ಬಾಬರಿ ಮಸೀದಿ ವಿದ್ವಂಸಕ್ಕೆ 25 ವರ್ಷ: ಅಯೋಧ್ಯೆಯಲ್ಲಿ ಕಟ್ಟೆಚ್ಚರ


ಪೈಝಾಬಾದ್, ಡಿ.6: ಬಾಬರಿ ಮಸೀದಿ ಕೆಡವಿರುವುದಕ್ಕೆ 25 ವರ್ಷ ತುಂಬಿದ್ದು, ಪ್ರದೇಶದಲ್ಲಿ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಉತ್ತರ ಪ್ರದೇಶ ಡಿಜಿಪಿ ಮುಖ್ಯ ಕಚೇರಿಯಿಂದ ಎಲ್ಲ ಜಿಲ್ಲಾ ಪೊಲೀಸಧೀಕ್ಷಕರಿಗೆ ಈ ಕುರಿತು ಕಟ್ಟು ನಿಟ್ಟಿನ ಆದೇಶ ಕಳುಹಿಸಲಾಗಿದೆ. ಅಗತ್ಯವಾದರೆ ಜಿಲ್ಲಾದ್ಯಂತ 144 ಸೆಕ್ಷನ್ ಹೇರಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದ್ದು, ಕಾನೂನು ವ್ಯವಸ್ಥೆಯ ಸುರಕ್ಷಿತತೆಗೆ ಬಿಗು ಬಂದೋಬಸ್ತು ನಡೆಸಬೇಕೆಂದು ಸೂಚಿಸಲಾಗಿದೆ. ಉತ್ತರ ಪ್ರದೇಶದ ಕಾನೂನು ವ್ಯವಸ್ಥೆಯ ಐಜಿ ಎಚ್ ಆರ್ ಶರ್ಮ ಬುಧವಾರ ಪಟಾಕಿ ಅಂಗಡಿಗಳಿಗೆ ಬಂದ್ ಮಾಡುವಂತೆ ಆದೇಶ ನೀಡಿದ್ದಾರೆ.
ಮದ್ಯದ ಅಂಗಡಿಗಳ ಮೇಲೆ ಕಣ್ಣಿಡುವಂತೆ ಸೂಚಿಸಲಾಗಿದ್ದು, ಪೈಝಾಬಾದ್‍ಗೆ 6 ಪಿಎಸಿಯ ಆರು ತುಕಡಿಗಳನ್ನು ಕಳುಹಿಸಿ ಕೊಡಲಾಗಿದೆ.
ಅಯೋಧ್ಯೆ ಮಾತ್ರವಲ್ಲ, ಉತ್ತರ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪಿಎಸಿಯ 27 ತುಕಡಿಗಳು ಅಲ್ಲಿವೆ. ಡಿಜಿಪಿ ಮುಖ್ಯ ಕಚೇರಿಯಿಂದ ಯಾವುದೇ ಸಮಾರಂಭ, ಮೆರವಣಿಗೆ, ಕಪ್ಪು ದಿನಾಚರಣೆ ನಡೆಯುತ್ತಿದೆಯೆ ಎನ್ನುವತ್ತ ಕಣ್ಣಿಡಬೇಕೆಂದು ಪೊಲೀಸರಿಗೆ ಕಟ್ಟು ನಿಟ್ಟಿನ ಸೂಚನೆಗಳು ನೀಡಿದ್ದು, ಇಂತಹ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದೆಂದು ಆದೇಶ ನೀಡಲಾಗಿದೆ.
ಅಯೋಧ್ಯೆಯಲ್ಲಿ ಪೊಲೀಸರ ತಪಾಸಣೆ ಅಭಿಯಾನ ಆರಂಭವಾಗಿದೆ. ಮಂಗಳವಾರವೇ ಎಸ್‍ಎಸ್‍ಪಿ ಸುಭಾಶ್ ಸಿಂಗ್ ಬಘೇಲ್ ಮತ್ತು ಎಸ್ಪಿ ಅನಿಲ್ ಸಿಂಗ್ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಅಲ್ಲಲ್ಲಿ ತಪಾಸಣಾ ಕಾರ್ಯ ಆರಂಭಿಸಲಾಗಿದೆ.

Check Also

ರಾಜಸ್ಥಾನದಲ್ಲಿ ಉದ್ದೇಶ ಪೂರ್ವಕವಾಗಿ ಅಲ್ಪಸಂಖ್ಯಾತರ ಸ್ಕಾಲರ್‍ಶಿಪ್ ಸ್ಥಗಿತಗೊಳಿಸಲಾಗುತ್ತಿದೆ

ಜೈಪುರ, ಡಿ.18: ಅಲ್ಪಸಂಖ್ಯಾತರಿಗಾಗಿ ಆರಂಭಿಸಲಾದ ಸ್ಕಾಲರ್ ಶಿಪ್‍ನ್ನು ಉದ್ದೇಶ ಪೂರ್ವಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಅಲ್ಪಸಂಖ್ಯಾತ ಸಂಘಟನೆಗಳು ಆರೋಪಿಸಿವೆ. ಅವುಗಳು ಹೇಳುವ …

Leave a Reply

Your email address will not be published. Required fields are marked *