ನೊಣದ ಕಣ್ಣುಗಳ ಅದ್ಭುತ ಸಂಯೋಗ

ಅಲ್ಲಾಹನ ನಿದರ್ಶನಗಳು:

 

ನೊಣವು ಒಂದು ಅದ್ಭುತ ಸೃಷ್ಟಿಯಾಗಿದೆ. ಪ್ರತಿ ಸೆಕೆಂಡಿಗೆ ಅದರ ರೆಕ್ಕೆಗಳು 500 ಬಾರಿ ಬಡಿಯುತ್ತವೆ. ಆದ್ದರಿಂದಲೇ ಅದು ಅತೀ ವೇಗವಾಗಿ ಹಾರುತ್ತದೆ.

ಇದೆಲ್ಲಕ್ಕಿಂತಲೂ ಮಿಗಿಲಾಗಿ ನೊಣದ ಕಣ್ಣುಗಳು ಸಾವಿರಾರು ವಿಶಿಷ್ಟ ಲೆನ್ಸ್ (LENSES) ಗಳನ್ನು ಒಳಗೊಂಡಿದೆ. ನೊಣದ ತಲೆಯ ಎರಡೂ ಭಾಗಗಳಲ್ಲಿ ಈ ಸಂಯುಕ್ತ ವಾದ ಎರಡು ಕಣ್ಣುಗಳಿವೆ. ಪ್ರತಿಯೊಂದು ಕಣ್ಣಿನ ಭಾಗದಲ್ಲಿಯೂ ಕೂಡಾ 4,000 (ನಾಲ್ಕು ಸಾವಿರ) ಉಪ ಭಾಗಗಳಿವೆ ಮತ್ತು ಪ್ರತಿಯೊಂದು ಭಾಗದಲ್ಲಿಯೂ ಕೂಡಾ ವಿಶ್ಲೇಷಿಸಲ್ಪಡುವ ವಸ್ತುವು ವಿವಿಧ ಆಕಾರ-ಆಕೃತಿ ಮತ್ತು ಆಯಾಮದಲ್ಲಿ ಕಂಡು ಬರುತ್ತದೆ.

ನೊಣವು ಒಂದು ಹೂವನ್ನು ನೋಡುತ್ತಿದೆ ಎಂದಾದಲ್ಲಿ ಆ ಹೂವಿನ ಪ್ರತಿಬಿಂಬವು ನೊಣಕ್ಕೆ ಸಂಪೂರ್ಣ ಹೂವಿನಂತೆ ಗೋಚರಿಸಲು 8,000 (ಎಂಟು ಸಾವಿರ) ಲೆನ್ಸ್ ಗಳ ಮೇಲೆ ಬೀಳಬೇಕಾಗುತ್ತದೆ. ಈ ಪ್ರತಿ ಬಿಂಬವು ಒಂದು ಒಗಟಿನಂತೆ ಮೆದುಳಿಗೆ ಕಳುಹಿಸಲ್ಪಡುತ್ತದೆ ಮತ್ತು ನಂತರ ಅದು ಸಂಪೂರ್ಣ ಹೂವಿನಂತೆ ಕಂಡು ಬರುತ್ತದೆ.

ಇಂತಹ ಅದ್ಭುತ ಕಣ್ಣಿನ ಸಂಯೋಗವನ್ನು ಹೊಂದಿರುವ ನೊಣವು ವಿವಿಧ ಭಂಗಿಯಲ್ಲಿ ಅಂದರೇ 8,000 ವಿಭಾಗಗಳಲ್ಲಿ ಒಂದು ವಸ್ತುವನ್ನು ವೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ನಾವು ಮನುಷ್ಯರಾಗಿದ್ದು ಕೊಂಡು ಪ್ರಾಣಿಗಳ ಕುರಿತು ಅಧ್ಯಯನ ನಡೆಸುವಾಗ ಮತ್ತು ಪ್ರಥಮವಾಗಿ ಸೃಷ್ಟಿಸಲ್ಪಟ್ಟ ಮಾನವರಿಗೆ ಆಲೋಚನಾ ಶಕ್ತಿ ಇರುವಾಗ ಅಲ್ಲಾಹನ ಈ ಮಹತ್ತರ ನಿದರ್ಶನಗಳನ್ನು ಅಲ್ಲಗಳೆಯುವುದೇಕೆ?

ವಿಜ್ಞಾನಿಗಳು ಈಗಾಗಲೇ ಈ 8,000 ಲೆನ್ಸ್ ಗಳನ್ನು ಅಧ್ಯಯನ ನಡೆಸಿ ಹೇಳುವುದೇನೆಂದರೆ “ಪ್ರತಿಯೊಂದ ಭಾಗವು ಮಿಲಿ ಮೀಟರ್ ಗಾತ್ರದ್ದಾಗಿವೆ ಮತ್ತು ಪರಸ್ಪರ ಭಾಗಗಳಲ್ಲಿ ಯಾವುದೇ ನರಗಳ ಸಂಯೋಜನೆ ಇಲ್ಲದೆ ವೀಕ್ಷಿಸಲು ಸಹಾಯಕವಾಗಿವೆ” ಹೀಗಿರುವಾಗ ಹೇಗೆ ತಾನೇ ಈ ಸೃಷ್ಟಿಯು ತನ್ನಿಂತಾನೇ ಆಗಲು ಸಾಧ್ಯ. ನಿಜವಾಗಿಯೂ ಅಸಾಧ್ಯದ ಮಾತು.

ಅಲ್ಲಾಹನು ಒಂದು ನೊಣದ ಕಣ್ಣಿನಲ್ಲಿಯೇ 8,000 ವಿಭಾಗಗಳನ್ನು ನೀಡಿ ವೀಕ್ಷಿಸಲು ನಿದರ್ಶನವನ್ನು ಬಿಟ್ಟಿರುವುದಾದರೆ ಆತನು ಎಲ್ಲರನ್ನೂ ವೀಕ್ಷಿಸುತ್ತಾನೆಂಬುದರಲ್ಲಿ ಸಂಶಯವೇ ಬಾರದು.

“ಜನರೇ, ಒಂದು ಉದಾಹರಣೆ ಕೊಡಲಾಗುತ್ತದೆ. ಗಮನವಿಟ್ಟು ಕೇಳಿರಿ! ನೀವು ಅಲ್ಲಾಹನನ್ನು ಬಿಟ್ಟು ಯಾವ ಆರಾಧ್ಯರನ್ನು ಪ್ರಾರ್ಥಿಸುತ್ತೀರೋ ಅವರೆಲ್ಲರೂ ಒಟ್ಟಾಗಿ ಒಂದು ನೊಣವನ್ನೂ ಸೃಷ್ಟಿಸಲಾರರು. ಮಾತ್ರವಲ್ಲ, ನೊಣವು ಅವರಿಂದೇನನ್ನಾದರೂ ಕಸಿದು ಕೊಂಡೊಯ್ದರೆ ಅವರಿಗೆ ಅದನ್ನು ಬಿಡಿಸಿಕೊಳ್ಳಲಿಕ್ಕೂ ಸಾಧ್ಯವಾಗದು. ಸಹಾಯಾರ್ಥಿಗಳೂ ದುರ್ಬಲರು, ಯಾರಿಂದ ಸಹಾಯ ಬೇಡಲಾಗುತ್ತದೋ ಅವರೂ ದುರ್ಬಲರು.” (ಪವಿತ್ರ ಕುರ್‍ಆನ್: 22: 73) 

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *