ಎಲ್ಲಾ ಜೈವಿಕ ಕ್ರಿಯೆಗಳಿಗೆ ಅನುವು ಮಾಡುವ ಕಿಣ್ವಗಳು (ENZYMES)

ಅಲ್ಲಾಹನ ನಿದರ್ಶನಗಳು:

ಒಂದು ವಾಕ್ಯವನ್ನು ಓದಲು ಕೆಲವು ಕ್ಷಣಗಳು ಸಾಕು. ಆದರೆ ದೇಹದಲ್ಲಿರುವ ಕಿಣ್ವಗಳು ಈ ಕೆಲಸವನ್ನು ಮಾಡಲು ವಿಫಲವಾದರೆ ಅದೇ ವಾಕ್ಯವನ್ನು ಓದಲು 1500 ವರ್ಷಗಳು ಬೇಕು. ಕಿಣ್ವಗಳು ಜೀವಕೋಶಗಳನ್ನು ಸಕ್ರಿಯಗೊಳಿಸಲು ಮತ್ತು ಪ್ರತಿಕ್ರಿಯೆಗಳ ವೇಗವನ್ನು 1010 (10 ಶತಕೋಟಿ)ಗಿಂತಲೂ ವೇಗವಾಗಿಸಲು ಕಾರ್ಯ ಪ್ರವೃತ್ತವಾಗುತ್ತವೆ.

ಕಿಣ್ವಗಳ ಅನುಪಸ್ಥಿತಿಯಲ್ಲಿ ಜೀವಕೋಶಗಳು ನಮ್ಮನ್ನು ಜೀವಂತವಾಗಿರಿಸಲು ನಿರ್ವಹಿಸಬೇಕಾದ ಕ್ರಿಯೆ ಮತ್ತು ಪ್ರಕ್ರಿಯೆಗಳನ್ನು ನಿಸ್ತೇಜಗೊಳಿಸಿ ಬಿಡುತ್ತವೆ ಮತ್ತು ಅವುಗಳು ಒಂದು ವಾಕ್ಯವನ್ನು ಓದಿ ಮುಗಿಸುವ ಮೊದಲೇ ಒಂದೊಂದಾಗಿ ಸಾಯುತ್ತವೆ. ತತ್ಪರಿಣಾಮವಾಗಿ ಒಂದು ವಾಕ್ಯವನ್ನು ಓದಿ ಮುಗಿಸುವ ಮೊದಲೇ ನಾವು ಮರಣ ಹೊಂದಿ ಬಿಡುತ್ತೇವೆ.

ಕಿಣ್ವಗಳು ಜೀವಕೋಶಗಳ ಎಲ್ಲಾ ಪ್ರತಿಕ್ರಿಯೆಗಳನ್ನು ಕೈಗೊಳ್ಳುತ್ತವೆ. ಒಂದು ವೇಳೆ ಕಿಣ್ವಗಳು ನಿಶ್ಚಲವಾದಲ್ಲಿ ಅವುಗಳನ್ನು ಮೊದಲಿನಂತೆ ಕಾರ್ಯ ಪ್ರವೃತ್ತಗೊಳಿಸುವುದು ಬಹಳ ಕಷ್ಟಕರ ಕಾರ್ಯ. ಇಂದು ವೈದ್ಯಕೀಯ, ತಂತ್ರಜ್ಞಾನ ಮತ್ತು ವಿಜ್ಞಾನವು ಪ್ರಗತಿಯ ಪಥದಲ್ಲಿ ಬೆಳೆದಿದ್ದರೂ ಕೂಡಾ ಈ ವ್ಯವಸ್ಥೆಗೆ ಪೂರಕವಾದುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ವಿಕಾಸ ಶಾಸ್ತ್ರಜ್ಞರು ಇಂತಹ ಅದ್ಭುತ ವ್ಯವಸ್ಥೆಯು ತನ್ನಿಂತಾನೇ ಆದುದು ಎನ್ನುತ್ತಾರೆ. ಆದರೆ ಇಷ್ಟೊಂದು ಪಾಂಡಿತ್ಯ ಮತ್ತು ಜ್ಞಾನವುಳ್ಳ ವಿಜ್ಞಾನಿಗಳಿಗೂ ಕೂಡಾ ಕಿಣ್ವಗಳಷ್ಟು ವೇಗವಾಗಿ ಕಾರ್ಯನಿರತವಾಗುವ ಪರ್ಯಾಯ ವ್ಯವಸ್ಥೆಯನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ.

ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಪ್ರಕ್ರಿಯೆಗಳು ಉದಾಹರಣೆಗೆ ಸಂತಾನೋತ್ಪತಿ, ನಿಯಂತ್ರಣ, ನಕಲುಗಳಂತಹವುಗಳು ಪವಾಡ ಸದೃಶ್ಯ ಪ್ರೋಟೀನ್‍ಗಳ ಅಂಶಗಳಿಂದವೆಂದು ತನಗರಿವಿಲ್ಲದ ಜ್ಞಾನದಿಂದ ವಿಶ್ಲೇಷಿಸುವುದು ನಿಜವಾಗಿಯೂ ತರ್ಕಕ್ಕೆ ನಿಲುಕದ ವಿಚಾರವಾಗಿದೆ. ಒಂದು ವೇಳೆ ಪವಾಡ ಸದೃಶವೇ ಆಗಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ಒಂದೇ ರೀತಿಯ ಪ್ರತಿಕ್ರಿಯೆಗಳು ನಡೆಯುವುದು ಅಸಾಧ್ಯದ ಮಾತು. ಪ್ರತಿಯೊಬ್ಬ ಸ್ತ್ರೀ-ಪುರುಷರ ದೇಹದಲ್ಲಿ ಕಿಣ್ವಗಳನ್ನು ಆ ಸೃಷ್ಟಿಕರ್ತನಾದ ಅಲ್ಲಾಹನು ಇರಿಸಿರುವಾಗ ಅವುಗಳ ಕುರಿತು ತಿಳಿಯಬೇಕಾದ, ಕುರ್‍ಆನಿನ ಮಾರ್ಗದಲ್ಲಿ ವಿಶ್ಲೇಷಿಸಬೇಕಾದ ಅಗತ್ಯತೆಗಳಿವೆ.

“ಅಲ್ಲಾಹನು ಆಕಾಶದಲ್ಲೂ ಭೂಮಿಯಲ್ಲೂ ಇರುವ ಸಕಲ ವಸ್ತುಗಳನ್ನು ನಿಮಗೆ ಅಧೀನಗೊಳಿಸಿರುವುದನ್ನೂ ತನ್ನ ಪ್ರತ್ಯಕ್ಷ ಹಾಗೂ ರಹಸ್ಯ ಅನುಗ್ರಹಗಳನ್ನು ನಿಮಗೆ ಪೂರ್ತಿಗೊಳಿಸಿ ಕೊಟ್ಟಿರುವುದನ್ನೂ ನೀವು ನೋಡುತ್ತಿಲ್ಲವೇ? ಹೀಗಿದ್ದೂ ಮಾನವರಲ್ಲಿ ಕೆಲವರು ತಮ್ಮ ಬಳಿ ಯಾವುದೇ ಜ್ಞಾನವಾಗಲಿ, ಸನ್ಮಾರ್ಗದರ್ಶನವಾಗಲಿ ಬೆಳಕು ತೋರಿಸುವ ಯಾವುದಾದರೂ ಗ್ರಂಥವಾಗಲಿ ಇಲ್ಲದೆ ಅಲ್ಲಾಹನ ವಿಷಯದಲ್ಲಿ ಜಗಳಾಡುತ್ತಾರೆ.” (ಪವಿತ್ರ ಕುರ್‍ಆನ್ 31: 20)

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *