ಗರ್ಭಪಾತ ಇಸ್ಲಾಮಿಕ್ ಶರೀಅತ್‍ನಲ್ಲಿ


ಡಾ. ಮುಹಮ್ಮದ್ ಶಾಜಹಾನ್ ನದ್ವಿ
ಗರ್ಭದಲ್ಲಿರುವ ಭ್ರೂಣವನ್ನು ಇಲ್ಲದಾಗಿಸುವ ಪ್ರಕ್ರಿಯೆ ಬ್ರೂಣ ಹತ್ಯೆಯಾಗಿದೆ. ಸಾಮಾನ್ಯವಾಗಿ ಗರ್ಭಧಾರಣೆಯ ಮೊದಲ 28 ವಾರಗಳೊಳಗೆ ಇದು ನಡೆಯುತ್ತದೆ. ಭ್ರೂಣ ಹತ್ಯೆ ಸ್ವಭಾವವನ್ನು ಪರಿಗಣಿಸಿ ಅದನ್ನು ಹಲವು ವಿಧದಲ್ಲಿ ವಿಭಾಗಿಸಲಾಗಿದೆ. ಇವುಗಳಲ್ಲಿ ಸಹಜವಾಗಿ ನಡೆದು ಬಿಡುವ ಗರ್ಭಪಾತ ಮತ್ತು ಪ್ರಜ್ಞಾ ಪೂರ್ವಕ ಮಾಡುವ ಗರ್ಭಪಾತ ಎನ್ನುವುದಿದೆ. ಮಹಿಳೆಯ ಅರಿವಿಗೆ ಬಾರದೆ ನಡೆಯುವ ಗರ್ಭಪಾತ, ಭ್ರೂಣಕ್ಕೆ ಬೆಳೆಯಲು ಬೇಕಾದ ಘಟಕಗಳು ಗರ್ಭಾಶಯದಲ್ಲಿ ಪೂರ್ತಿಗೊಳ್ಳದಿರುವುದು, ಮಹಿಳೆಯ ಪ್ರತ್ಯುತ್ಪಾದನಾ ವ್ಯವಸ್ಥೆಯ ತೊಂದರೆಗಳು, ಎಚ್ಚು ಭಾರದ ಕೆಲಸ ಮಾಡುವುದು, ಮಾನಸಿಕ ಒತ್ತಡ, ಗರ್ಭ ಮತ್ತು ಗರ್ಭಸ್ಥ ಶಿಶುವನ್ನು ದೋಷಕರವಾಗಿ ಬಾಧಿಸುವ ಮದ್ದುಗಳ ಉಪಯೋಗ ಮುಂತಾದುವು ಅದಕ್ಕೆ ಕಾರಣವಾಗಿದೆ. ಅಥವಾ ಬಾಹ್ಯವಾದ ಯಾವುದೇ ಹಸ್ತಕ್ಷೇಪಗಳಿಲ್ಲದೆ ಗರ್ಬಿüಣಿಯಾದ ಮಹಿಳೆ, ಭ್ರೂಣಕ್ಕೆ
ತಗಲಿದ ರೋಗಕ್ಕೆ ಸಂಬಂಧಿಸಿ ಆಂತರಿಕ ಕಾರಣಗಳಿಂದಾಗಿ ಗರ್ಭಪಾತವಾಗುತ್ತದೆ.
ಆ ರೀತಿ ಚಿಕಿತ್ಸೆಯ ಭಾಗವಾಗಿ ಗರ್ಭಪಾತ(Therapeutic abortion) ಮಾಡಲಾಗುತ್ತದೆ. ಗರ್ಭ ತಾಯಿಯ ಜೀವಕ್ಕೆ ಅಪಾಯಕಾರಿಯಾಗುವ ಪರಿಸ್ಥಿತಿಯಲ್ಲಿ ಸಾಮಥ್ರ್ಯ ಯೋಗ್ಯತೆ ಇರುವ ವೈದ್ಯರ ನಿರ್ದೇಶ ಪ್ರಕಾರ ಹೀಗೆ ಮಾಡಲಾಗುತ್ತದೆ.
ಕಾನೂನು ಬಾಹಿರ ರೀತಿಯಲ್ಲಿ ಅರಿವಿದ್ದೂ ಗರ್ಭಪಾತ ಮಾಡಿಸಿಕೊಳ್ಳುವುದನ್ನು ಪ್ರಜ್ಞಾ ಪೂರ್ವಕ ಗರ್ಭಪಾತ ಎನ್ನಲಾಗುತ್ತದೆ. ಯಾವುದಾದರೂ ರೀತಿಯ ಮದ್ದುಗಳನ್ನು ಕೊಟ್ಟು ಅಥವಾ ಯೋನಿಯ ಮೂಲಕ ಗಟ್ಟಿಯಾದ ಯಾವುದೋ ವಸ್ತುಗಳನ್ನು ಪ್ರವೇಶಿಸುವ ಮೂಲಕ ಭ್ರೂಣ ನಾಶ ಮಾಡುವ ರೀತಿಯಿದು. ಮಾನವರ ಸಮರ್ಥನೆಯ ಕಾರಣಗಳಿಂದ ಗರ್ಭಪಾತ ನಡೆಸುವುದು ಮಾತ್ರ ಇದರ ಉದ್ದೇಶವಾಗಿದೆ. ಅನೈತಿಕ ಸಂಬಂದ, ಅತ್ಯಾಚಾರದಿಂದಾದ ಗರ್ಭವನ್ನು ಯಾರಿಗೂ ಗೊತ್ತಾಗದಿರಲು ಮುಂತಾದ ಕಾರಣಗಳನ್ನು ಗರ್ಭಪಾತಕ್ಕೆ ನೀಡಲಾಗುತ್ತದೆ. ಇದನ್ನು ಸಮಾಜಿಕ ಗರ್ಭಪಾತ ಎಂದು ಕರೆಯಲೂಬಹುದಾಗಿದೆ. ಅಪ್ರಾಪ್ತ ಹೆಣ್ಣು ಮಕ್ಕಳ ರಕ್ಷಣೆ, ತಮ್ಮ ಇಚ್ಛೆಗೆ ವಿರುದ್ಧವಾಗಿ ಬೆಳೆದ ಗರ್ಭವನ್ನು ತೆಗೆಸುವುದು ಮುಂತಾದ ಸಮರ್ಥನೆಗಳನ್ನು ಇದಕ್ಕೆ ನೀಡಲಾಗುತ್ತದೆ. ಇದಕ್ಕೆಂದೆ ಕ್ಲಿನಿಕ್ ಇಟ್ಟುಕೊಂಡು ದೊಡ್ಡ ಶುಲ್ಕ ವಸೂಲಿ ಮಾಡುವ ವೈದ್ಯರು ಇದ್ದಾರೆ.
ಶರೀಅತ್ ಏನು ಹೇಳುತ್ತದೆ?:
ಗರ್ಭಪಾತಕ್ಕೆ ಸಂಬಂಧಿಸಿದ ಇಸ್ಲಾಮಿಕ್ ಶರೀಅತ್ ವಿಧಿಗಳನ್ನು ನಾವು ಇಲ್ಲಿ ಅವಲೋಕಿಸೋಣ.
1. ಮೂಲಭೂತವಾಗಿ ಗರ್ಭಪಾತ ನಿಷಿದ್ಧವಾಗಿದೆ.
2. ಗರ್ಭಧಾರಣೆಯ ಆರಂಭದ ದಿಕ್ಕಿನಿಂದ ಹಿಡಿದು ಭ್ರೂಣ ಬೆಳೆಯುವ ಎಲ್ಲ ಘಟ್ಟಗಳಲ್ಲಿ ಗರ್ಭಪಾತ ನಿಷಿದ್ಧವಾಗಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಅದಕ್ಕೆ ಬಹಳಷ್ಟು ಪುರಾವೆಗಳಿವೆ.
ಅಲ್ಲಾಹನು ಹೇಳುತ್ತಾನೆ: “ನಿಮ್ಮ ಮಕ್ಕಳನ್ನು ಬಡತನದ ಭೀತಿಯಿಂದ ಕೊಲ್ಲಬೇಡಿರಿ. ನಾವು ಅವರಿಗೂ ಆಹಾರ ನೀಡುವೆವು. ನಿಮಗೂ ನೀಡುವೆವು. ವಾಸ್ತವದಲ್ಲಿ ಅವರ ವಧೆಯು ಒಂದು ಘೋರ ಅಪರಾಧವಾಗಿದೆ.” ( ಬನೀ ಇಸ್ರಾಯೀಲ್:31)
ಇನ್ನೊಂದು ಕಡೆಯಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ: ” ನಿಮ್ಮ ಮಕ್ಕಳನ್ನು ದಾರಿದ್ರ್ಯದ ಭಯದಿಂದ ವಧಿಸಬೇಡಿರಿ. ನಾವು ನಿಮಗೂ ಜೀವನೊಪಾಧಿಯನ್ನು ನೀಡುತ್ತೇವೆ ಅವರಿಗೂ ನೀಡುವೆವು.” (ಅಲ್ ಅನ್‍ಆಂ:151)
ಆರ್ಥಿಕ ಪರಾಧೀನತೆ ಅಥವಾ ಬಡತನಕ್ಕೆ ಹೆದರಿ ಮಕ್ಕಳನ್ನು ಕೊಲ್ಲುವುದನ್ನು ಮೇಲಿನ ಸೂಕ್ತಗಳು ನಿಷೇಧಿಸಿದೆ. ಉನ್ನತವಾದ ದೈವಿಕ ಯುಕ್ತಿಯನ್ನು ಮನಸ್ಸಿಗೆ ಅದು ವರ್ಗಾಯಿಸುತ್ತದೆ. ಒಂದನೆಯದಾಗಿ ವಿವರಿಸಲಾದ ಸೂಕ್ತದಲ್ಲಿ ಮಾತಾಪಿತರ ಅನ್ನವನ್ನು ಪರಾಮರ್ಶಿಸುವ ಮೊದಲು ಮಕ್ಕಳ ಆಹಾರದ ಕುರಿತು ಹೇಳಲಾಗಿದೆ. ಬಡವರನ್ನು ಅದು ಅಭಿಸಂಬೋಧಿಸುತ್ತದೆ. ಮಕ್ಕಳಿಂದಾಗಿ ಖರ್ಚು ಹೆಚ್ಚಾಗಿ ಅದು ಬಡತನವನ್ನು ತಂದು ಕೊಡಬಹುದೆನ್ನುವ ಹೆದರಿಕೆಯಿಂದ ಕೊಲ್ಲುವವರಲ್ಲಿ ಹೇಳಲಾಗಿದೆ. ಆದರೆ ಎರಡನೆ ಸೂಕ್ತ ಅಭಿಸಂಬೊಧನೆ ಮಾಡುವುದು ಬಡವರನ್ನು ಆಗಿದೆ. ಅವರು ಬಡತನ ಮತ್ತು ಕಷ್ಟಗಳಿಂದ ಅವರು ಬದುಕುತ್ತಿದ್ದಾರೆ. ತಮ್ಮ ಬಡತನ ಹೆಚ್ಚಿಸುವುದಕ್ಕೆ ಮಕ್ಕಳು ಕಾರಣವಾಗುವರು ಎಂದು ಭಾವಿಸುವವರು ಅವರು.
3. ರೂಹ್(ಆತ್ಮ) ಊದಲ್ಪಡುವುದಕ್ಕಿಂತ ಮುಂಚೆ ನ್ಯಾಯವಾದ ಕಾರಣಗಳಿಲ್ಲದೆ ಗರ್ಭಪಾತ ಸಮ್ಮತಾರ್ಹವಲ್ಲ.
4. ಭ್ರೂಣಕ್ಕೆ ನಾಲ್ಕು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ಬೆಳವಣಿಗೆ ಆಗಿದ್ದರೆ ಗರ್ಭಪಾತ ಅನುವದನೀಯವಲ್ಲ.
5. ಮಾತೆಯ ಜೀವ ಅಪಾಯದಲ್ಲಾಗುವ ಸಂದರ್ಭದಲ್ಲಿ ತಾಯಿಯನ್ನು ಪಾರು ಮಾಡುವುದಕ್ಕಾಗಿ ಎರಡು ದೋಷಗಳಲ್ಲಿ ಚಿಕ್ಕ ದೋಷವನ್ನು ಆಯ್ಕೆ ಮಾಡಬಹುದೆನ್ನುವ ನೆಲೆಯಲ್ಲಿ ಗರ್ಭಪಾತ ಸಮ್ಮತಾರ್ಹವಾಗಿದೆ. ಯಾಕೆಂದರೆ ತಾಯಿ ಓರ್ವ ಸ್ವತಂತ್ರ ಜೀವಿಯಾಗಿದ್ದಾಳೆ.

Check Also

`ನಾಲ್ವರು ಖಲೀಫರೇ ನನ್ನ ಆದರ್ಶ’: ಅಗಲಿದ ಬಿ.ಎ. ಮೊಹಿದೀನ್ ಸ್ಮರಣೆ

ಮಾಜಿ ಉನ್ನತ ಶಿಕ್ಷಣ ಸಚಿವ, ಸಜ್ಜನ ರಾಜಕಾರಣಿ, ಮುಸ್ಲಿಮ್ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಧ್ವನಿಯಾಗಿದ್ದ ಬಿ.ಎ. ಮೊಹಿದೀನ್ (81) …

Leave a Reply

Your email address will not be published. Required fields are marked *