ಪಟಾಕಿ ಬ್ಯಾನ್‍ಗೆ ಉರಿದೆದ್ದ ಚೇತನ್ ಭಗತ್: ಮುಹರ್ರಮ್‍ನಲ್ಲಿ ರಕ್ತ ಹರಿಸುವುದು, ಬಕ್ರೀದ್‍ನಲ್ಲಿ ಆಡಿಗೆ ಚೂರಿ ಹಾಕುವುದಕ್ಕೆ ತಡೆ ಬೀಳಬಹುದೇ?


ಹೊಸದಿಲ್ಲಿ, ಅ.12: ಸೋಮವಾರ ಸುಪ್ರೀಂ ಕೋರ್ಟು ಎನ್‍ಸಿಆರ್ ಪ್ರದೇಶದಲ್ಲಿ ಪಟಾಕಿ ಮಾರುವುದಕ್ಕೆ ತಡೆ ವಿಧಿಸಿದೆ. ಪಟಾಕಿಯ ಮಾರಾಟ, ದಾಸ್ತಾನು ನಿಷೇಧದ 2016ರ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಲಾಗಿದೆ. ಆದರೆ ಸುಪ್ರೀಂ ಕೋರ್ಟಿನ ಈ ತೀರ್ಪಿನ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವರು ಯಾವುದೇ ಬೇರೆ ಧರ್ಮದ ಹಬ್ಬಗಳಿಗೆ ನಿಷೇಧ ಹೇರಲಾಗುವುದೇ ಎಂದು ಪ್ರಶ್ನಿಸಿದ್ದಾರೆ. ಸಾಹಿತಿ ಚೇತನ್ ಭಗತ್ ದೀಪಾವಳಿಯಲ್ಲಿ ಪಟಾಕಿ ನಿಷೇಧ ಅಭಿಯಾನವನ್ನು ಹಮ್ಮಿಕೊಂಡವರನ್ನು ಕೂಡಾ ವಿರೋಧಿಸಿದ್ದಾರೆ.
ಅವರು ಟ್ವೀಟ್ ಮಾಡಿ ‘ಸುಪ್ರೀಂ ಕೋರ್ಟು ದೀಪಾವಳಿಯ ಪಟಾಕಿಗೆ ನಿಷೇಧ ಹೇರಿದೆ. ಮಕ್ಕಳಿಗೆ ಪಟಾಕಿಯಿಲ್ಲದೆ ಎಂತಹ ದೀಪಾವಳಿ ಇದೆ. ಹಿಂದೂ ಹಬ್ಬಗಳಲ್ಲಿ ಹೀಗೆ ಯಾಕೆ ಆಗುತ್ತದೆ. ಆಡಿಗೆ ಚೂರಿಹಾಕುವುದು, ಮುಹರ್ರಮ್‍ನಲ್ಲಿ ರಕ್ತ ಹರಿಸುವುದನ್ನು ನಿಷೇಧಿಸಲಾಗುವುದೇ ಎಂದು ಪ್ರಶ್ನಿಸಿದ್ದಾರೆ.
‘ದೀಪಾವಳಿಯಲ್ಲಿ ಪಟಾಕಿ ನಿಷೇಧಿಸುವುದೆಂದರೆ ಕ್ರಿಸ್‍ಮಸ್ ಟ್ರೀಗೆ ಬ್ಯಾನ್ ಮಾಡಿದ ಹಾಗೆ ಬಕ್ರೀದ್‍ನಲ್ಲಿ ಆಡುಗಳಿಗೆ ಬ್ಯಾನ್ ಮಾಡಿದಂತಾಗಿದೆ. ವಸ್ತುಗಳನ್ನು ದುರಸ್ತಿ ಮಾಡಿರಿ, ನಿಷೇಧ ಹೇರಬೇಡಿರಿ. ನಮ್ಮ ಪರಂಪರೆಯನ್ನು ಗೌರವಿಸಿ’ ಎಂದು ಅವರು ಹೇಳಿದ್ದಾರೆ.
ಕೆಲವರು ದೀಪಾವಳಿಯ ಪಟಾಕಿ ಸಿಡಿಯದಂತೆ ಮಾಡಲು ಹೋರಾಡುತ್ತಿದ್ದಾರೆ. ಅವರು ಇದೇ ಉತ್ಸಾಹದಲ್ಲಿ ಇತರ ಹಬ್ಬಗಳಲ್ಲಿ ಹೀಗೆ ಮಾಡುವುದನ್ನು ನೋಡಲು ಬಯಸುತ್ತೇನೆ. ಕೆಲವು ಹಬ್ಬಾಚರಣೆಗಳಲ್ಲಿ ರಕ್ತ ಮತ್ತು ಹಿಂಸೆ ತುಂಬಿಕೊಂಡಿದೆ. ನಿಮಗೆ ಪರಿಸರದ ಚಿಂತೆಯಿದೆಯೆಂದಾದರೆ ನಿಮ್ಮ ಮನೆಯಲ್ಲಿ ಒಂದು ವಾರಗಳವರೆಗೆ ವಿದ್ಯುತ್ ಬಂದ್ ಮಾಡಿರಿ. ಕಾರು ಬಳಕೆ ಮಾಡಬೇಡಿರಿ. ನೀವು ಯಾವ ಆಧಾರದಲ್ಲಿ ಇತರರ ಪರಂಪರೆಗೆ ತಡೆ ಹೇರುವಿರಿ ಎಂದು ಚೇತನ್ ಭಗತ್ ಪ್ರಶ್ನಿಸಿದ್ದಾರೆ.

Check Also

ಫಿಫಾ ವಿಶ್ವಕಪ್ ಪಂದ್ಯಾವಳಿ ಗಳಿಕೆಯನ್ನು ಮಸೀದಿ ನಿರ್ಮಾಣಕ್ಕೆ ದಾನ ಮಾಡಲಿರುವ ಫ್ರಾನ್ಸ್ ತಂಡದ ಉಸ್ಮಾನ್ ದೆಂಬೆಲ್

ಪ್ಯಾರಿಸ್, ಜು.20: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಗೆದ್ದ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಉಸ್ಮಾನ್ ದೆಂಬೆಲ್ ಪಂದ್ಯಾವಳಿಯ ತಮ್ಮ …

Leave a Reply

Your email address will not be published. Required fields are marked *