ಪರ್ದಾಕ್ಕೆ ಬಲವಂತ ಸಲ್ಲ: ಸೌದಿ ಅರೇಬಿಯ

ರಿಯಾದ್, ಫೆ.13: ಸೌದಿ ಅರೇಬಿಯದಲ್ಲಿ ಮಹಿಳೆಯರಿಗೆ ಪರ್ದಾ ಧರಿಸಬೇಕೆಂದು ಇನ್ನು ಬಲವಂತ ಪಡಿಸುವಂತಿಲ್ಲ ಎಂದು ರಾಜಕೀಯ (ರಾಯಲ್ ಕೋರ್ಟು) ಸಲಹೆಗಾರ ಹೇಳಿದ್ದು ಗೌರವಯುತ ಬಟ್ಟೆ ಧರಿಸಲು ಮಾತ್ರ ಇಸ್ಲಾಮ್ ತಿಳಿಸಿದೆ ಎಂದಿದ್ದಾರೆ. ಮಹಿಳೆಯರು ಪರ್ದಾ ಮಾತ್ರ ಧರಿಸಬೇಕೆಂದೇನಿದೆ. ಅವರು ಗೌರವಯುತವಾದ ಯಾವ ಬಟ್ಟೆಯೂ ಧರಿಸಬಹುದಲ್ಲ. ಮಹಿಳೆಯ ದೇಹ ಮರೆಸುವ ಬಟ್ಟೆ ಧರಿಸಬೇಕೆಂದು ಇಸ್ಲಾಮಿಕ್ ಶರೀಅತ್ ಸೂಚಿಸುತ್ತದೆ ಎಂದು ರಾಯಲ್ ಕೋರ್ಟು ಸಲಹೆಗಾರ ಮತ್ತು ವಿದ್ವಾಂಸ ಸಭೆಯ ಸದಸ್ಯ ಶೇಖ್ ಡಾ. ಅಬ್ದುಲ್ಲ ಅಲ್ ಮುತ್ಲಕ್ ಹೇಳಿದ್ದಾರೆ.

ಜಗತ್ತಿನಲ್ಲಿ ಹಲವು ಕಡೆಗಳಲ್ಲಿ ಮುಸ್ಲಿಂ ಮಹಿಳೆಯರು ಪರ್ದಾ ಧರಿಸುವುದಿಲ್ಲ. ಇಲ್ಲೆಲ್ಲ ಇಸ್ಲಾಮ್ ಧರ್ಮ ಬೋಧನೆ ಮಾಡುವ ಮಹಿಳೆಯರು ಕೂಡಾ ಪರ್ದಾ ಉಪಯೋಗಿಸುವುದಿಲ್ಲ.

ಪವಿತ್ರ ಕುರ್‍ಆನ್ ಕಂಠಪಾಠ ಮಾಡಿ, ಸಂಪೂರ್ಣ ಇಸ್ಲಾಮೀ ನಿಷ್ಠೆಯಲ್ಲಿ ಜೀವಿಸುವ ಮಹಿಳೆಯರು ವಿವಿಧ ದೇಶಗಳಲ್ಲಿದ್ದಾರೆ ಎಂದು ಡಾ. ಅಬ್ದುಲ್ಲ ಅಲ್ ಮುತ್ಲಕ್ ಹೇಳಿದರು. ಸೌದಿ ಅರೇಬಿಯದಲ್ಲಿ ಮಕ್ಕ ಮತ್ತು ಮದೀನದಲ್ಲಿ ಇಂತಹ ಅನೇಕ ಮಹಿಳೆಯರು ಪರ್ದಾ ಬಳಸದೆ ಗೌರವಯುತ ಬಟ್ಟೆ ಧರಿಸುತ್ತಾರೆ ಎಂದು ಮುತ್ಲಕ್ ಹೇಳಿದರು.

ಮಹಿಳೆಯರು ಮುಖ ಮರೆಸುವುದು ಇಸ್ಲಾಮಿಕವಲ್ಲ. ರಿಯಾದ್‍ನ ಕೋರ್ಟುಗಳಿಗೆ ಮಹಿಳೆಯರು ಮುಖ ಮರೆಸಿ ಬರುತ್ತಿದ್ದರು. ನಂತರ ಮುಖ ಮರೆಸದೆ ಕೋರ್ಟಿಗೆ ಬರಬೇಕೆಂದು ಈ ಹಿಂದೆ ಸೂಚಿಸಲಾಗಿತ್ತು.

Check Also

ಇತರರ ಗಮನ ಸೆಳೆಯಲು ಸಾಮಾಜಿಕ ಮಾಧ್ಯಮಗಳಲ್ಲಿ ಹದಿಹರೆಯದವರು ಕಠಿಣ ಪರಿಶ್ರಮ ನಡೆಸುತ್ತಿದ್ದಾರೆ: ಅಧ್ಯಯನ ವರದಿ

ಲಾಸ್ ಆಂಜಲಿಸ್, ಫೆ.20: ಸಾಮಾಜಿಕ ಮಾಧ್ಯಮಗಳಲ್ಲಿ ಇತರರ ಗಮನಕ್ಕೆ ಬೀಳಲು ಹದಿಹರೆಯದ ಜನಾಂಗ ಕಠಿಣ ಪರಿಶ್ರಮ ನಡೆಸುತ್ತಿದೆ ಎಂದು ಸಂಶೋಧಕರು …

Leave a Reply

Your email address will not be published. Required fields are marked *