ನಕ್ವಿ ಸಾಹೇಬರಿಗೆ ಇಸ್ಲಾಮನ್ನು ಅರಿತುಕೊಳ್ಳಬೇಕೆಂದು ಗೊತ್ತಿಲ್ಲವೇ: ಮುಹಮ್ಮದ ಅಶ್ರಫ್ ಅಶ್ರಫಿ


ಉತ್ತರ ಪ್ರದೇಶ, ಅ. 13: ಕಿಚೌಚ ಶರೀಫ್‍ನ ಮುಹಮ್ಮದ್ ಅಶ್ರಫ್ ಅಶ್ರಫಿ ಕೇಂದ್ರ ಸರಕಾರದ ಹೊಸ ಹಜ್ ನೀತಿಯಲ್ಲಿ ಮುಸ್ಲಿಮ್ ಮಹಿಳೆಯರಿಗೆ ಒಂಟಿಯಾಗಿ ಹಜ್‍ಗೆ ಹೋಗುವ ವ್ಯವಸ್ಥೆ ಮಾಡಿದ್ದನ್ನು ಟೀಕಿಸಿದ್ದಾರೆ. ಯಾವಳೇ ಮಹಿಳೆ ತನ್ನ ತಂದೆ ತಾಯಿ, ಪತಿ, ಸಹೋದರನಿಲ್ಲದೆ ಹಜ್ ಮಾಡುವುದು ಮಾತ್ರವಲ್ಲ ಮನೆಯಿಂದ ಪೇಟೆಗೂ ಹೋಗುವುದು ತಪ್ಪು ಎಂದಿದ್ದಾರೆ.
ಅವರು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿಯ ಮುಸ್ಲಿಮ್ ಮಹಿಳೆ ಹಜ್‍ಗೆ ಒಬ್ಬಳೆ ಹೋಗಬಹುದೆನ್ನುವ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದರು. ಈ ಕುರಿತು ಅಶ್ರಫಿಯವರು ನಕ್ವಿ ಸಾಬ್‍ರಿಗೆ ಅಷ್ಟೂ ಗೊತ್ತಿಲ್ಲವೆ. ಇಸ್ಲಾಮನ್ನು ಅರಿತುಕೊಳ್ಳಬೇಕೆನ್ನುವುದು ಎಂದಿದ್ದಾರೆ.
ಇಸ್ಲಾಮ್ 1400 ವರ್ಷಗಳಿಂದ ಸ್ಪಷ್ಟ ವ್ಯವಸ್ಥೆಯನ್ನು ಮಾಡಿರಿಸಿದೆ. ಯಾವುದೇ ಮಹಿಳೆ ತಂದೆ ತಾಯಿ, ಸಹೋದರ ಸಹೋದರಿ ಅಥವಾ ಪತಿಯ ಹೊರತು ಹೊರ ಹೋಗುವಂತಿಲ್ಲ. ಇದು ನಮ್ಮ ಸೊಸೆ- ಹೆಣ್ಮಕ್ಕಳ ಸುರಕ್ಷೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ವಿವರಿಸಿದ್ದಾರೆ.
ರೋಹಿಂಗ್ಯ ಮುಸ್ಲಿಮರ ವಿಷಯದಲ್ಲಿ ಪ್ರಸ್ತಾವಿಸಿದ ಅವರು ಟಿಬೆಟ್ ನಿರಾಶ್ರಿತರಿಗೆ ವ್ಯವಸ್ಥೆಯನ್ನು ಸರಕಾರ ಮಾಡಿರುವಂತೆ ರೋಹಿಂಗ್ಯನ್ ಮುಸ್ಲಿಮರಿಗೆ ಕೂಡಾ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಅವರಿಗೆ ಭಾರತದಲ್ಲಿ ಕಾಲೇಜು, ಆಸ್ಪತ್ರೆ ಇತ್ಯಾದಿ ವ್ಯವಸ್ಥೆ ಮಾಡಿಕೊಡಲಾಗಿದೆ. ರೋಹಿಂಗ್ಯದ ಹಿಂದೂ ಮತ್ತು ಮುಸ್ಲಿಮರಿಗೆ ಆಶ್ರಯ ಮತ್ತು ಸವಲತ್ತುಗಳನ್ನು ಕೊಡಬೇಕೆಂದು ಅವರು ಹೇಳಿದ್ದಾರೆ.
ಜಿಎಸ್‍ಟಿ ಕುರಿತು ಮಾತಾಡಿದ ಅವರು ಈ ಕುರಿತು ಅರ್ಥ ಶಾಸ್ತ್ರಜ್ಞರಿಂದ ಅಭಿಪ್ರಾಯ ಪಡೆಯಬೇಕಿತ್ತು. ಮಾಜಿ ಪ್ರಧಾನಿ ಡಾ.ಮನ್‍ಮೋಹನ್ ಸಿಂಗ್, ಮಾಜಿ ವಿತ್ತ ಸಚಿವ ಪಿ.ಚಿದಂಬರಂ ವಿಶ್ವದ ದೊಡ್ಡ ಅರ್ಥ ಶಾಸ್ತ್ರಜ್ಞರು ಎಂದು ಅಶ್ರಫಿ ಹೇಳಿದ್ದಾರೆ.

Check Also

ಫಿಫಾ ವಿಶ್ವಕಪ್ ಪಂದ್ಯಾವಳಿ ಗಳಿಕೆಯನ್ನು ಮಸೀದಿ ನಿರ್ಮಾಣಕ್ಕೆ ದಾನ ಮಾಡಲಿರುವ ಫ್ರಾನ್ಸ್ ತಂಡದ ಉಸ್ಮಾನ್ ದೆಂಬೆಲ್

ಪ್ಯಾರಿಸ್, ಜು.20: ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಗೆದ್ದ ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ಉಸ್ಮಾನ್ ದೆಂಬೆಲ್ ಪಂದ್ಯಾವಳಿಯ ತಮ್ಮ …

Leave a Reply

Your email address will not be published. Required fields are marked *