ರೋಹಿಂಗ್ಯನ್ ಮುಸ್ಲಿಮರ ಮರು ವಸತಿಗಾಗಿ ಮ್ಯಾನ್ಮಾರ್‍ಗೆ ಜಪಾನ್‍ನಿಂದ 3 ಮಿಲಿಯನ್ ಡಾಲರ್ ನೆರವು

ಬ್ಯಾಂಕಾಕ್, ಜ.13: ರಖೇನ್‍ನಿಂದ ಜನಾಂಗೀಯ ನಿರ್ಮೂಲನಕ್ಕೆ ಹೆದರಿ ಪಲಾಯನ ಮಾಡಿದ ರೋಹಿಂಗ್ಯನ್ನರನ್ನು ಮರಳಿ ಕರೆ ತರುವುದಕ್ಕಾಗಿ ಜಪಾನ್ ಮ್ಯಾನ್ಮಾರ್ ಸರಕಾರಕ್ಕೆ ಮೂರು ಮಿಲಿಯನ್ ಡಾಲರ್ ಸಹಾಯ ನೀಡಿದೆ. ಜಪಾನ್ ವಿದೇಶ ಸಚಿವ ತಾರೊಕೊನೊ, ಮ್ಯಾನ್ಮಾರ್ ಸ್ಟೇಟ್ ಕೌನ್ಸಿಲರ್, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್‍ಸಾನ್ ಸೂಕಿಗೆ ಈ ಬೃಹತ್ ಮೊತ್ತವನ್ನು ಹಸ್ತಾಂತರಿಸಿದ್ದಾರೆ.

ಜಪಾನ್ ವಿದೇಶ ಸಚಿವ ಮ್ಯಾನ್ಮಾರ್ ಸಂದರ್ಶನದ ವೇಳೆ ರೋಹಿಂಗ್ಯನ್ ನಿರಾಶ್ರಿತರ ವಾಪಸಾತಿ ಪ್ರಕ್ರಿಯೆಗೆ ಮೂರು ಮಿಲಿಯನ್ ಸಹಾಯವನ್ನು ಅನುಮತಿಸಿದೆ.
3 ದಿವಸದ ಸಂದರ್ಶನಕ್ಕಾಗಿ ತಾರೊ ಮ್ಯಾನ್ಮಾರ್‍ಗೆ ಬಂದಿದ್ದರು. ಗಲಭೆ ತೀವ್ರಗೊಂಡಿದ್ದ ರಖೇನ್ ರಾಜ್ಯವನ್ನು ಅವರು ಸಂದರ್ಶಿಸಿದ್ದರು. ಬುದ್ಧ ತೀವ್ರವಾದಿಗಳು ಮತ್ತು ಮ್ಯಾನ್ಮಾರ್ ಸೇನೆಯ ಹಿಂಸೆಯಿಂದಾಗಿ 6.5 ಲಕ್ಷ ರೋಹಿಂಗ್ಯನ್ ಮುಸ್ಲಿಮರನ್ನು ರಖೇನ್‍ನಿಂದ ಹೊರದಬ್ಬಲಾಗಿದೆ.

ನೆರೆ ದೇಶವಾದ ಬಾಂಗ್ಲಾ ದೇಶಕ್ಕೆ ಹೆಚ್ಚಿನ ರೋಹಿಂಗ್ಯನ್ನರು ಪಲಾಯನ ಮಾಡಿದ್ದರು. ಮಾನವ ಹಕ್ಕು ಸಂಘಟನೆಗಳು, ಮಾಧ್ಯಮಗಳು ಗಲಭೆ ಪೀಡಿತ ಪ್ರದೇಶ ಸಂದರ್ಶಿಸದಂತೆ ಮ್ಯಾನ್ಮಾರ್ ಸೈನ್ಯ ಭಾರೀ ನಿಯಂತ್ರಣ ವಿಧಿಸಿತ್ತು. ಆದ್ದರಿಂದ ಅಲ್ಲಿನ ಕ್ರೌರ್ಯಗಳು ಹೊರ ಜಗತ್ತಿಗೆ ಬಹಳ ತಡವಾಗಿ ಬಹಿರಂಗವಾಗಿತ್ತು.

ರೋಹಿಂಗ್ಯನ್ ನಿರಾಶ್ರಿತರ ವಾಪಾಸಾತಿಗೆ ಕಳೆದ ನವೆಂಬರ್ 23ಕ್ಕೆ ಬಾಂಗಾ ್ಲದೇಶ ಮತ್ತು ಮ್ಯಾನ್ಮಾರ್ ನಡುವೆ ಒಪ್ಪಂದ ನಡೆದಿದೆ. ಜನವರಿ 23 ರಿಂದ ಇದಕ್ಕಾಗಿ ಅಗತ್ಯ ಕ್ರಮಗಳು ಆರಂಭಿಸಲಾಗಿದೆ ಎಂದು ಮ್ಯಾನ್ಮಾರ್ ತಿಳಿಸಿದೆ. ಆದರೆ, ಎಷ್ಟು ಮಂದಿ ಮರಳಿ ಮ್ಯಾನ್ಮಾರ್‍ಗೆ ಕರೆ ತರಲಾಗುವುದು ಎಂದು ಅದು ಸ್ಪಷ್ಟವಾಗಿ ತಿಳಿಸಿಲ್ಲ.

Check Also

ಆಗ್ರದ ಈ ಮುಸ್ಲಿಮ್ ಹುಡುಗಿ ನಾಝಿಯಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

ಹೊಸದಿಲ್ಲಿ, ಜ.20: ಜೂಜು ಮಟ್ಕಾ ದಂದೆಯನ್ನು ಮಟ್ಟ ಹಾಕಲು ಉತ್ತರ ಪ್ರದೇಶ ಪೊಲೀಸರಿಗೆ ಸಹಾಯ ಮಾಡಿದ 18 ವರ್ಷದ ಮುಸ್ಲಿಂ …

Leave a Reply

Your email address will not be published. Required fields are marked *