ ದೇಶ ಕೊಡುಗೆ ನೀಡೋಣ.
ಇಂದು ಬಾಬರಿ, ನಾಳೆ ಚರ್ಚು, ನಾಳೆ ಇನ್ನೊಂದು ಹೀಗೆ ಮುಂದುವರಿಯಬಹುದು ಎಂಬ ಸಂಶಯ ಭಯ ಅಲ್ಪ ಸಂಖ್ಯಾತರಲ್ಲಿ ಇದೆ. ಆ ಭಯ ಕಟ್ಟಡದ್ದಲ್ಲ. ಅದರ ಹೆಸರಲ್ಲಿ ಇನ್ನಷ್ಟು ಸರ್ವ ಧರ್ಮೀಯ ಮಕ್ಕಳು ಅನಾಥವಾಗುವುದು, ಭಾರತೀಯ ಸರ್ವ ಧರ್ಮೀಯ ಮಹಿಳೆಯರು ವಿದವೆಯರಾಗುವ ಭಯ ಎಲ್ಲರಲ್ಲೂ ಇದೆ. ಭಾರತವನ್ನು ಪ್ರೀತಿಸುವುದು ಎಂದರೆ ದೇಶದ ಒಗ್ಗಟ್ಟನ್ನು ಕಾಯುವುದು. ಸಂವಿಧಾನ ಕಾನೂನು ಅಂಬೇಡ್ಕರನ್ನು ನಾವು ಗೌರವಿಸಬೇಕಾಗಿರುವುದು ಇಂದಿನ ಬೇಡಿಕೆಯಾಗಿದೆ.
ಅದೇ ಸಂದರ್ಭದಲ್ಲಿ ಸಂವಿಧಾನವನ್ನು ಪಾಲಿಸೋ ಪ್ರಜಾಪ್ರಭುತ್ವದಲ್ಲಿ ಫ್ಯಾಸಿಸ್ಟ್ ಸಂಸ್ಕೃತಿ ವಿಂಜೃಂಬಿಸಿದ ಆ ದಿನವನ್ನು ಮರೆಯಲು ಸಾಧ್ಯವಿಲ್ಲ ಎನ್ನುವ ಕೂಗು ವ್ಯಾಪಕವಾಗುತ್ತಿದೆ. ಅಧಿಕಾರಕ್ಕಾಗಿ ಕೋಮು ದೃವೀಕರಣಗೊಳಿಸಿ ಮಸೀದಿಯನ್ನು ಕೆಡವಿ ಕುಣಿದು ಕುಪ್ಪಳಿಸಿದ ಪ್ರಜಾ ಪ್ರಭುತ್ವವನ್ನು ಅಣಕ ಮಾಡಿದವರಿಗೆ ಕಾನೂನಿನ ಮೂಲಕ ಶಿಕ್ಷೆ ಆಗಲೇಬೇಕು.
ಮಂದಿರವೋ, ಮಸೀದಿಯೋ ಅಥವಾ ಆಸ್ಪತ್ರೆಯೋ ಮತ್ತೆ ಹೂದೋಟವೋ ಒಟ್ಟಾಗಿ ಆರಂಭದಿಂದ ನಿರ್ಧರಿಸಬೇಕಾಗಿದೆ.

@ ಅಬೂ ಕುತುಬ್

Check Also

ನಾಡಿನ ಗಲಭೆಗಳು ಮತ್ತು ಧಾರ್ಮಿಕ ವಿದ್ವಾಂಸರು

⏺ ನಮ್ಮ ಸಮಾಜದಲ್ಲಿ ಅತ್ಯಧಿಕ ಹಿಂಸೆ-ಗಲಭೆ-ಕೊಲೆಪಾತಕಗಳು ನಡೆಯುತ್ತಿರುವುದು ಧರ್ಮ ಮತ್ತು ದೇವರ ಹೆಸರಲ್ಲಾಗಿದೆ. ಓಟಿಗಾಗಿ ಜನರ ಭಾವನೆಗಳನ್ನು ಕೆರಳಿಸಿ ಮೆಟ್ಟಿಲುಗಳನ್ನಾಗಿಸಿದರೆ, …

Leave a Reply

Your email address will not be published. Required fields are marked *