ರಾಮ ಮಂದಿರ ನಿರ್ಮಾಣ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವಾಗ ಭಾಗವತ್‍ರು ಯಾಕೇ ಮುಖ್ಯ ನ್ಯಾಯಾಧೀಶರಾಗುತ್ತಿದ್ದಾರೆ: ಉವೈಸಿ


ಹೈದರಾಬಾದ್, ಡಿ. 5: ಆಲ್ ಇಂಡಿಯಾ ಮಜ್ಲಿಸೆ ಮುತ್ತಹಿದಾ ಮುಸ್ಲಿಮೀನ್ ಮುಖ್ಯಸ್ಥ ಅಸದುದ್ದೀನ್ ಉವೈಸಿ ಆರೆಸ್ಸೆಸ್ ಪ್ರಮುಖ್ ಮೋಹನ್ ಭಾಗವತ್‍ರ ರಾಮ ಮಂದಿರ ನಿರ್ಮಾಣದ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ್ದು. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವಾಗ ಭಾಗವತ್ ರಾಮ ಮಂದಿರ ನಿರ್ಮಾಣದ ಮಾತಾಡುತ್ತಿದ್ದಾರೆ. ಅವರು ಮುಖ್ಯ ನ್ಯಾಯಾಧೀಶರೇ ಎಂದು ಪ್ರಶ್ನಿಸಿದ್ದಾರೆ.
ಉವೈಸಿ ಆರೆಸ್ಸೆಸ್ ಮತ್ತು ಬಿಜೆಪಿಯ ರಾಮ ಮಂದಿರ ನಿರ್ಮಾಣ ಹೇಳಿಕೆಯನ್ನು ಖಂಡಿಸಿದ್ದು, ಅವರು ಇದರಿಂದ ರಾಜಕೀಯ ಲಾಭವೆತ್ತಲು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆರೆಸ್ಸೆಸ್ ಬೆಂಕಿಯೊಂದಿಗೆ ಸರಸವಾಡುತ್ತಿದೆ. ಸುಪ್ರೀಮ್ ಕೋರ್ಟಿನಲ್ಲಿ ಪ್ರಕರಣವಿದೆ ಎಂದು ಅವರು ಪ್ರತಿಕ್ರಿಯಿಸಿದ್ದು, ಬಾಬರಿ ಮಸೀದಿ ಕುರಿತು ಡಿಸೆಂಬರ್ ಐದಕ್ಕೆ ಆಲಿಕೆಯು ನಡೆಯಲಿದೆ. ಆರೆಸ್ಸೆಸ್ ಬಿಜೆಪಿ ಭೀತಿಯ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದೆ. ಭಾಗವತ್‍ರ ಹೇಳಿಕೆ ದೇಶಕ್ಕಾಗಲಿ, ಸುಪ್ರೀಂ ಕೋರ್ಟಿಗಾಗಲಿ ಉತ್ತಮವಾಗಿಲ್ಲ ಎಂದರು.
ಈ ಹಿಂದೆ ರಾಮ ಮಂದಿರ ನಿರ್ಮಾಣದ ಕುರಿತು ಆರೆಸೆಸ್ಸಿನ ಸರಸಂಘ ಚಾಲಕರಾದ ಮೋಹನ್ ಭಾಗವತ್‍ರು ದೊಡ್ಡ ಹೇಳಿಕೆಯನ್ನು ನೀಡಿದರು. ಕರ್ನಾಟಕದ ಉಡುಪಿಯ ಧರ್ಮ ಸಂಸದ್‍ನಲ್ಲಿ ಮೋಹನ್ ಭಾಗವತ್ ರಾಮ ಜನ್ಮ ಭೂಮಿಯಲ್ಲಿ ಕೇವಲ ರಾಮ ಮಂದಿರ ಮಾತ್ರ ನಿರ್ಮಾಣವಾಗಲಿದೆ ಎಂದು ಹೇಳಿದ್ದರು.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *