ರೋಹಿಂಗ್ಯನ್ ಕ್ಯಾಂಪ್‍ಗಳಲ್ಲಿ ವಿಶ್ವ ಸಂಸ್ಥೆಯ ಕಾಲರಾ ನಿರ್ಮೂಲನ ಯಜ್ಞ


ಢಾಕ, ಅ.12: ಬಾಂಗ್ಲಾ ದೇಶದಲ್ಲಿ ನಿರಾಶ್ರಿತರಾಗಿರುವ ರೋಹಿಂಗ್ಯನ್ ಮುಸ್ಲಿಮರ ವಿರುದ್ಧ ಕಾಲರಾ ನಿರ್ಮೂಲನ ಯಜ್ಞವನ್ನು ವಿಶ್ವ ಸಂಸ್ಥೆ ಹಮ್ಮಿಕೊಂಡಿದ್ದು, ಲಕ್ಷಾಂತರ ಮಂದಿ ವಾಸಿಸುವ ಕ್ಯಾಂಪ್‍ಗಳಲ್ಲಿ ಕಾಲರಾ ವಿರುದ್ಧ ವ್ಯಾಕ್ಸಿನ್ ನೀಡಲಾಗುತ್ತಿದೆ. ತಾತ್ಕಾಲಿಕವಾಗಿ ನಿರ್ಮಿಸಲಾದ ಹೆಲ್ತ್ ಸೆಂಟರ್‍ಗಳ ಮುಂದೆ ಬಿಸಿಲಿನಲ್ಲಿ ಸಾವಿರಾರು ಮಕ್ಕಳು, ಮಹಿಳೆಯರು, ಪುರುಷರು ಸಾಲಾಗಿ ನಿಂತು ಕಾಲರಾ ನಿರೋಧಕ ಮದ್ದು ಹಾಕಿಸಿ ಕೊಂಡಿದ್ದಾರೆ.
ಬಾಯಿಗೆ ಸುರಿಯುವ ದ್ರವದ ರೂಪದಲ್ಲಿ ವ್ಯಾಕ್ಸಿನ್ ನೀಡಲಾಗಿದೆ. ಬಾಂಗ್ಲಾದೇಶ ಸರಕಾರದೊಂದಿಗೆ ಕೈ ಜೋಡಿಸಿ ವಿಶ್ವ ಸಂಸ್ಥೆ ಇದನ್ನು ಜಾರಿಗೆ ತಂದಿದೆ. ಮುಂದಿನ ವಾರಗಳಲ್ಲಿ ಜಾಗತಿಕ ಆರೋಗ್ಯ ಸಂಘಟನೆಯ ಕಾರ್ಯಕರ್ತರು ಭೇಟಿ ನೀಡಿ ಆರೂವರೆ ಲಕ್ಷ ರೋಹಿಂಗ್ಯನ್ನರಿಗೆ ವ್ಯಾಕ್ಸಿನ್ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಮಲಿನ ನೀರು ಲಕ್ಷಾಂತರ ಮಂದಿಗೆ ಕುಡಿಯಲು ದೊರಕುತ್ತಿದೆ. ಇದು ಕಾಲರಾ ಹರಡಲು ಮುಖ್ಯ ಕಾರಣವಾಗಿದೆ. ಬಡ ರಾಷ್ಟ್ರವಾದ ಬಾಂಗ್ಲಾ ದೇಶಕ್ಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ನಿರಾಶ್ರಿತರು ಬಾಂಗ್ಲಾ ದೇಶಕ್ಕೆ ಹರಿದು ಬಂದಿದ್ದಾರೆ. ಕಳೆದ ವಾರಗಳಲ್ಲಿ ರೋಹಿಂಗ್ಯದಿಂದ ಬರುವವರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ಮತ್ತೆ ಅವರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಸೋಮವಾರ ಹತ್ತು ಸಾವಿರ ನಿರಾಶ್ರಿತರು ತಲುಪಿದ್ದಾರೆಂದು ಲೆಕ್ಕ ಹಾಕಲಾಗಿದೆ.

Check Also

ಫಿಫಾ ವಿಶ್ವಕಪ್ ಪಂದ್ಯಾವಳಿ ಗಳಿಕೆಯನ್ನು ಮಸೀದಿ ನಿರ್ಮಾಣಕ್ಕೆ ದಾನ ಮಾಡಲಿರುವ ಫ್ರಾನ್ಸ್ ತಂಡದ ಉಸ್ಮಾನ್ ದೆಂಬೆಲ್

ಪ್ಯಾರಿಸ್, ಜು.20: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಗೆದ್ದ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಉಸ್ಮಾನ್ ದೆಂಬೆಲ್ ಪಂದ್ಯಾವಳಿಯ ತಮ್ಮ …

Leave a Reply

Your email address will not be published. Required fields are marked *