ಅಸ್ಸಾಮ್ ಮುಸ್ಲಿಮರ ನಾಗರಿಕತೆ ಪ್ರಶ್ನೆ ಖಂಡನೀಯ: ಜಮಾಅತ್

ಹೊಸದಿಲ್ಲಿ, ಜ.13: ಅಸ್ಸಾಮ್ ಮುಸ್ಲಿಮರ ಪೌರತ್ವ ವಿಷಯದಲ್ಲಿ ನ್ಯಾಶನಲ್ ರಿಜಿಸ್ಟರ್ ಆಫ್ ಸಿಟಿಝನ್ (ಎನ್‍ಆರ್‍ಸಿ) ಹೊರ ತಂದ ಲೆಕ್ಕಗಳು ಕಳವಳಕಾರಿಯಾದುದು ಮತ್ತು ಖಂಡನೀಯವೂ ಆಗಿದೆ ಎಂದು ಜಮಾಅತೆ ಇಸ್ಲಾಮಿ ತಿಳಿಸಿದೆ. 3.3 ಕೋಟಿ ಅರ್ಜಿದಾರರಲ್ಲಿ ಈ ವರೆಗೆ 1.9 ಕೋಟಿ ಮಂದಿಯನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

1.4 ಕೋಟಿ ಮಂದಿಯ ನಾಗರಿಕತೆ ತ್ರಿಶಂಕು ಸ್ಥಿತಿಯಲ್ಲಿದೆ. ಬಡವರಾದ ಹಲವರಲ್ಲಿ ಸರಿಯಾದ ದಾಖಲೆಗಳಿಲ್ಲ. ಬಹುತೇಕ ದಾಖಲೆಗಳಿಲ್ಲದ ಸಣ್ಣ ತಪ್ಪುಗಳಿಗಾಗಿ ವಲಸೆಗಾರರಾಗಿ ಘೋಷಿಸುವುದು ಸರಿಯಲ್ಲ. ಪ್ರಜೆಗಳ ಪಟ್ಟಿ ತಯಾರಿಸುವುದಕ್ಕಿರುವ ಸರಕಾರಿ ಏಜೆನ್ಸಿಗಳು ತಮ್ಮ ಹೊಣೆಗಳನ್ನು ಎಚ್ಚರ ಮತ್ತು ನಿಷ್ಪಕ್ಷಪಾತದಿಂದ ನಿರ್ವಹಿಸಬೇಕಾಗಿದೆ.

ಅಸ್ಸಾಂ ಮುಸ್ಲಿಮರ ಪೌರತ್ವದ ವಿಷಯದಲ್ಲಿ ವಿದ್ಯಾಭ್ಯಾಸ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಅಗತ್ಯವಾದ ಸಹಾಯ ಒದಗಿಸಲು ಮೂರು ಸದಸ್ಯರ ಸಮಿತಿಯನ್ನು ನಿಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮೀ ಅಖಿಲ ಭಾರತ ಅಧ್ಯಕ್ಷ ಜಲಾಲುದ್ದೀನ್ ಉಮರಿ ಹೇಳಿದರು. ಪುಣೆಯಲ್ಲಿ ದಲಿತರ ವೇಲಾದ ದಾಳಿ ಯೋಜನಬದ್ಧವಾದುದು.

ದೇಶದ ಮೂಲಭೂತ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಹರಡುವುದಕ್ಕಾಗಿ ಸರಕಾರಿ ಸಹಾಯದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ವಿರುದ್ಧ ದಾಳಿ ಹೆಚ್ಚುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ ಸಲೀಂ ಇಂಜಿನಿಯರ್ ಹೇಳಿದ್ದಾರೆ.

Check Also

ಮಕ್ಕಳನ್ನು ಕಳಕೊಂಡ ಅಮ್ಮಂದಿರಿಂದ ನ್ಯಾಯ ಕೇಳಿ ಪ್ರತಿಭಟನೆ

ಹೊಸದಿಲ್ಲಿ, ಅ.17: ಎಬಿವಿಪಿ ಕಾರ್ಯಕರ್ತರ ಹಲ್ಲೆಯ ಬಳಿಕ ಕಾಣೆಯಾದ ಜೆಎನ್‍ಯು ವಿದ್ಯಾರ್ಥಿ ನಜೀಬ್ ಅಹ್ಮದ್‍ರಿಗೆ ನ್ಯಾಯ ಕೇಳಿ ಯುನೈಟೆಡ್ ಅಗೈನ್ಸ್‍ಟ್ …

Leave a Reply

Your email address will not be published. Required fields are marked *