“ನಮ್ಮ ಮುಹಮ್ಮದ್(ಸ)”

-ಶರಣು,ಗುರಪ್ಪ,ಗೊಲ್ಲರ.

ಕ್ರಿ.ಶ. 571 ರಲ್ಲಿ
ಪುಣ್ಯ ಭೂಮಿ ಮಕ್ಕಾ ಪಟ್ಟಣದಲ್ಲಿ
‘ಆಮಿನಾ-ಅಬ್ದುಲ್ಲಾ’ರ ಮಗನಾಗಿ
ಜನಿಸಿದ ನಮ್ಮ ಮುಹಮ್ಮದ್(ಸ) ||

‘ಅಮಿನ್’ ಪದವಿಯ ಪಡೆದು
ಪ್ರಾಮಾಣಿಕನಾಗಿಯೇ ನಡೆದು
ಕುಡಿತ, ಜೂಜಾಟ, ವ್ಯಭಿಚಾರವನ್ನು.
ವಿರೋಧಿಸಿದ ನಮ್ಮ ಮುಹಮ್ಮದ್(ಸ) ||

ದೇವನಿಗೆ ಪ್ರಿಯರು
ಸತ್ಯ ಸಾರಿದ ಸತ್ಯವಂತರು
ಮೋಸ, ವಂಚನೆ, ಕಪಟ ತಿಳಿಯದ
ಅಪ್ಪಟ ಬಂಗಾರ ನಮ್ಮ ಮುಹಮ್ಮದ್(ಸ) ||

ಆ ದೇವರ ಪ್ರವಾದಿಯವರು
ಈ ಭೂಮಿಯಲ್ಲಿಯೇ ಹುಟ್ಟಿದವರು
ಪರಮ ಶಾಂತಿಯ ನೀಡಲು ಜಗಕೆ
ಬಂದರು ನಮ್ಮ ಮುಹಮ್ಮದ್(ಸ) ||

ಇಸ್ಲಾಮಿನ ಸ್ಥಾಪಕರಲ್ಲ
ಅವರ ನಂತರ ಪ್ರವಾದಿಯಿಲ್ಲ
ಆದಮ್’ರ ಶಾಂತಿಯ ಹಿಡಿದು
ನಾನೂ ಮನುಷ್ಯನೆಂದ ಮುಹಮ್ಮದ್(ಸ) ||

ಅಲ್ಲಾಹನ ಸಂದೇಶವನ್ನು
ಇಡೀ ಜಗತ್ತಿಗೆ ಸಾರಿದರವರು
ನಿಜ ದೇವನ ದಾರಿಯ ಅರಿತು
ಬಾಳಿದರು ನಮ್ಮ ಮುಹಮ್ಮದ್(ಸ) ||

-ಶರಣು,ಗುರಪ್ಪ,ಗೊಲ್ಲರ.

Check Also

`ನಾಲ್ವರು ಖಲೀಫರೇ ನನ್ನ ಆದರ್ಶ’: ಅಗಲಿದ ಬಿ.ಎ. ಮೊಹಿದೀನ್ ಸ್ಮರಣೆ

ಮಾಜಿ ಉನ್ನತ ಶಿಕ್ಷಣ ಸಚಿವ, ಸಜ್ಜನ ರಾಜಕಾರಣಿ, ಮುಸ್ಲಿಮ್ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಧ್ವನಿಯಾಗಿದ್ದ ಬಿ.ಎ. ಮೊಹಿದೀನ್ (81) …

Leave a Reply

Your email address will not be published. Required fields are marked *