ಫೆಲಸ್ತೀನಿ ಪ್ರತೀಕವಾಗಿದ್ದ ಬಾಲಕಿ ಆಹಿದ್ ತಮೀಮಿ ವಿಚಾರಣೆ ಕಟಕಟೆಗೆ

ಟೆಲ್ ಅವೀವ್, ಫೆ.13: ಇಬ್ಬರು ಇಸ್ರೇಲಿನ ಸೈನಿಕರ ಮುಖಕ್ಕೆ ಹೊಡೆದು ಸುದ್ದಿಯಾಗಿದ್ದ ಫೆಲಸ್ತೀನಿ ಪ್ರತಿರೋಧದ ಪ್ರತೀಕವಾಗಿ ಬದಲಾದ ಬಾಲಕಿ ಅಹಿದ್ ತಮೀಮಿ ವಿಚಾರಣೆಯನ್ನು ಇಂದು ಇಸ್ರೇಲಿನ ಸೇನಾ ಕೋರ್ಟು ಆರಂಭಿಸಲಿದೆ. ಕಳೆದ ತಿಂಗಳು 17 ವರ್ಷ ತುಂಬಿರುವ ತಮೀಮಿ ಸಹಿತ 300 ಮಂದಿ ಅಪ್ರಾಪ್ತ ಕೈದಿಗಳನ್ನು ಇಸ್ರೇಲ್ ಜೈಲಿನಲ್ಲಿರಿಸಿದೆ.

ವೆಸ್ಟ್‍ಬ್ಯಾಂಕ್‍ನಲ್ಲಿ ತಮೀಮಿಯ ಸಂಬಂಧಿಕ ಹದಿನೈದು ವರ್ಷದ ಬಾಲಕನ ತಲೆಗೆ ಗುಂಡಿಟ್ಟು ಗಂಭೀರವಾಗಿ ಗಾಯಗೊಳಿಸಿದ್ದನ್ನು ಪ್ರತಿಭಟಿಸಿ ಅಹಿದ್ ಎನ್ನುವ ಬಾಲಕಿ ಇಬ್ಬರು ಸೈನಿಕರ ಮುಖಕ್ಕೆ ಹೊಡೆದಿದ್ದರು. ಕ್ರಿಮಿನಲ್ ಆರೊಪ ಹೊರಿಸಿ ಆಕೆ ಬಂಧಿಸಲಾಗಿದ್ದು, ಇದೀಗ ವಿಚಾರಣೆ ಕೋರ್ಟಿನಲ್ಲಿ ಆರಂಭವಾಗುತ್ತಿದೆ. ಬಾಲಕಿಯನ್ನು ಡಿಸೆಂಬರ್‍ನಲ್ಲಿ ಬಂಧಿಸಿ ಇಸ್ರೇಲ್ ಸೇನೆ ಜೈಲಿಗೆ ತಳ್ಳಿತ್ತು.

Check Also

ಇತರರ ಗಮನ ಸೆಳೆಯಲು ಸಾಮಾಜಿಕ ಮಾಧ್ಯಮಗಳಲ್ಲಿ ಹದಿಹರೆಯದವರು ಕಠಿಣ ಪರಿಶ್ರಮ ನಡೆಸುತ್ತಿದ್ದಾರೆ: ಅಧ್ಯಯನ ವರದಿ

ಲಾಸ್ ಆಂಜಲಿಸ್, ಫೆ.20: ಸಾಮಾಜಿಕ ಮಾಧ್ಯಮಗಳಲ್ಲಿ ಇತರರ ಗಮನಕ್ಕೆ ಬೀಳಲು ಹದಿಹರೆಯದ ಜನಾಂಗ ಕಠಿಣ ಪರಿಶ್ರಮ ನಡೆಸುತ್ತಿದೆ ಎಂದು ಸಂಶೋಧಕರು …

Leave a Reply

Your email address will not be published. Required fields are marked *