ಜಾತಿ ಧರ್ಮ ಎಂದು ಹೊಡೆದಾಡುವವರು ಇದನೊಮ್ಮೆ‌ ಓದಲೇಬೇಕು

ಅದೊಂದು ಆಸ್ಪತ್ರೆಯ ಜನರಲ್ ವಾರ್ಡ್ ಅಲ್ಲಿ ಎಲ್ಲಾ ಧರ್ಮದ ರೋಗಿಗಳಿಗೂ ಒಂದೇ ತರದ ಮಂಚಗಳು. ಅಕ್ಕ ಪಕ್ಕದ 2 ಮಂಚಗಳಲ್ಲಿ ಒಂದರಲ್ಲಿ ಮುಸ್ಲಿಂ ಹಾಗೂ ಇನ್ನೊಂದರಲ್ಲಿ ಹಿಂದೂ ಕುಟುಂಬದ ಇಬ್ಬರು ಮಕ್ಕಳು ಅನಾರೋಗ್ಯದಿಂದ ದಾಖಲಾಗಿದ್ದರು.

ಅವರನ್ನು ನೋಡಿಕೊಳ್ಳಲು ಆ ಮಕ್ಕಳ ಅಮ್ಮಂದಿರು ಎರಡು ದಿನದಿಂದ ಅಲ್ಲಿದ್ದರು ರಾಮ (ಹೆಸರು ಬದಲಾಯಿಸಲಾಗಿದೆ ಇಬ್ಬರದ್ದು ಕೂಡ) ಮೊದಲ ದಿನ ಜೊರು ಹುಷಾರಿಲ್ಲದ ಕಾರಣ ಅವನ ಅಮ್ಮನಿಗೆ ಇಡೀ ದಿನ ನಿದ್ದೆ ಇಲ್ಲ. ಮರು ದಿನ ರಾಮ ಸ್ವಲ್ಪ ಚೇತರಿಸಿದ ರಾತ್ರಿ ಮಲಗುವಾಗ ರಾಮನಿಗೆ ಗ್ಲೂಕೂಸ್ ಇಡಲಾಗಿತ್ತು ಅವನ ಅಮ್ಮ ಅದು ಮುಗಿಯುವುದನ್ನೇ ಕಾಯುತ್ತಿದ್ದರು. ಎರಡು ದಿವಸ ನಿದ್ದೆ ಇಲ್ಲದ ಕಾರಣ ಆ ತಾಯಿ ಬೇಗ ನಿದ್ದೆ ಹೊಂದಿದಳು.

ಇಲ್ಲಿ ರಾಮನ ಗ್ಲೂಕೋಸ್ ಮುಗಿದು ರಕ್ತ ಗ್ಲೂಕೋಸ್ ಬಾಟಲ್ ಗೆ ವಾಪಸ್ ಹೋಗುವುದನ್ನು ಗಮನಿಸಿದ ರಹೀಮನ ಅಮ್ಮ ಕೂಡಲೆ ಓಡಿ ಹೋಗಿ ದಾದಿಯರನ್ನು ಕರೆ ತಂದು ಅದನ್ನು ಸರಿ ಪಡಿಸುತ್ತಾರೆ. ಆಗ ರಾಮನ ಅಮ್ಮನನ್ನು ಎಬ್ಬಿಸಲು ಹೊರಟ ದಾದಿಗೆ ರಹೀಮನ ಅಮ್ಮ ಹೇಳುತ್ತಾರೆ ಪಾಪ ಎರಡು ದಿನದಿಂದ ಮಲಗಿಲ್ಲ ಅವರು ಮಲಗಲಿ, ಇದನ್ನು ನಾನು ನೋಡಿಕೊಳ್ಳುತ್ತೇನೆ ಎಂದರು.

ಬೆಳಿಗ್ಗೆ ಬೇಗನೇ ಎದ್ದ ರಾಮನ ಅಮ್ಮ ಪಕ್ಕದ ಕ್ಯಾಂಟೀನ್ ಗೆ ತಿಂಡಿ ತರಲು ಹೋಗುವಾಗ ರಹೀಮನ ಅಮ್ಮನ ತರ್ಮಾಸ್ ಕೈಯಲ್ಲಿ ಹಿಡಿದು ಕೇಳುತ್ತಾರೆ ನಿಮಗೆ ಏನು ತಿಂಡಿ ತರಲಿ ಎಂದು? ಎಂತಹ ಪ್ರೀತಿ ಎಂತಹ ಅನ್ಯೋನ್ಯತೆ.
ಈ ಘಟನೆ ಇಲ್ಲಿ ಯಾಕೆ ಬರೆದೆನೆಂದರೆ “ಜಾತಿ ಧರ್ಮಕ್ಕೊಸ್ಕರ ಹೊಡೆದಾಡುವವರು ಗಮನಿಸಲಿಕ್ಕೋಸ್ಕರ”. ಮರು ದಿವಸ ಬಂದ ಒಂದು ಕ್ರಿಶ್ಚಿಯನ್ ಹುಡುಗನ ತಂದೆ ಅವರ ಮಗ ಐಸ್ ಕ್ರೀಮ್ ಕೇಳಿದಾಗ ಮೂರು ಮಕ್ಕಳಿಗೂ ತಂದು ಕೊಟ್ಟರು.

ಆ ಜನರಲ್ಲಿ ಕಷ್ಟ ಇತ್ತು ನೋವು ಇತ್ತು ಹಾಗೆನೇ ಅವರು ಇನ್ನೊಬ್ಬರ ನೋವನ್ನು ಅರಿತರು. ಇಲ್ಲಿ ಜನರಿಗೆ ಕಷ್ಟ ನೋವುಗಳು ದೂರವಾಗಿದೆ ಹಾಗೆ ಪ್ರೀತಿ ಕಡಿಮೆಯಾಗಿದೆ.

ಅತ್ಮೀಯ ಬಂಧುಗಳೇ ನಾವು ಇನ್ನೊಬ್ಬರ ನೋವನ್ನು ಅರಿಯಲು ಪ್ರಯತ್ನಿಸುವ. ನಮ್ಮಿಂದ ಆದಷ್ಟು ಸಹಾಯ ಮಾಡಲು ಪ್ರಯತ್ನಿಸುವ. ಆಗ ನಮ್ಮ ಬಾಳು ಪಾವನವಾಗುವುದು. ನಾವು ಭಾರತೀಯರಾಗೋಣ ಜೊತೆಗೆ ನಮ್ಮ ಮಕ್ಕಳನ್ನು ಭಾರತೀಯರಾಗಿಯೇ ಬೆಳೆಸೋಣ.
ಇತೀ ನಿಮ್ಮ ಪೊನ್ನೋಡಿಯವ
(ಇದು ಕತೆಯಲ್ಲ ಘಟನೆ)

-ಪುನ್ನೊಡಿ

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *