ಭಾರತದಲ್ಲಿ ಮುಸ್ಲಿಮ್ ಮಕ್ಕಳ ಜನನ ದರದಲ್ಲಿ ಭಾರೀ ಕುಸಿತ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ

ಹೊಸದಿಲ್ಲಿ, ಜ.13: ದೇಶದಲ್ಲಿ ಹೆಚ್ಚುತ್ತಿರುವ ಜನ ಸಂಖ್ಯೆಯ ಕುರಿತು ಹಲವು ಸಂಸ್ಥೆಗಳು ಸಮೀಕ್ಷೆ ನಡೆಸುತ್ತಿವೆ. ಇತ್ತೀಚೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2015-16)ಯಲ್ಲಿ ಹಿಂದೂಗಳಲ್ಲಿ ಮಕ್ಕಳ ಜನ ಸಂಖ್ಯೆ ಕುಸಿತವಾಗಿರುವುದು ಬಹಿರಂಗವಾಗಿತ್ತು. ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಮುಸ್ಲಿವiರಲ್ಲಿ ಕೂಡಾ ಹಿಂದಿನ ಜನನ ದರಕ್ಕಿಂತ ಕಡಿಮೆ ಮಕ್ಕಳ ಜನನ ದರ ದಾಖಲಾಗಿದೆ.

ಒಟ್ಟಾರೆ ಸಮೀಕ್ಷೆಯಲ್ಲಿ ಹಲವು ಧಾರ್ಮಿಕ ಸಮುದಾಯಗಳ ವಾರ್ಷಿಕ ಪ್ರಜನನ ದರ ಬಹಿರಂಗವಾಗಿದೆ. ಮತ್ತು ಕಳೆದ ಸಮೀಕ್ಷೆಗೆ (2004-05) ಈ ಸಲದ ಸಮೀಕ್ಷೆಗೆ ಹೋಲಿಸಿದರೆ ಈ ಬಾರಿ ಎಲ್ಲ ಧರ್ಮದವರಲ್ಲಿ ಪ್ರಜನನ ದರ ಕುಸಿದಿದೆ. ಹಿಂದೂಗಳ ಪ್ರಜನನ ದರ ಶೇ. 2.8 ಆಗಿತ್ತು. ಈಗ ಅದು ಶೇ. 20.1 ಕ್ಕಿಳಿದಿದೆ. ಅದೇ ವೇಳೇ ಮುಸ್ಲಿಮ್ ಸಮುದಾಯದ ಜನನ ದರವೂ ಕುಸಿದಿದೆ.

ಕಳೆದ ಸಮೀಕ್ಷೆಯಲ್ಲಿ ಮುಸ್ಲಿಮರ ಪ್ರಜನನ ದರ ಶೇ. 3. 4 ಇತ್ತು ಈಗ ಶೇ. 2.6ಕ್ಕೆ ಇಳಿದಿದೆ. ಅತಿ ಕಡಿಮೆ ಪ್ರಜನನ ದರವನ್ನು ಹೊಂದಿರುವ ಜೈನ ಧರ್ಮವಾಗಿದೆ ಅವರಲ್ಲಿ ಶೇ. 1.2 ಪ್ರಜನನ ದರವಿದೆ. ಸಮೀಕ್ಷೆಯ ಪ್ರಕಾರ ಸಿಕ್ಖರ ಜನನ ದರ 1.6 ಆಗಿದೆ. ಕಳೆದ ಬಾರಿಯ ಸಮೀಕ್ಷೆಯಲ್ಲಿ ಇದು ಶೇ. 1.95 ಆಗಿತ್ತು. ಬೌದ್ಧ ಧರ್ಮದಲ್ಲಿ ಶೇ. 1.7 ಪ್ರಜನನ ದರವಿದೆ. ಇದಕ್ಕಿಂತ ಮೊದಲು ಶೇ. 2.25 ಆಗಿತ್ತು. ಕ್ರೈಸ್ತರಲ್ಲಿ ಶೇ. 0.34ರಷ್ಟು ಕಡಿಮೆಯಾಗಿದೆ. ಈಗಿನ ಅವರ ಜನನ ದರ ಶೇ.2.2 ಆಗಿದೆ.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *