ಮದ್ರಸಾದಲ್ಲಿ ಕಲಿತ ನಾನು ಭಯೋತ್ಪಾದಕನೇ?: ಮುಖ್ತಾರ್ ಅಬ್ಬಾಸ್ ನಕ್ವಿ

ಲಕ್ನೊ, ಜ.12: “ಮದ್ರಸದಲ್ಲಿ ಕಲಿತಿರುವ ನಾನು ಭಯೋತ್ಪಾದಕನೇ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಪ್ರಶ್ನಿಸಿದ್ದಾರೆ. ಮದ್ರಸಾಗಳಿಂದ ಭಯೋತ್ಪಾದಕ ಶಿಕ್ಷಣ ಸಿಗುತ್ತದೆ ಎಂದಿರುವ ಉತ್ತರ ಪ್ರದೆಶ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಸೀಂ ರಿಝ್ವಿಯವರ ಮಾತಿಗೆ ಪ್ರತಿಕ್ರಿಯಿಸುತ್ತಾ ಸಚಿವರು ಈ ಪ್ರಶ್ನೆಯನ್ನು ಎತ್ತಿದ್ದಾರೆ.

ವಸೀಂ ರಿಝ್ವಿ ಪ್ರಧಾನಿಗೆ ಮದ್ರಸಾ ಶಿಕ್ಷಣಗಳ ಕುರಿತು ಈ ರೀತಿ ಪತ್ರ ಬರೆದಿದ್ದರು. ಕೆಲವರು ಮದ್ರಸಾಗಳನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಇದರಲ್ಲಿ ನನಗೆ ನೋವಿದೆ ಎಂದು ನಕ್ವಿ ಹೇಳಿದ್ದಾರೆ.

ಕೆಲವು ಬುದ್ಧಿ ಸ್ಥಿಮಿತ ಇಲ್ಲದ ವ್ಯಕ್ತಿಗಳ ಅಸಂಬದ್ಧ ಮಾತಿಗಳಿವು. ಮದ್ರಸಾಗಳ ಬಗ್ಗೆ ಸುಮ್ಮನೆ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಇವು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
ಇದು ಸರಿಯಲ್ಲ ಎಂದು ನಕ್ವಿ ಹೇಳಿದರು. ದೇಶದ ಬೆಳವಣಿಗೆಯಲ್ಲಿ ಮದ್ರಸಾಗಳು ಪಾತ್ರ ನಿರ್ವಹಿಸಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿವೆ. ಕೆಲವು ಬೆರೆಳೆಣಿಕೆಯ ಪ್ರಕರಣಗಳನ್ನು ಬೆಟ್ಟು ಮಾಡಿ ಮದ್ರಸಾಗಳನ್ನು ಆಕ್ಷೇಪಿಸಲಾಗುತ್ತಿದೆ ಎಂದು ಅವರು ಹೇಳಿದರು.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *