ಮಗಳನ್ನು ಇಸ್ಲಾಮ್ ಸಂಪ್ರದಾಯದಂತೆ ಬೆಳೆಸಿ, ಮದುವೆ ಮಾಡಿಕೊಟ್ಟ ಹಿಂದೂ ತಂದೆ ತಾಯಿ

ಜನವರಿ 8 ರಂದು ಕೇರಳ ರಾಜ್ಯದ ತ್ರಿಶೂರ್ನ ಕಲಾರಿ ಪರಂಬು ಹಳ್ಳಿಯಲ್ಲಿರುವ ಹಿಂದೂ ತಂದೆಯ ಮಗಳ ವಿವಾಹ. ಅಕ್ಬರ್ ಎಂಬ ಯುವಕನನ್ನು ದತ್ತು ಮಗಳಾದ ಖದೀಜಾ ಮದುವೆ ಆಗಿದ್ದಾರೆ. ಇಷ್ಟು ದಿನ ಮಗಳಾಗಿ ಮನೆಯಲ್ಲಿ ಬೆಳೆದ ಖದೀಜಾ ಇನ್ನು ಗಂಡನ ಮನೆಗೆ ಹೋಗುವ ದುಃಖ ಅಳು ಅವರ ಕಣ್ಣಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಖದೀಜಾ 13 ವರ್ಷ ವಯಸ್ಸಿನವಳಾಗಿದ್ದಾಗ ಒಬ್ಬ ಧರ್ಮನಿಷ್ಠ ಹಿಂದೂ ತಂದೆ ಮದಾನನ್ ಆಕೆಯನ್ನು ದತ್ತು ತೆಗೆದು ಕೊಂಡಿದ್ದರು. ಯಾರೂ ಇಲ್ಲದ ಖದೀಜಾರನ್ನು ದತ್ತು ತೆಗೆದು ಮನೆಯ ಮಗಳಾಗಿ ಸ್ವೀಕರಿಸಲು ಮದಾನನ್ ಮತ್ತು ಅವರ ಹೆಂಡತಿ ಹಿಂದೆ ಮುಂದೆ ನೋಡಲಿಲ್ಲ. ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. ಅವರು ಮಗಳಿಗಾಗಿ ಆಸೆ ಪಡುತ್ತಿದ್ದರು. ಖದೀಜಾ ಆ ಮನೆಗೆ ಮಗಳಾಗಿ ಬಂದದ್ದು ಮಾತ್ರವಲ್ಲ ಆ ಸಹೋದರರಿಗೆ ನೆಚ್ಚಿನ ಸಹೋದರಿ ಕೂಡ ಆಗಿ ಬೆಳೆದಳು.

ಮದಾನನ್ ಮತ್ತು ಅವರ ಹೆಂಡತಿ ತಂಗಮಣಿ ಸ್ವಂತ ಮಗಳಂತೆ ಖದೀಜಾರನ್ನು ಬೆಳೆಸಿದರು, ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾ, ಅದೇ ಸಮಯದಲ್ಲಿ, ಅವರು ಖದೀಜಾಳನ್ನು ಧಾರ್ಮಿಕ ಮುಸ್ಲಿಂ ಆಗಿ ಬೆಳೆಸಿಕೊಂಡರು. ಪ್ರತಿದಿನ ಐದು ಕಡ್ಡಾಯ ನಮಾಜ್ ನಿರ್ವಹಿಸಲು ಮನೆಯಲ್ಲಿ ವಿಶೇಷ ಕೊನೆ ಕೊಟ್ಟರು. ಉಪವಾಸದ ಸಮಯದಲ್ಲಿ ಆಕೆಗೆ ಇಷ್ಟವಾದ ವಿಶೇಷ ಭೋಜನ, ಬೆಳಿಗ್ಗೆ ಸಹರಿ ಉಣ್ಣಲು ಬೇಕಾದ ಎಲ್ಲವನ್ನೂ ಕೊಡುತ್ತಿದ್ದರು. ಈದ್ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಿದ್ದರು.

ಮದುವೆ ಪ್ರಾಯವಾದಾಗ ಓರ್ವ ತಂದೆಯಾಗಿ ಮದುವೆಯ ಎಲ್ಲಾ ಖರ್ಚುಗಳನ್ನು ನೋಡಿದರು. ಇಸ್ಲಾಮೀ ರಿವಾಜಿನಂತೆ ಮದುವೆ ಮಾಡಲು ಸ್ಥಳೀಯ ಮಸೀದಿಯವರಿಂದ ಸಹಾಯ ಕೇಳಿದರು. ನಿಕಾಹ್ ವೇಳೆ ತಾನೂ ಹಾಜರಿದ್ದು ತನ್ನ ಇತರ ಹಿಂದೂ ಸಂಬಂಧಿಕರೂ ಪಾಲ್ಗೊಳ್ಳುವಂತೆ ಮಾಡಿದರು.

ಸ್ಥಳೀಯ ನಾಡ ಸಂಸ್ಕೃತಿಯಂತೆ ಮಗಳ ತಂದೆ ಆಕೆಯ ಮನೆಗೆ ಹೋಗಿ ವ್ಯವಸ್ಥೆಯೆಲ್ಲವನ್ನೂ ನೋಡಿ ಪರಿಶೀಲಿಸಬೇಕು. ಇವರೂ ಹಾಗೆಯೇ ಮಾಡಿದ್ದಾರೆ.

ಮದುವೆಯೆ ಬಳಿಕ ಏನೂ ಬದಲಾವಣೆ ಆಗುವುದಿಲ್ಲ. ಆಕೆ ನಮ್ಮ ಮನೆಯ ಮಗಳು. ಎಂದೆಂದಿಗೂ ನಮ್ಮ ಫೆವರಿಟ್ ಮಗಳು. ಆಕೆಯ ಸಹೋದರರು ಈಗ ಗಲ್ಫ್ ದೇಶಗಳಲ್ಲಿ ದುಡಿಯುತ್ತಿದ್ದಾರೆ.

ಇದೇ ರೀತಿಯ ಘಟನೆ ಕೆಲವು ಸಮಯದ ಹಿಂದೆ ಘಾಝಿಯಾಬಾದ್ ನಿಂದ ವರದಿಯಾಗಿದೆ. ಆದರೆ ಇಲ್ಲಿ ತಂದೆ ತಾಯಿ ಮುಸ್ಲಿಮ್ …..

ದತ್ತು ಪಡೆದ ಮಗಳನ್ನು, ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿಕೊಟ್ಟ ಮುಸ್ಲಿಂ ದಂಪತಿಗಳು

ಮುಸ್ಲಿಂ ಕುಟುಂಬವೊಂದು ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗಳೊಬ್ಬಳನ್ನು ದತ್ತು ಪಡೆದಿತ್ತು. ನಂತರ ಆ ಮಗಳಿಗೆ ಮದುವೆ ಮಾಡಿಸಿ ಕೊಟ್ಟರು. ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ‌ ಮಾಡಿಸಿಕೊಟ್ಟಿರುವುದು ಇಲ್ಲಿ ವಿಶೇಷ.

ಹೌದು, ಈ ಘಟನೆ ಘಾಝಿಯಾಬಾದ್ ನಲ್ಲಿ ಬಹಳ ವರ್ಷಗಳ ಹಿಂದೆ ನಡೆದಿದೆ.
55 ವರ್ಷದ ಫರ್ನಿಚರ್ ಅಂಗಡಿ ಮಾಲಕ ನದೀಮ್ ಅವರು ರಾಖಿ ಎನ್ನುವ ಅನಾಥೆ ಹಿಂದೂ ಮಗುವನ್ನು ದತ್ತು ಪಡೆದು ನಂತರ ಅವಳಿಗೆ ಅವಳ ಇಚ್ಛೆಯನುಸಾರ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿ ಕೊಡುವ ಮೂಲಕ ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನು ನೀಡಿದ್ದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪ್ರೇರಿತ ಕೋಮು ಘರ್ಷಣೆ ಅಲ್ಲಲ್ಲಿ ಕಂಡು ಬರುತ್ತಿದೆ.‌ ಈ ಸಂದರ್ಭದಲ್ಲಿ ಇಂತಹ ಘಟನೆಗಳು ಆಗಾಗ ಜನರಿಗೆ ನೆನಪಿಸಬೇಕಾಗಿದೆ. ಸಮಾಜದಲ್ಲಿ ಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಇಂತಹ ಸೌಹಾರ್ದತೆಯ ಘಟನೆಗಳು ಜನರ ಮುಂದಿಡುವ ಪ್ರಯತ್ನವನ್ನು ಎಲ್ಲರೂ ಮಾಡುತ್ತಿರಬೇಕು.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *