ನಾನು ಇಷ್ಟ ಪಡುವ ಪ್ರವಾದಿ(ಸ)


ಆಯಿಷಾ ಯು.ಕೆ.
ಲೋಕದಲ್ಲಿ ನಮ್ಮನ್ನು ಸೃಷ್ಟಿಸಿ ಪರಿಪಾಲಿಸುವ ಸೃಷ್ಟಿಕರ್ತನ ಬಗ್ಗೆ, ಜೀವನದ ಉದ್ದೇಶದ ಬಗ್ಗೆ ನಮಗೆ ಮಾರ್ಗದರ್ಶನ ನೀಡಿದವರು ಪ್ರವಾದಿ ಮುಹಮ್ಮದ್(ಸ). ರಾಜನಂತೆ ಬದುಕುವ ಅವಕಾಶವಿದ್ದರೂ ಫಕೀರನಂತೆ ಬದುಕಿದ, ಮಾನವತೆಯ ಮಹಾ ಉಪಕಾರಿಯ ಜೀವನದ ಒಂದೊಂದು ಕ್ಪಣವೂ ನಮಗೆ ಮಾದರಿ ಕ್ಪಣಗಳು. ಹತ್ತು ವರುಷಗಳ ಕಾಲ ಅವರೊಂದಿಗಿದ್ದ ಸೇವಕನಿಗೆ `ಛೇ’ ಎಂದೂ
ಹೇಳದ… ತನ್ನನ್ನು ಪೀಡಿಸಿದವರನ್ನು ಮಾತ್ರವಲ್ಲ, ತನ್ನ ದೊಡ್ಡಪ್ಪನ ಕರುಳನ್ನು ಜಗಿದವರನ್ನೂ ಕ್ಪಮಿಸಿದ ಶತ್ರು ವತ್ಸಲ. ಅನಾಥ ಮಕ್ಕಳ ಮುಂದೆ ಸ್ವಂತ ಮಕ್ಕಳನ್ನೂ ಮುದ್ದಿಸಬಾರದೆಂದು ಕಲಿಸಿಕೊಟ್ಟ ಅನಾಥ
ರಕ್ಪಕ. ಕಾರ್ಮಿಕನ ಬೆವರಾರುವ ಮುನ್ನ ಆತನ ವೇತನ ನೀಡಿರೆಂದೂ, ಶ್ರಮಿಕನ ಒರಟು ಕೈಗಳನ್ನು ಚುಂಬಿಸಿದ, ಕರಿಯ ಗುಲಾಮನನ್ನು ತನ್ನ ಹೆಗಲ ಮೇಲೆ ನಿಲ್ಲಿಸಿದ ನ್ಯಾಯ, ಸಮಾನತೆಯ ಹರಿಕಾರ. ಹೊಟ್ಟೆಗೆ ಕಲ್ಲನ್ನು ಕಟ್ಟಿ ಸಹಾಬಿಗಳೊಂದಿಗೆ ಸ್ವತಃ ಕಂದಕ ತೋಡಿದ ಮಾದರಿ ನಾಯಕ. ಮನೆಯಲ್ಲಿರುವ ವೇಳೆಯಲ್ಲಿ ಮನೆ ಕೆಲಸದಲ್ಲಿ ನೆರವಾಗುತ್ತಾ, ನಮಾಝ್‍ನ ವೇಳೆಯಾದೊಡನೆ ಮಸೀದಿಗೆ ಧಾವಿಸುವ ಆದರ್ಶ ಪತಿ. ಯಹೂದಿಯ ಶವ ಕೊಂಡೊಯ್ಯುವಾಗ ಎದ್ದು ನಿಂತು ಗೌರವಿಸಿದ ಮನುಷ್ಯ ಪ್ರೇಮಿ. ನಝ್ರ್ರಾನಿನ ಕ್ರೈಸ್ತ ನಿಯೋಗಕ್ಕೆ ಪ್ರಾರ್ಥನೆ ಸಲ್ಲಿಸಲು ಮಸೀದಿಯಲ್ಲಿ ಸ್ಥಳಾವಕಾಶ ನೀಡಿದ ಸಹಿಷ್ಣುತೆಯ ಉಜ್ವಲ ಮಾದರಿ. ಹಳ್ಳಿಗನೊಬ್ಬ ಮಸೀದಿಯಲ್ಲಿ ಮೂತ್ರ ಶಂಕೆ ಮಾಡಿದಾಗ ಅವನಿಗೆ ಹೊಡೆಯಬೇಡಿರೆಂದು ತಡೆದು ನೀರು ಹಾಯಿಸಲು ಸಹಾಬಿಗಳಿಗೆ ಆದೇಶಿಸಿ ತಿಳಿ ಹೇಳಿದ ಮಾದರಿ ಶಿಕ್ಪಕ. ಹೆಣ್ಣು ಶಿಶುವನ್ನು ಜೀವಂತ ಹೂಳುತ್ತಿದ್ದ ದುಷ್ಟ ಸಂಪ್ರದಾಯ ಕೊನೆಗಾಣಿಸಿ ಹೆಣ್ಣಿಗೆ ಬದುಕುವ ಹಕ್ಕು ನೀಡಿ ಆಕೆಯ ಸ್ಥಾನ ಮಾನವನ್ನು ಎತ್ತಿ ಹಿಡಿದ ಮಹಿಳಾ ವಿಮೋಚಕ. ವಿಶ್ವ ವಿಮೋಚಕ. ದೇವನು ತನಗೆ ವಹಿಸಿದ ಎಲ್ಲ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ನಿರ್ವಹಿಸಿಯೂ ಜವಾಬ್ದಾರಿಕೆಯ ಪ್ರಜ್ಞೆಯಿಂದ ಅತ್ತು ಕಣ್ಣೀರಿಳಿಸುತ್ತಿದ್ದ ಅನುಪಮ ವ್ಯಕ್ತಿತ್ವ, ಮಹಾನ್ ನಾಯಕ, ನಾನು ಇಷ್ಟ ಪಡುವ ಪ್ರವಾದಿ ಮುಹಮ್ಮದ್(ಸ).

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *