ಮುಸ್ಲಿಮರ ಶಿಕ್ಷಣದ ಕುರಿತು ಚಿಂತಿಸುವುದು ನಮ್ಮ ಹೊಣೆಯಾಗಿದೆ. ಯಾರ ಸಲಹೆಯೂ ಬೇಕಾಗಿಲ್ಲ: ಮಮತಾ ಬ್ಯಾನರ್ಜಿ


ಕೊಲ್ಕತಾ, ಡಿ.7: ರಾಜ್ಯದ ಮುಖ್ಯ ಮಂತ್ರಿ ಎನ್ನುವ ನೆಲೆಯಲಿ ಅಲ್ಪ ಸಂಖ್ಯಾತರು ಮತ್ತು ಅವರ ಅಭಿವೃದ್ಧಿ, ಶಿಕ್ಷಣ, ಸಾಮಾಜಿಕ ಪ್ರಗತಿಯ ಕುರಿತು ಚಿಂತಿಸುವುದು ತನ್ನ ಜವಾಬ್ದಾರಿಕೆಯಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಹೇಳಿದ್ದಾರೆ. ಈ ಕುರಿತು ಕೇಂದ್ರದ ಅಥವಾ ಯಾವುದೇ ನಾಯಕರ ಉಪದೇಶ ತನಗೆ ಅಗತ್ಯವಿಲ್ಲ. ದೇಶದಲ್ಲಿ ಪ್ರತಿಯೊಂದು ವರ್ಗ ಮತ್ತು ಸಮುದಾಯಕ್ಕೆ ಸಂಬಂಧಿಸಿ ತಾನು ಸಮಾನವಾಗಿ ಚಿಂತಿಸುತ್ತಿದ್ದೇನೆ. ಬಂಗಾಳದಲ್ಲಿ ಶೇ.31ರಷ್ಟು ಅಲ್ಪಸಂಖ್ಯಾತರಿದ್ದಾರೆ. ಅವರನ್ನು ಕಡೆಗಣಿಸಲು ಸಾಧ್ಯವಿಲ್ಲ.
ಅವರು ಪಶ್ಚಿಮ ಬಂಗಾಳದ ಅಲ್ಪ ಸಂಖ್ಯಾತ ಮತ್ತು ವಿತ್ತೀಯ ನಿಗಮದ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು. ಈ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರದ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ್ದಾರೆ. ಕೇಂದ್ರದ ಯೋಜನೆಗಳಿಗೆ ಈ ವರೆಗೂ ಫಂಡ್ ಸಿಕ್ಕಿಲ್ಲ. ಅದಿಲ್ಲದೆಯೂ ಬಂಗಾಳದಲ್ಲಿ ಯೋಜನೆಗಳು ಮುಂದುವರಿಯುತ್ತಿದೆ ಎಂದು ಮಮತಾ ಹೇಳಿದರು.

Check Also

ಹರ್ಯಾಣ: ಮುಸ್ಲಿಮರು ಗಡ್ಡ ಬೆಳೆಸಬಾರದು, ನಮಾಝ್ ಮಾಡಬಾರದು- ಪಂಚಾಯತ್ ಆದೇಶ

ರೋಹಟಕ್, ಸೆ. 20: ಬಕ್ರೀನಂದು ಇಲ್ಲಿನ ಟಿಟೌಲಿ ಗ್ರಾಮದಲ್ಲಿ ಗೋ ಹತ್ಯೆಯಾಗಿದೆ ಎಂದು ಮುನಿಸಿಕೊಂಡಿರುವ ಪಂಚಾಯತ್ ಆದೇಶ ಜಾರಿ ಮಾಡಿದ್ದು …

Leave a Reply

Your email address will not be published. Required fields are marked *